ಬಿಲಿಯನ್ ಗಟ್ಟಲೆ ಪೌಂಡ್ ನ ಕನಸು ಕಾಣುತ್ತಿರಿ: ಪತ್ರಕರ್ತರಿಗೆ ಮಲ್ಯ ಗೇಲಿ

ಭಾರತ ಸರ್ಕಾರಕ್ಕೆ ಹಸ್ತಾಂತರಗೊಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಿದ್ದ ವಿಜಯ್ ಮಲ್ಯ. ನ್ಯಾಯಾಲಯದ ಹೊರಗೆ ಕಾದು ಕುಳಿತಿದ್ದ ಪತ್ರಕರ್ತರಿಗೆ ಮಾತಿನಲ್ಲೇ ಕಾಲೆಳೆದ ಮದ್ಯದ ದೊರೆ.

ಲಂಡನ್, ಜೂನ್ 13: ''ನೀವು ಬಿಲಿಯನ್ ಗಟ್ಟಲೆ ಪೌಂಡ್ ಮೌಲ್ಯದ ಕನಸು ಕಾಣುತ್ತಿರಿ'' - ಇದು ಭಾರತದ ಉದ್ಯಮಿ ವಿಜಯ್ ಮಲ್ಯ, ಪತ್ರಕರ್ತರನ್ನು ಗೇಲಿ ಮಾಡಿದ ರೀತಿ.

ಭಾರತೀಯ ಬ್ಯಾಂಕುಗಳಿಗೆ ಕೋಟಿಗಟ್ಟಲೆ ಸಾಲ ಬಾಕಿ ಉಳಿಸಿಕೊಂಡು ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ನ್ಯಾಯಾಲಯಕ್ಕೆ ವಿಚಾರಣೆಗೆ ಅವರು ಹಾಜರಾಗಿದ್ದರು.

ತಮ್ಮ ಪುತ್ರ ಸಿದ್ದಾರ್ಥ್ ಮಲ್ಯ ಜತೆಗೆ ನ್ಯಾಯಾಲಯಕ್ಕೆ ಆಗಮಿಸಿದ್ದ ವಿಜಯ್ ಮಲ್ಯ, ವಿಚಾರಣೆ ಮುಗಿದ ನಂತರ ನ್ಯಾಯಾಲಯದಿಂದ ಹೊರಬಂದರು.

'Keep Dreaming About Billions Of Pounds': Vijay Mallya Outside UK Court

ಆ ಸಂದರ್ಭದಲ್ಲಿ ತಮ್ಮನ್ನು ಪ್ರಶ್ನಿಸಲು ಬಂದಿದ್ದ ಪತ್ರಕರ್ತರಿಗೆ ಪ್ರತ್ಯುತ್ತರ ನೀಡಿದ ಮಲ್ಯ, ನೀವು ಬಿಲಿಯನ್ ಪೌಂಡ್ ಮೌಲ್ಯದ ಕನಸು ಕಾಣುತ್ತಿರಿ ಎಂದು ಗೂಡಾರ್ಥದ ಮಾತುಗಳನ್ನು ಹೇಳಿ ಹೊರಟರು.

ಲಂಡನ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಭಾರತ ತಂಡದ ಪಂದ್ಯವನ್ನು ನೋಡಲು ಕ್ರೀಡಾಂಗಣಕ್ಕೆ ಬಂದಿದ್ದ ಮಲ್ಯ ಅವರನ್ನು ಕೆಲ ಪ್ರೇಕ್ಷಕರು ಕಳ್ಳ.. ಕಳ್ಳ ಎಂದು ಮೂದಲಿಸಿದ್ದರು.

ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಲ್ಯ, ಯಾರೋ ಒಂದಿಬ್ಬರು ಕುಡುಕರು ಹಾಗೆ ಹೇಳಿದರು. ಆದರೆ, ನೀವು ಮಾಧ್ಯಮದವರು ಅದನ್ನೇ ಹೈಲೈಟ್ ಮಾಡಿದಿರಿ. ಕ್ರೀಡಾಂಗಣಕ್ಕೆ ನಾನು ಪ್ರವೇಶಿಸಿದ ಕೂಡಲೇ ಹಲವಾರು ಮಂದಿ ನನಗೆ ಶುಭಕಾಮನೆ ಸಲ್ಲಿಸಿದರು. ಇದನ್ನು ಎಲ್ಲೂ ನೀವು ಹೇಳಲಿಲ್ಲ ಎಂದು ಬೇಸರಿಸಿ ಹೊರಟು ಹೋದರು.

ಹಾಗೆ ಹೋಗುವ ಮುನ್ನ, ಭಾರತೀಯ ಬ್ಯಾಂಕುಗಳಿಗೆ ಸಾಲ ಬಾಕಿ ಉಳಿಸಿಕೊಂಡಿರುವ ಆರೋಪದಲ್ಲಿ ಹುರುಳಿಲ್ಲ. ನಾನು ನಿರಪರಾಧಿ. ಇದನ್ನು ಸಾಬೀತುಪಡಿಸಲು ನನ್ನಲ್ಲಿ ಹಲವಾರು ಸಾಕ್ಷ್ಯಾಧಾರಗಳಿವೆ ಎಂದರು.

ಅಂದಹಾಗೆ, ಕೋರ್ಟಿನಲ್ಲಿ ಮುಂದಿನ ವಿಚಾರಣೆಗೆ ಹಾಜರಾಗುವಾಗ ಮಾಧ್ಯಮಗಳಿಂದ ತಮ್ಮನ್ನು ದೂರ ಇರುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ನ್ಯಾಯಾಧೀಶರದಲ್ಲಿ ಮನವಿ ಮಾಡಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 16ಕ್ಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+