Karachi Attack : ಕರಾಚಿ ಪೊಲೀಸ್ ಠಾಣೆ ದಾಳಿ: 5 ಪಾಕಿಸ್ತಾನ್ ಉಗ್ರರು ಸೇರಿದಂತೆ 9 ಮಂದಿ ಸಾವು!
ಕರಾಚಿ ಪೊಲೀಸ್ ಮುಖ್ಯಸ್ಥರ ಮುಖ್ಯ ಕಚೇರಿಯ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಐವರು ಭಯೋತ್ಪಾದಕರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ.
ತೆಹ್ರೀಕ್-ಎ-ತಾಲಿಬಾನ್
(ಪಾಕಿಸ್ತಾನ) ನ ಶಸ್ತ್ರಸಜ್ಜಿತ ಉಗ್ರರು ಶುಕ್ರವಾರ ಕರಾಚಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಕರಾಚಿ ಪೊಲೀಸ್ ಮುಖ್ಯಸ್ಥರ ಮುಖ್ಯ ಕಚೇರಿಯ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಐವರು ಭಯೋತ್ಪಾದಕರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. id="toptextpromo"> id='are-slot-1' class='oiad oi-axt oiadv'>ಗುಂಡಿನ
ದಾಳಿಯಲ್ಲಿ ಇಬ್ಬರು ಪೊಲೀಸ್ ಪೇದೆಗಳು, ರೇಂಜರ್ ಸಿಬ್ಬಂದಿ ಮತ್ತು ನಾಗರಿಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಕನಿಷ್ಠ ಎಂಟು ಶಸ್ತ್ರಸಜ್ಜಿತ ಉಗ್ರರು ಕರಾಚಿಯ ಶೇರಿಯಾ ಫೈಸಲ್‌ನಲ್ಲಿರುವ ಪೊಲೀಸ್ ಮುಖ್ಯಸ್ಥರ ಕಚೇರಿಯನ್ನು ಪ್ರವೇಶಿಸಿ ದಾಳಿ ಮಾಡಿದ್ದಾರೆ. id='are-slot-2' class='oiad oi-axt oiadv'>
5 ಉಗ್ರರನ್ನು ಸದೆಬಡೆದ ಭದ್ರತಾ ಪಡೆ
ಕಾರ್ಯಾಚರಣೆ ವೇಳೆ ಐವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಹಿರಿಯ ಭದ್ರತಾ ಮೂಲಗಳು ತಿಳಿಸಿವೆ. ಸುದೀರ್ಘ ಗುಂಡಿನ ಕಾಳಗದಲ್ಲಿ ಮೂವರು ಸಾವನ್ನಪ್ಪಿದರೆ ಇಬ್ಬರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದು ಕಟ್ಟಡದ ಒಂದು ಮಹಡಿಗೆ ಸ್ವಲ್ಪ ಹಾನಿಯಾಗಿದೆ. ಐದು ಅಂತಸ್ತಿನ ಪೊಲೀಸ್ ಮುಖ್ಯಸ್ಥರ ಕಚೇರಿಯ ಒಳಗಿನಿಂದ ಪ್ರಬಲ ಸ್ಫೋಟಗಳಿಂದಾಗಿ ಸಮೀಪದ ಕಟ್ಟಡಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ.

ಎಂಟು ಉಗ್ರಗಾಮಿಗಳಿಂದ ದಾಳಿ
ಸುಮಾರು ನಾಲ್ಕು ಗಂಟೆಗಳ ಕಾಲ ಕಟ್ಟಡವನ್ನು ಮುತ್ತಿಗೆ ಹಾಕಲಾಗಿತ್ತು. ಘಟನೆಯ ವಿಡಿಯೊಗಳು ವೈರಲ್ ಆಗಿವೆ. ವಿಡಿಯೋದಲ್ಲಿ ಹಲವಾರು ಸುತ್ತಿನ ಗುಂಡಿನ ಸದ್ದು ಕೇಳುತ್ತಿದೆ. ಕಟ್ಟಡದೊಳಗೆ ಸ್ಫೋಟ ಸಂಭವಿಸಿದ ಕ್ಷಣವನ್ನು ವೀಡಿಯೊ ತೋರಿಸುತ್ತದೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಎಂಟು ಉಗ್ರಗಾಮಿಗಳು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಸ್ವಯಂಚಾಲಿತ ಬಂದೂಕುಗಳನ್ನು ಬಳಸಿದ್ದಾರೆ. ದಾಳಿಯ ನಂತರ, ಕರಾಚಿ ಪೊಲೀಸರು ಮತ್ತು ಪಾಕಿಸ್ತಾನ ರೇಂಜರ್‌ಗಳು ಪ್ರದೇಶವನ್ನು ಸುತ್ತುವರೆದು ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಮುಖ್ಯಸ್ಥರ ಕಚೇರಿಯ ಪಕ್ಕದಲ್ಲಿರುವ ಸದ್ದಾರ್ ಪೊಲೀಸ್ ಠಾಣೆ ಮೇಲೂ ದಾಳಿ ನಡೆದಿದೆ.

ದಾಳಿ ಸ್ಥಳದಲ್ಲಿ ಎರಡು ಕಾರು ವಶ
ಕಟ್ಟಡದ ಹಿಂಭಾಗದ ಪ್ರವೇಶದ್ವಾರದಲ್ಲಿ ಮತ್ತು ಮುಂಭಾಗದಲ್ಲಿ ಬಾಗಿಲು ತೆರೆದಿರುವ ಎರಡು ಕಾರುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಶುಕ್ರವಾರ ರಾತ್ರಿ 7.10ರ ಸುಮಾರಿಗೆ ಉಗ್ರರು ಇದೇ ಕಾರಿನಿಂದ ಬಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ, ದಕ್ಷಿಣ ವಿಭಾಗದ ಡಿಐಜಿ ಇರ್ಫಾನ್ ಬಲೂಚ್ ತಿಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳವು ಎರಡೂ ಕಾರುಗಳಲ್ಲಿ ಸ್ಫೋಟಕ ಸಾಧನಗಳು ಮತ್ತು ಭಯೋತ್ಪಾದಕರ ಆತ್ಮಹತ್ಯಾ ಬಟ್ಟೆಗಳನ್ನು ವಶಪಡಿಸಿಕೊಂಡಿದೆ ಎಂದು ಬಲೂಚ್ ಹೇಳಿದರು.

ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ದಾಳಿ
ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು ಘಟನೆಯ ಬಗ್ಗೆ ಮಾತನಾಡಿ, ಪೊಲೀಸ್ ಮುಖ್ಯಸ್ಥರ ಕಚೇರಿಯ ಮೇಲಿನ ದಾಳಿಯನ್ನು ಸ್ವೀಕಾರಾರ್ಹವಲ್ಲ. ಹೆಚ್ಚುವರಿ ಐಜಿ ಕಚೇರಿಯ ಮೇಲಿನ ದಾಳಿಯ ಹಿಂದಿನ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ನಾನು ಬಯಸುತ್ತೇನೆ ಎಂದು ಮುರಾದ್ ಅಲಿ ಶಾ ಹೇಳಿದ್ದಾರೆಂದು ಡಾನ್ ವರದಿ ಮಾಡಿದೆ.
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಟಿಟಿಪಿ ಮತ್ತು ಸರ್ಕಾರದ ನಡುವಿನ ಕದನ ವಿರಾಮ ಒಪ್ಪಂದವು ಮುರಿದುಬಿದ್ದ ನಂತರ, ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಮತ್ತು ದೇಶದ ವಿವಿಧ ಭಾಗಗಳಲ್ಲಿನ ಮಸೀದಿಗಳು ಮತ್ತು ಮಾರುಕಟ್ಟೆಗಳ ಮೇಲೆ ದಾಳಿಯನ್ನು ಹೆಚ್ಚಿಸಿದ್ದಾರೆ.












Click it and Unblock the Notifications