ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಭಾರತೀಯ ಮೂಲದ ಮಹಿಳೆ, ಅಮೆರಿಕ ಅಧ್ಯಕ್ಷೆಯಾಗಲು ಅರ್ಹ!

By Mahesh
|
Google Oneindia Kannada News

ವಾಷಿಂಗ್ಟನ್, ನವೆಂಬರ್ 13: ಭಾರತ ಮೂಲದ ಕ್ಯಾಲಿಪೋರ್ನಿಯ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಅಮೆರಿಕದ ಪ್ರಥಮ ಅಧ್ಯಕ್ಷೆಯಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಹಿಲರಿ ಕ್ಲಿಂಟನ್ ಅವರಿಗೆ ದಕ್ಕದ ಅಧ್ಯಕ್ಷೆ ಪಟ್ಟ ಮುಂದೊಂದು ದಿನ ಕಮಲಾ ಅವರ ಪಾಲಾದರೂ ಅಚ್ಚರಿಪಡಬೇಕಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಅಮೆರಿಕದ ಪ್ರಥಮ ಮಹಿಳಾ ಅಧ್ಯಕ್ಷರಾಗುವ ಅವಕಾಶ ಹಿಲರಿ ಕ್ಲಿಂಟನ್‌ ಅವರ ಕೈತಪ್ಪಿದೆ. ರಿಪಬ್ಲಿಕನ್ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಲು ಆಯ್ಕೆಯಾಗಿದ್ದಾರೆ. ಜತೆಗೆ ಭಾರತದ ಜತೆ ಸಂಬಂಧ ಹೊಂದಿರುವ ಕಮಲಾ ಹ್ಯಾರಿಸ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Indian-origin Kamala Harris has potential to be first woman US Prez: Report

51 ವರ್ಷದ ಕಮಲಾ ಹ್ಯಾರಿಸ್‌ ಅವರ ತಾಯಿ ಚೆನ್ನೈ ಮೂಲದವರು ಹಾಗೂ ತಂದೆ ಜಮೈಕಾದವರು. ಕಳೆದ ಮಂಗಳವಾರ ನಡೆದ ಚುನಾವಣೆಯಲ್ಲಿ ಕ್ಯಾಲಿಫೋರ್ನಿಯಾದಿಂದ ಅಮೆರಿಕದ ಸೆನೆಟ್‌ ಗೆ ಕಮಲಾ ಆಯ್ಕೆಯಾಗಿದ್ದಾರೆ. ಆ ಮೂಲಕ ಆಯ್ಕೆಯಾದ ಮೊದಲ ಬಿಳಿಯೇತರ, ಏಷ್ಯಾ ಮೂಲದ ಸೆನೆಟರ್ ಎನಿಸಿಕೊಂಡಿದ್ದಾರೆ.

ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ವಲಸೆ ನೀತಿಗಳು ಮತ್ತು ಸಂಭಾವ್ಯ ಸಾಮೂಹಿಕ ಗಡಿಪಾರಿನ ವಿರುದ್ಧ ಕಮಲಾ ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಿದ್ದಾರೆ.

'ಇವರು ಕಮಲಾ ಹ್ಯಾರಿಸ್. ಇವರಿಗೆ ಪ್ರಥಮ ಮಹಿಳಾ ಅಧ್ಯಕ್ಷರಾಗುವ ಸಾಮರ್ಥ್ಯವಿದೆ. ಕ್ಯಾಲಿಫೋರ್ನಿಯದ ಜನಪ್ರಿಯ ಅಟಾರ್ನಿ ಜನರಲ್ ಕಾಂಗ್ರೆಸ್‌ನತ್ತ ಹೊರಟಿದ್ದಾರೆ. ಬಹುಶ ಶ್ವೇತಭವನ ಅವರ ಮುಂದಿನ ಗುರಿಯಾಗಿದೆ' 2020ರ ವೇಳೆಗೆ ಮೈತ್ರಿಕೂಟ ಬಲಗೊಂಡು ಕಮಲಾ ಅವರ ನೆರವಿಗೆ ನಿಂತರೆ ಶ್ವೇತಭವನದಲ್ಲಿ ಕಮಲಾ ಅಧಿಕಾರವಹಿಸಿಕೊಳ್ಳಬಹುದು ಎಂದು 'ಹಫಿಂಗ್ಟನ್ ಪೋಸ್ಟ್' ವರದಿ ಮಾಡಿದೆ. (ಪಿಟಿಐ)

English summary
Indian-origin California Attorney General Kamala Harris has potential to become the first woman president of the United States, a media report has said, days after Hillary Clinton was unable to break the highest glass ceiling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X