ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳಿ: ಭಾರತದ ಆಕ್ಷೇಪಕ್ಕೆ ವಿಷಾದ ವ್ಯಕ್ತಪಡಿಸಿದ ಕೆನಡಾ ಮ್ಯೂಸಿಯಂ

|
Google Oneindia Kannada News

ಟುರೊಂಟೋ, ಜು.6: ನಿರ್ದೇಶಕಿ ಲೀನಾ ಮಣಿಮೇಕಲೈರ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್‌ ವಿವಾದ ಸಂಬಂಧ ಭಾರತದ ಆಕ್ಷೇಪಕ್ಕೆ ಕೆನಡಾದ ಟುರೊಂಟೋ ಆಗಖಾನ್‌ ಮ್ಯೂಸಿಯಂ ವಿಷಾದ ವ್ಯಕ್ತಪಡಿಸಿದೆ.

ಮ್ಯೂಸಿಯಂ ತನ್ನ ಹೇಳಿಕೆಯಲ್ಲಿ ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು ವೈವಿಧ್ಯಮಯ ಜನಾಂಗೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ವಿದ್ಯಾರ್ಥಿಗಳಿಂದ ಕೆನಡಾದ ಬಹುಸಾಂಸ್ಕೃತಿಕತೆಯ ಭಾಗವಾಗಿ 'ಅಂಡರ್ ದಿ ಟೆಂಟ್' ಯೋಜನೆ ಭಾಗವಾಗಿ ಈ ಪೋಸ್ಟರ್‌ ಹಾಕಲಾಗಿತ್ತು ಎಂದು ಹೇಳಿದೆ.

ಕಾಳಿ ಪೋಸ್ಟರ್‌ ವಿವಾದ: ಕ್ರಮಕ್ಕೆ ಭಾರತೀಯ ಹೈಕಮಿಷನ್‌ ಆಗ್ರಹ ಕಾಳಿ ಪೋಸ್ಟರ್‌ ವಿವಾದ: ಕ್ರಮಕ್ಕೆ ಭಾರತೀಯ ಹೈಕಮಿಷನ್‌ ಆಗ್ರಹ

ಮ್ಯೂಸಿಯಂ 'ಅಂಡರ್ ದಿ ಟೆಂಟ್' ಭಾಗವಾಗಿ 18 ಕಿರು ವಿಡಿಯೋಗಳಲ್ಲಿ ಒಂದಾಗಿತ್ತು. ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯದ ಪ್ರಾಜೆಕ್ಟ್ ಪ್ರಸ್ತುತಿಯನ್ನು ಅಗಾ ಖಾನ್ ಮ್ಯೂಸಿಯಂನಲ್ಲಿ ಆಯೋಜಿಸಲಾಗಿತ್ತು. ವಸ್ತುಸಂಗ್ರಹಾಲಯವು ಕಲೆಗಳ ಮೂಲಕ ಅಂತರ ಸಾಂಸ್ಕೃತಿಕ ತಿಳಿವಳಿಕೆ ಮತ್ತು ಸಂವಾದವನ್ನು ಬೆಳೆಸುವ ಉದ್ದೇಶದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದೆ. ವೈವಿಧ್ಯಮಯ ಧಾರ್ಮಿಕ ಅಭಿವ್ಯಕ್ತಿಗಳು ಮತ್ತು ನಂಬಿಕೆ ಸಮುದಾಯಗಳಿಗೆ ಗೌರವವು ಆ ಯೋಜನೆಯ ಅವಿಭಾಜ್ಯ ಅಂಗವಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಂಡರ್ ದಿ ಟೆಂಟ್‌ನ 18 ಕಿರು ವಿಡಯೋಗಳಲ್ಲಿ ಒಂದಾಗಿದ್ದ ಕಾಳಿ ಚಿತ್ರ ಅದರ ಜೊತೆಗಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಹಿಂದೂ ಮತ್ತು ಇತರ ನಂಬಿಕೆಯ ಸಮುದಾಯಗಳ ಸದಸ್ಯರಿಗೆ ಅಜಾಗರೂಕತೆಯಿಂದ ನೋವಾಗಿದ್ದರೆ ಮ್ಯೂಸಿಯಂ ವಿಷಾದ ವ್ಯಕ್ತಪಡಿಸುತ್ತದೆ ಎಂದು ಅದು ಹೇಳಿದೆ.

 ಕಾಳಿ ದೇವಿ ಸಿಗರೇಟು ಸೇದುವ ಪೋಸ್ಟರ್‌: ನಿರ್ದೇಶಕಿ ವಿರುದ್ಧ ದೂರು ಕಾಳಿ ದೇವಿ ಸಿಗರೇಟು ಸೇದುವ ಪೋಸ್ಟರ್‌: ನಿರ್ದೇಶಕಿ ವಿರುದ್ಧ ದೂರು

ಟೊರೊಂಟೊದ ಅಗಾ ಖಾನ್ ಮ್ಯೂಸಿಯಂನಲ್ಲಿ 'ಅಂಡರ್ ದಿ ಟೆಂಟ್' ಯೋಜನೆಯ ಭಾಗವಾಗಿ ಪ್ರದರ್ಶಿಸಲಾದ ಹಿಂದೂ ದೇವರುಗಳ ಅವಹೇಳನದ ಪೋಸ್ಟರ್‌ ಅನ್ನು ಹಿಂತೆಗೆದುಕೊಳ್ಳುವಂತೆ ಭಾರತೀಯ ಹೈಕಮಿಷನ್ ಸೋಮವಾರ ಕೆನಡಾದ ಅಧಿಕಾರಿಗಳಿಗೆ ಒತ್ತಾಯಿಸಿತ್ತು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ

ಧಾರ್ಮಿಕ ಭಾವನೆಗಳಿಗೆ ಧಕ್ಕೆ

ಕೆನಡಾದ ಅಧಿಕಾರಿಗಳು ಮತ್ತು ಕಾರ್ಯಕ್ರಮ ಆಯೋಜಕರು ಇಂತಹ ಎಲ್ಲಾ ಪ್ರಚೋಧನಕಾರಿ ಪೋಸ್ಟರ್‌ಗಳನ್ನು ಹಿಂತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ ಎಂದು ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿತ್ತು. ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ದೇಶನದ ಸಾಕ್ಷ್ಯಚಿತ್ರದ ಪೋಸ್ಟರ್ ಕಾಳಿ ದೇವಿಯ ಚಿತ್ರಣದೊಂದಿಗೆ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳಿಗೆ ಒಳಗಾಗಿತ್ತು.

ಕಾಳಿ ಚಿತ್ರದ ಪೋಸ್ಟರ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌

ಕಾಳಿ ಚಿತ್ರದ ಪೋಸ್ಟರ್ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌

ಮಧುರೈನಲ್ಲಿ ಜನಿಸಿದ ಟೊರೊಂಟೊ ಮೂಲದ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ತಮ್ಮ ಕಾಳಿ ಚಿತ್ರದ ಪೋಸ್ಟರ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದು ದೇವಿಯನ್ನು ಧೂಮಪಾನ ಮಾಡುವ ವೇಷಭೂಷಣವನ್ನು ಧರಿಸಿರುವ ಮಹಿಳೆಯನ್ನು ಚಿತ್ರಿಸಿತ್ತು. ಟೊರೊಂಟೊದಲ್ಲಿರುವ ನಮ್ಮ ಕಾನ್ಸುಲೇಟ್ ಜನರಲ್ ಕಾರ್ಯಕ್ರಮದ ಸಂಘಟಕರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗೆಯೇ ಹಲವಾರು ಹಿಂದೂ ಗುಂಪುಗಳು ಕೆನಡಾದ ಅಧಿಕಾರಿಗಳನ್ನು ಕ್ರಮ ಕೈಗೊಳ್ಳಲು ಸಂಪರ್ಕಿಸಿದ್ದವು ಎಂದು ನಮಗೆ ತಿಳಿಸಲಾಗಿದೆ ಮ್ಯೂಸಿಯಂ ಎಂದು ಪ್ರಕಟಣೆ ಹೇಳಿದೆ.

ಪೋಸ್ಟರ್ ಹಿಂತೆಗೆದುಕೊಳ್ಳಲು ಆಗ್ರಹ

ಪೋಸ್ಟರ್ ಹಿಂತೆಗೆದುಕೊಳ್ಳಲು ಆಗ್ರಹ

ಏತನ್ಮಧ್ಯೆ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರ ಕಾಳಿಯ ಪೋಸ್ಟರ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ದೂರು ದಾಖಲಿಸಲಾಗಿತ್ತು. ಪೋಸ್ಟರ್‌ನಲ್ಲಿ ಕಾಳಿ ದೇವಿಯ ಚಿತ್ರಣವು ಸರಿಯಿಲ್ಲ. ಪೋಸ್ಟರ್ ಅನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರರ ಒಂದು ವಿಭಾಗ ಆಕೆಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿತ್ತು. ಇದು '#ArrestLeenaManimekal' ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಕೂಡ ಆಗಿದೆ.

ಕಾರ್ಯಕರ್ತ ರಾಹುಲ್ ಈಶ್ವರ್ ಆಕ್ಷೇಪ

ಕಾರ್ಯಕರ್ತ ರಾಹುಲ್ ಈಶ್ವರ್ ಆಕ್ಷೇಪ

ಕಾರ್ಯಕರ್ತ ರಾಹುಲ್ ಈಶ್ವರ್ ಇದನ್ನು ದ್ವೇಷದ ಪೋಸ್ಟರ್. ಇದು ಹಿಂದೂ ಸಮುದಾಯದ ವಿರುದ್ಧ ದ್ವೇಷವನ್ನು ಹರಡುತ್ತಿದೆ ಮತ್ತು ನಮ್ಮ ದೇವತೆಗಳನ್ನು ಅವಮಾನಿಸುತ್ತಿದೆ ಎಂದು ಹೇಳಿದ್ದರು. ವಿವಾದಕ್ಕೆ ಸಂಬಂಧಿಸಿದಂತೆ ಎಎನ್‌ಐ ಜೊತೆ ಮಾತನಾಡಿದ್ದ ಈಶ್ವರ್, ವಾಕ್‌ ಸ್ವಾತಂತ್ರ್ಯವು ಸಂವೇದನೆಯೊಂದಿಗೆ ಬರುತ್ತದೆ. ಸ್ವಾತಂತ್ರ್ಯವು ಜವಾಬ್ದಾರಿಯೊಂದಿಗೆ ಬರುತ್ತದೆ. ನಾವು ಸಂವೇದನಾಶೀಲ, ಗೌರವ ಮತ್ತು ಜವಾಬ್ದಾರಿಯಿಲ್ಲದೆ ಜಗತ್ತಿನಲ್ಲಿ ಬದುಕಬಹುದೇ? ಕಾಳಿ ಪೋಸ್ಟರ್‌ ಅನ್ನು ಲೀನಾ ಅವರು ಹಿಂದೂ ಸಮುದಾಯದ ವಿರುದ್ಧ ದ್ವೇಷದ ಹರಡುವಂತೆ ರಚಿಸಿದ್ದಾರೆ. ಅವರು ಹಿಂದೂಗಳ ಅತ್ಯಂತ ಪೂಜ್ಯ ದೇವತೆಗಳಲ್ಲೊಬ್ಬರಾದ ಕಾಳಿಯನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

English summary
Canada's Toronto Aga Khan Museum has expressed regret over India's objection to director Leena Manimekalai's Kali documentary poster controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X