ಶಾಂತಿ ನೊಬೆಲ್ ಸ್ವೀಕರಿಸಿದ ಸತ್ಯಾರ್ಥಿ, ಮಲಾಲಾ
ಓಸ್ಲೋ, ಡಿ. 10 : ಮಕ್ಕಳ ಹಕ್ಕುಗಳ ಆಂದೋಲನಕಾರ ಭಾರತದ ಕೈಲಾಶ್ ಸತ್ಯಾರ್ಥಿ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಹೋರಾಟಗಾರ್ತಿ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಯಿ ಬುಧವಾರ ಶಾಂತಿ ನೊಬೆಲ್ ಪಾರಿತೋಷಕ ಸ್ವೀಕರಿಸಿದರು.
ಇವರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 11 ಜನರಿಗೆ ಸ್ವೀಡನ್‌ನ ರಾಜಧಾನಿ ಸ್ಟಾಕ್‌ಹೋಮ್ ಹಾಗೂ ನಾರ್ವೆಯ ರಾಜಧಾನಿ ಓಸ್ಲೊದಲ್ಲಿ ಪ್ರಶಸ್ತಿ ವಿತರಿಸಲಾಯಿತು. 60 ವರ್ಷದ ಸತ್ಯಾರ್ಥಿ ಹಾಗೂ 17 ವರ್ಷದ ಯೂಸುಫ್‌ಝಾಯಿ ನೊಬೆಲ್ ಶಾಂತಿ ಪ್ರಶಸ್ತಿಯ 11 ಲಕ್ಷ ಡಾಲರ್ ಮೊತ್ತವನ್ನು ಹಂಚಿಕೊಂಡರು. ಸತ್ಯಾರ್ಥಿ ಪತ್ನಿ ಸುಮೇಧಾ, ಪುತ್ರ, ಸೊಸೆ ಹಾಗೂ ಪುತ್ರಿ ಹಾಗೂ ಪಾಕಿಸ್ತಾನದ ಮಲಾಲಾ ಕುಟುಂಬ ಈ ವೇಳೆ ಹಾಜರಿತ್ತು.[ಮಲಾಲಾ, ಸತ್ಯಾರ್ಥಿಗೆ ನೊಬೆಲ್ ಶಾಂತಿ ಪುರಸ್ಕಾರ]

'ಈ ಬಹುಮಾನದ ಹಣವನ್ನು ಭಾರತದ ಬಡ ಮಕ್ಕಳಿಗೆ ಸಮರ್ಪಿಸುತ್ತೇನೆ. ಈ ಪ್ರಶಸ್ತಿ ಅವರಿಗೆ ಸೇರಬೇಕಾಗಿದ್ದು. ಇದು ಭಾರತದ ನಾಗರಿಕರಿಗೆ ಸಂದ ಗೌರವ' ಎಂದು ಸತ್ಯಾರ್ಥಿ ಹೇಳಿದರು. ಕೈಲಾಶ್ ಸತ್ಯಾರ್ಥಿ ನೊಬೆಲ್ ಸ್ವೀಕರಿಸಿದ ಏಳನೇ ಭಾರತೀಯ ಎಂಬ ಶ್ರೇಯ ಪಡೆದುಕೊಂಡರು. [ನೊಬೆಲ್ ಪಾರಿತೋಷಕ ವಿಜೇತ ಕೈಲಾಶ್ ಸತ್ಯಾರ್ಥಿ]
ಫ್ರಾನ್ಸ್‌ನ ಪ್ಯಾಟ್ರಿಕ್ ಮೊಡಿಯಾನೊ(ಸಾಹಿತ್ಯ ನೊಬೆಲ್), ಅಮೆರಿಕನ್-ಬ್ರಿಟಿಷ್ ವಿಜ್ಞಾನಿ ಜಾನ್ ಒ ಕೀಫೆ ಮತ್ತು ನಾರ್ವೆಯ ದಂಪತಿ ಎಡ್ವರ್ಡ್ ಹಾಗೂ ಮೇ ಬ್ರಿಟ್ ಮೋಸರ್(ವೈದ್ಯಕೀಯ ನೊಬೆಲ್) ಹಾಗೂ ಜಪಾನ್‌ನ ವಿಜ್ಞಾನಿಗಳಾದ ಇಸಾಮು ಅಕಸಾಕಿ, ಹಿರೋಶಿ ಅಮಾನೊ ಹಾಗೂ ಜಪಾನ್ ಸಂಜಾತ ಅಮೆರಿಕದ ಶುಜಿ ನಕಮುರ(ಭೌತಶಾಸ್ತ್ರ ನೊಬೆಲ್) ಸ್ವೀಕರಿಸಿದ್ದಾರೆ.
Here is Malala Yousafzai’s @MalalaFund Nobel Diploma: #nobelprize2014 pic.twitter.com/LOSyZ15E1p
— The Nobel Prize (@NobelPrize) December 10, 2014 Here is Malala Yousafzai’s @MalalaFund Nobel Diploma: #nobelprize2014 pic.twitter.com/LOSyZ15E1p
— The Nobel Prize (@NobelPrize) December 10, 2014 











Click it and Unblock the Notifications