ಡೊನಾಲ್ಡ್ ಟ್ರಂಪ್ ಬಿಟ್ಟ ಬಾಣಕ್ಕೆ ಜಸ್ಟಿನ್ ಟ್ರುಡೋ ಜೀವ ಗಲಗಲ!
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಶಕ್ತಿಶಾಲಿ ದೇಶದ ಚುನಾವಣೆಯ ಗೆದ್ದ ನಂತರ ಹೊಸ ಹೊಸ ಬಾಣಗಳನ್ನ ಬಿಡುತ್ತಿದ್ದಾರೆ. ಅದರಲ್ಲೂ ತೆರಿಗೆ ನೀತಿ ವಿಚಾರ ಇದೀಗ ಕೆನಡಾ & ಅಮೆರಿಕ ನಡುವೆ ಬೆಂಕಿ ಹೊತ್ತಿಸಿದೆ. ಡೊನಾಲ್ಡ್ ಟ್ರಂಪ್ ಈಗ ಕೆನಡಾ ಮೂಲಕ ಅಮೆರಿಕಗೆ ಬರುವ ವಸ್ತುಗಳ ಮೇಲೆ ಭಾರಿ ಪ್ರಮಾಣದ ತೆರಿಗೆ ಹಾಕಲು ನಿರ್ಧಾರ ಮಾಡಿದ್ದಾರೆ, ಇದೇ ವಿಷಯ ಈಗ ದೊಡ್ಡ ಗಲಾಟೆಗೆ ಕಾರಣವಾಗಿದೆ. ಅಲ್ಲದೆ ಈ ಪರಿಸ್ಥಿತಿ ಸರಿ ಮಾಡಲು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಏನ್ ಮಾಡ್ತಿದ್ದಾರೆ ಗೊತ್ತಾ?
ಡೊನಾಲ್ಡ್ ಟ್ರಂಪ್ ಪಕ್ಕಾ ಬ್ಯುಸಿನೆಸ್ ಮ್ಯಾನ್, ಇದೇ ಕಾರಣಕ್ಕೆ ಇದೀಗ ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತ ಅವಧಿಯಲ್ಲಿ ಹಲವು ರೀತಿ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ. ಅಮೆರಿಕ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿರುವ ಸಮಯದಲ್ಲೇ, ಹೊರ ದೇಶಗಳಿಂದ ಬರುವ ಸರಕು & ವಸ್ತುಗಳಿಗೆ ಭಾರಿ ಪ್ರಮಾಣದಲ್ಲಿ ತೆರಿಗೆ ಏರಿಕೆ ಮಾಡೋಕೆ ಮುಂದಾಗಿದ್ದಾರೆ. ಆದರೆ ಇದೇ ವಿಚಾರ ಈಗ ಕೆನಡಾ ಪ್ರಧಾನಿಗೆ ಆಘಾತ ನೀಡಿದೆ!

ಕೆನಡಾ ಪ್ರಧಾನಿ ಓಡೋಡಿ ಬಂದಿದ್ದೇಕೆ?
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಡೊನಾಲ್ಡ್ ಟ್ರಂಪ್ 2025ರ ಜನವರಿ ತಿಂಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು ಹಲವು ಕ್ರಾಂತಿಕಾರಿ ನಿರ್ಧಾರಗಳನ್ನು ಕೂಡ ಕೈಗೊಳ್ಳುತ್ತಿದ್ದಾರೆ. ಈ ಪೈಕಿ, ಕೆನಡಾ & ಮೆಕ್ಸಿಕೋ ಮೂಲಕ ಬರುವ ವಸ್ತುಗಳಿಗೆ ಶೇಕಡಾ 25 ತೆರಿಗೆ ಹಾಗೂ ಚೀನಾ ಮೂಲಕ ಬರುವ ವಸ್ತುಗಳಿಗೆ ಶೇಕಡಾ 10 ರಷ್ಟು ಟ್ಯಾಕ್ಸ್ ಹಾಕುವ ನಿರ್ಧಾರ ಪ್ರಕಟಿಸಿದ್ದರು. ಇದೇ ವಿಚಾರ ಈಗ ಬೆಂಕಿ ಹೊತ್ತಿಸಿದೆ!
ಟ್ರಂಪ್ ಜೊತೆಗೆ ಕೆನಡಾ ಪ್ರಧಾನಿ ಚರ್ಚೆ?
ಕೆನಡಾ & ಅಮೆರಿಕ ನಡುವೆ ನೂರಾರು ವರ್ಷಗಳಿಂದ ಕೂಡ ಸಂಬಂಧ ಇದ್ದು, ಎರಡೂ ದೇಶಗಳು ಹಲವು ವರ್ಷಗಳಿಂದ ಉತ್ತಮವಾಗಿ ವ್ಯಾಪಾರ ಸಂಬಂಧ ನಡೆಸಿಕೊಂಡು ಬಂದಿವೆ. ಆದರೆ ಇದೀಗ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಸಂಚಲನ ಸೃಷ್ಟಿಯೇ ಆಗುತ್ತಿದೆ. 2025ರ ಜನವರಿ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಹೀಗಿದ್ದಾಗ ಕೆನಡಾ ಮೇಲೆ ಭಾರಿ ದೊಡ್ಡ ತೆರಿಗೆ ಭಾರವನ್ನ ಹಾಕಲು ಮುಂದಾಗಿದ್ದಾರೆ ಎಂಬ ಆರೋಪ ಇತ್ತು. ಈ ಕಾರಣಕ್ಕೆ ಇದೀಗ ಡೊನಾಲ್ಡ್ ಟ್ರಂಪ್ ಜೊತೆಗೆ ಕೂತು ಮಾತುಕತೆ ನಡೆಸಲು ಕೆನಡಾ ಪ್ರಧಾನಿ ಅಮೆರಿಕಗೆ ಬಂದಿದ್ದಾರಂತೆ!












Click it and Unblock the Notifications