ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿಚಾರದಲ್ಲಿ ಚೀನಾ ಹೊಗಳಿ ಭಾರತದ ಕಾಲೆಳೆದ ಉದ್ಯಮಿ

|
Google Oneindia Kannada News

ಲಂಡನ್, ಮಾರ್ಚ್ 12: ಜಗತ್ತಿನಾದ್ಯಂತ ಭಯದ ವಾತಾವರಣ ಸೃಷ್ಟಿಸಿರುವ ಕೊರೊನಾ ವೈರಸ್‌ಗೆ ಜನ ಶಾಪ ಹಾಕುತ್ತಿದ್ದಾರೆ. ಕೊರೊನಾ ಸೋಂಕು ಹರಡಲು ಚೀನಾ ಕಾರಣವಾಯ್ತು ಎಂದು ಚೀನಾ ದೇಶ ವಿರುದ್ಧವೂ ಟೀಕೆ ಮಾಡುತ್ತಿದ್ದಾರೆ.

ಆದರೆ, ಲಂಡನ್ ಮೂಲದ ಉದ್ಯಮಿ, ಅರ್ಥಶಾಸ್ತ್ರಜ್ಞ ಜಿಮ್ ಒ'ನೀಲ್ ಈ ವಿಚಾರದಲ್ಲಿ ಚೀನಾ ದೇಶವನ್ನು ಹಾಡಿ ಹೊಗಳಿದ್ದಾರೆ. ಚೀನಾ ದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಈ ಉದ್ಯಮಿ ಭಾರತವನ್ನು ಕಾಲೆಳೆದಿದ್ದಾನೆ.

ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?

ಸಿಎನ್‌ಬಿಸಿಯ 'ಸ್ಕ್ವಾಕ್ ಬಾಕ್ಸ್ ಯುರೋಪ್' ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದ, ಮಾಜಿ ಗೋಲ್ಡ್ಮನ್ ಸ್ಯಾಚ್ಸ್ ಮುಖ್ಯ ಅರ್ಥಶಾಸ್ತ್ರಜ್ಞ ಜಿಮ್ ಒ'ನೀಲ್ ''ದೇವರು ದೊಡ್ಡವನು ಕೊರೊನಾ ವೈಸರ್ ಚೀನಾದಲ್ಲಿ ಪ್ರಾರಂಭ ಆಯ್ತು, ಭಾರತದಲ್ಲಿ ಆಗಿದ್ರೆ ಅಷ್ಟೇ'' ಎಂದಿದ್ದಾರೆ.

 Jim ONeill Praises China For They Handle COVID 19 In Good Way

ಅದಕ್ಕೆ ಕಾರಣ ನೀಡಿರುವ ಜಿಮ್ ಒ'ನೀಲ್ 'ಭಾರತದಂತಹ ಹಾಗೂ ಭಾರತೀಯ ಆಡಳಿತದ ಮಂಡಳಿ ಚೀನಿಯರು ಮಾಡಿದ ರೀತಿಯಲ್ಲಿ ಕೊರೊನಾವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಚೀನಾ ಸರ್ಕಾರ ಉತ್ತಮವಾಗಿ ನಿಭಾಯಿಸಿದೆ, ಅದೇ ರೀತಿ ಬ್ರೆಜಿಲ್ ದೇಶಕ್ಕೂ ಈ ಕ್ರೆಡಿಟ್ ಸಿಗುತ್ತೆ' ಎಂದು ಹೇಳಿದ್ದಾರೆ.

ಕೋವಿಡ್ 19; ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಘೋಷಣೆಕೋವಿಡ್ 19; ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಘೋಷಣೆ

ಭಾರತದಲ್ಲಿ ಇದುವರೆಗೂ 73 ಕೊರೊನಾ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಖಚಿತಪಡಿಸಿದೆ. ದೇಶದಾದ್ಯಂತ ಕೊರೊನಾ ವೈರಸ್‌ ಬಗ್ಗೆ ಹೈ-ಅಲರ್ಟ್ ಘೋಷಣೆಯಾಗಿದ್ದು, ಪ್ರತಿ ರಾಜ್ಯದಲ್ಲೂ ಆಯಾ ಸರ್ಕಾರಗಳಿಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.

English summary
Chairperson of U.K think tank Chatham House Jim O'Neill praises china for how they handle COVID19 in a good way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X