ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟಿಷರ ಆಡಳಿತ ವೈಖರಿ ಕಂಡು ಬೆರಗಾದ ಪ್ರಜ್ವಲ್ ರೇವಣ್ಣ

By Mahesh
|
Google Oneindia Kannada News

ಲಂಡನ್, ಜುಲೈ 23: ಜಾತ್ಯಾತೀತ ಜನತಾ ದಳದ ಮುಖ್ಯಸ್ಥ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮೊಮ್ಮಗ, ಎಚ್ ಡಿ ರೇವಣ್ಣ ಹಾಗೂ ಭವಾನಿ ದಂಪತಿ ಪುತ್ರ ಪ್ರಜ್ವಲ್ ರೇವಣ್ಣ ಅವರು ವಿಶ್ವದ ಅತ್ಯಂತ ಪುರಾತನ ಸಂಸತ್ತಿನ ಕಾರ್ಯ ವೈಖರಿ ಕಂಡು ಬೆರಗಾಗಿದ್ದಾರೆ. ಬ್ರಿಟಿಷರ ಆಡಳಿತದ ಪಾಠ ಕಲಿತು, ಸಾಕಷ್ಟು ರಾಜಕೀಯ ಜ್ಞಾನವೃದ್ಧಿ ಮಾಡಿಕೊಂಡಿದ್ದಾರೆ.

ಭಾರತದಿಂದ ಬ್ರಿಟಿಷ್ ಆಡಳಿತ ವೈಖರಿ ಅಧ್ಯಯನಕ್ಕೆ ಆಯ್ಕೆಯಾದ 10 ಜನ ಯುವ ರಾಜಕಾರಣಿಗಳ ಪೈಕಿ ಜೆಡಿಎಸ್ ನ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರು ಒಬ್ಬರಾಗಿದ್ದಾರೆ. ಜುಲೈ 18 ರಿಂದ 24 ರವರೆಗೆ ಈ ತಂಡ ಲಂಡನ್ನಿನಲ್ಲಿ ಅಧ್ಯಯನ ಪ್ರವಾಸದಲ್ಲಿ ನಿರತವಾಗಿರುತ್ತದೆ. [ದೇವೇಗೌಡರ ಮೊಮ್ಮಗ ಪ್ರಜ್ವಲ್ ಇತ್ಯೋಪರಿ]

ಯುವ ಮುಖಂಡರು: 10 ಜನ ಪ್ರತಿನಿಧಿಗಳು- ಪ್ರಜ್ವಲ್ ರೇವಣ್ಣ ಅಲ್ಲದೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ, ಗುಲ್ ಪನಾಗ್, ಪ್ರಿಯಾಂಕಾ ಚತುರ್ವೇದಿ, ನೂಪುರ್ ಶರ್ಮ, ಹರ್ಷ್ ಸಾಂಘ್ವಿ, ಅಮಿತ್ ಥಾಕರ್, ಆಶೀಶ್ ಖೇತಾನ್, ಪವನ್ ಖೇರ ಹಾಗೂ ಪಿ ರಾಜೀವ್. [ದೇವೇಗೌಡರ ಮೊಮ್ಮಗ ಪ್ರಜ್ವಲ್ ಜೆಡಿಎಸ್ ಸೇರ್ಪಡೆ]

ಏನೇನು ಕಲಿಯಲಿದ್ದಾರೆ: ಯುಕೆ ಆರ್ಥಿಕ ನೀತಿ, ಶಾಸಕಾಂಗ, ಸಂಸತ್ತು ಕಾರ್ಯ ನಿರ್ವಹಣೆ, ವಿಪಕ್ಷಗಳ ಪಾತ್ರ, ಕನ್ಸರ್ವೇಟಿವ್ ಪಕ್ಷದ ಜೊತೆ ಸಂವಾದ ಮುಂತಾದ ವಿಷಯಗಳಿವೆ. ಯಾವ ಯಾವ ಪಕ್ಷದ ಮುಖಂಡರು ತೆರಳಿದ್ದಾರೆ. ಪ್ರಜ್ವಲ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದು ಏನು ಹೇಳಿದ್ದಾರೆ ಮುಂದೆ ಓದಿ...

 ಯಾವ ಯಾವ ಪಕ್ಷದ ಮುಖಂಡರು

ಯಾವ ಯಾವ ಪಕ್ಷದ ಮುಖಂಡರು

ಬಿಜೆಪಿಯಿಂದ ನೂಪುರ್ ಶರ್ಮ, ಹರ್ಷ್ ಸಾಂಘ್ವಿ, ಅಮಿತ್ ಠಾಕರ್. ಆಮ್ ಆದ್ಮಿ ಪಕ್ಶದಿಂದ ಗುಲ್ ಪನಾಗ್ ಹಾಗೂ ಆಶೀಶ್ ಖೇತನ್, ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ನಿಂದ ಪ್ರಿಯಾಂಕಾ ಚತುರ್ವೇದಿ, ಶರ್ಮಿಷ್ಠಾ ಮುಖರ್ಜಿ ಹಾಗೂ ಪವನ್ ಖೇರ, ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದಿಂದ ಪಿ ರಾಜೀವ್, ಆರ್ಥಿಕ ಸಲಹೆಗಾರರಾಗಿ ಅಪ್ರುಲ್ ಮಲ್ಹೋತ್ರ

ಶುಭ ಹಾರೈಕೆಗಳ ಮಹಾಪೂರ

ಶುಭ ಹಾರೈಕೆಗಳ ಮಹಾಪೂರ

ಬ್ರಿಟಿಷ್ ಸಂಸತ್ ಭವನದಲ್ಲಿ ನಡೆಯುತ್ತಿರುವ ಭಾರತೀಯ ಯುವರಾಜ ಮುಖಂಡರ ಸೆಮಿನಾರ್ ನಲ್ಲಿ ಭಾಗವಹಿಸಿದ ಮುಂದಿನ ಪೀಳಿಗೆಯ ಯುವ ಸಾರಥಿ ಯುವಕರ ಆಶಾ ಕಿರಣ 'ಪ್ರಜ್ವಲ್ ರೇವಣ್ಣ' ಅವರು ಕಾರ್ಯಕ್ರಮದಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸೋಣ ಎಂಬ ಹಾರೈಕೆ ಪತ್ರಗಳು ಫೇಸ್ ಬುಕ್ ನಲ್ಲಿ ಕಂಡು ಬಂದಿವೆ.

ಎಲ್ಲರಿಗೂ ಥ್ಯಾಂಕ್ ಎಂದ ಪ್ರಜ್ವಲ್

ಎಲ್ಲರಿಗೂ ಥ್ಯಾಂಕ್ ಎಂದ ಪ್ರಜ್ವಲ್

Thank you for all your support.. Which I would really need it in future and I am proud to say I am the youngest in the whole group of delegates and....
Thanking you
Prajwal Revanna

ಹಾರೈಕೆಗೆ ಪ್ರಜ್ವಲ್ ರಿಂದ ಧನ್ಯವಾದ

ಹಾರೈಕೆಗೆ ಪ್ರಜ್ವಲ್ ರಿಂದ ಧನ್ಯವಾದ

and.... I am the only one from Karnataka and I am the only one who is representing from regional party from through out India.. It's been a nice experience to Learn how Britain politics proceeds but it's not much of a difference from our Indian politics.

ಕರ್ನಾಟಕದ ಹೆಮ್ಮೆ: ಪ್ರಜ್ವಲ್ ರೇವಣ್ಣ

ಕರ್ನಾಟಕದ ಹೆಮ್ಮೆ: ಪ್ರಜ್ವಲ್ ರೇವಣ್ಣ

ಬ್ರಿಟಿಷ್ ಸಂಸತ್ ಭವನಕ್ಕೆ ತೆರಳಿದ ಯುವ ರಾಜಕಾರಣಿಗಳ ತಂಡದ ಪೈಕಿ ಅತ್ಯಂತ ಕಿರಿಯರಾದ ಪ್ರಜ್ವಲ್ ರೇವಣ್ಣ ಅವರು ಕರ್ನಾಟಕದಿಂದ ಆಯ್ಕೆಯಾದ ಏಕೈಕ ಪ್ರತಿನಿಧಿಯಾಗಿದ್ದಾರೆ. ಅಲ್ಲದೇ,ಪ್ರಾದೇಶಿಕ ಪಕ್ಷವನ್ನು ಪ್ರತಿನಿಧಿಸುತ್ತಿರುವ ಏಕೈಕ ಮುಖಂಡರೂ ಹೌದು. ಇನ್ನೂ ಸಕ್ರಿಯ ರಾಜಕೀಯಕ್ಕೆ(ಚುನಾವಣೆ ಎದುರಿಸದ) ಧುಮುಕಬೇಕಿರುವ ಪ್ರಜ್ವಲ್ ಗೆ ಈ ಪ್ರವಾಸ ಸಾಕಷ್ಟು ಅನುಭವವನ್ನು ತಂದುಕೊಟ್ಟಿದೆ. ಚಿತ್ರಕೃಪೆ: ಪ್ರಜ್ವಲ್ ರೇವಣ್ಣ ಫೇಸ್ ಬುಕ್ ಪುಟ

English summary
JDS supremo HD Deve Gowda's grandson Prajwal Revanna shares his experience at Commonwealth Parliamentary Association (CPA), United Kindom. He was one among the ten Indian politicians who experienced British way of governance and exposed to one of the oldest democracy in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X