ಗಾಜಾ ನೆಲದಲ್ಲಿ ಅಮೆರಿಕ ಉಪಾಧ್ಯಕ್ಷ, ಹಿಂಸಾಚಾರಕ್ಕೆ ಬೀಳುತ್ತಾ ಬ್ರೇಕ್?
ಯುದ್ಧ ನಿಂತು ಹೋಗಿದೆ ಅನ್ನುವಾಗಲೇ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಿದೆ. ದಿಢೀರ್ ಗಾಜಾ ನೆಲದಲ್ಲಿ ಮತ್ತೆ ಹಿಂಸಾಚಾರ ಶುರುವಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಎಲ್ಲಾ ತಿಕ್ಕಾಟದ ನಡುವೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಗಾಜಾ ಜನರು ಮತ್ತೆ ತಮ್ಮ ತಮ್ಮ ಮನೆ ಬಿಟ್ಟು ಓಡಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ ಎಂಬ ಆರೋಪದ ನಡುವೆ ದಿಢೀರ್ ಅಂತಾ ಅಮೆರಿಕ ಉಪಾಧ್ಯಕ್ಷರು ಇಸ್ರೇಲ್ ಪ್ರವಾಸ ಕೈಗೊಂಡು ಮಹತ್ವದ ಹೇಳಿಕೆ ನೀಡಿದ್ದಾರೆ.
ಅಂದಹಾಗೆ ಕದನ ವಿರಾಮ ಘೋಷಣೆ ನಂತರ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಸ್ರೇಲ್‌ಗೆ ತೆರಳಿ ಚರ್ಚೆ ನಡೆಸುತ್ತಿದ್ದಾರೆ. ಒಂದು ಕಡೆ ಯುದ್ಧ ನಿಂತರೂ ಹಿಂಸಾಚಾರ ನಿಂತಿಲ್ಲ, ಇಸ್ರೇಲ್ ಸೇನೆ ದಾಳಿ ಮಾಡುತ್ತಿದೆ ಎಂಬ ಆರೋಪಗಳ ನಡುವೆ ಕೂಡ ಇದೀಗ ದಿಢೀರ್ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಇಸ್ರೇಲ್ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಹಮಾಸ್ ಜೊತೆಗೆ ಒಪ್ಪಂದ ಮಾಡಿಕೊಂಡು ಯುದ್ಧ ನಿಲ್ಲಿಸಿದ್ದೇವೆ ಅಂತಾ ಅಮೆರಿಕ ಹೇಳಿತ್ತು. ಆದರೆ ಆ ನಂತರ ಕದನ ವಿರಾಮ ನಿಯಮ ಉಲ್ಲಂಘನೆ ಆಗಿದೆ ಅನ್ನೋ ಆರೋಪ ಕೇಳಿಬಂದು ಮತ್ತೆ ಹಿಂಸಾಚಾರ ಶುರು ಆಗಿದೆ ಎಂಬ ಆರೋಪ ಕೇಳಿಬಂದಿದೆ.

ಅಂತಿಮ ಹಂತ ತಲುಪಿದ ಕದನ?
2023 ಅಕ್ಟೋಬರ್ 7ರ ಶನಿವಾರ ಇಸ್ರೇಲ್ ಮೇಲೆ ನುಗ್ಗಿ ಬಂದ ಹಮಾಸ್ ರಾಕೆಟ್ & ಕ್ಷಿಪಣಿಗಳು ಘೋರ ಪರಿಸ್ಥಿತಿ ಸೃಷ್ಟಿ ಮಾಡಿಬಿಟ್ಟವು. ಹೀಗೆ 2023ರ ಅಕ್ಟೋಬರ್ 7ಕ್ಕೆ ಶುರುವಾಗಿದ್ದ ಗಾಜಾ & ಇಸ್ರೇಲ್ ವಾರ್ ಇಂದಿಗೂ ನಿಂತಿಲ್ಲ. ಹಾಗೇ ಮತ್ತೊಂದು ಗಂಭೀರ ಆರೋಪ ಕೂಡ ಇದೀಗ ಕೇಳಿಬರುತ್ತಿದೆ.
ಭವಿಷ್ಯದಲ್ಲಿ ಮತ್ತಷ್ಟು ಯುದ್ಧಗಳು ಗ್ಯಾರಂಟಿ?
ಹೀಗಿದ್ದಾಗ ಗಾಜಾ ನಿವಾಸಿಗಳ ಮೇಲೆ ಈಗ ಒತ್ತಡ ಹೇರುವ ಮೂಲಕ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎಂಬ ಆರೋಪ ಕೂಡ ಮಾಡಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಯಾವುದೇ ಚಿಂತೆ ಮಾಡದೆ ಮುಂದೆ ನುಗ್ಗಲು ನಿರ್ಧಾರ ಮಾಡಿರುವ ಇಸ್ರೇಲ್ ಸೇನೆ ಈಗ ಕೆಲವೇ ದಿನಗಳಲ್ಲಿ ಭಾರಿ ದೊಡ್ಡ ಕಾರ್ಯಾಚರಣೆ ಕೈಗೊಳ್ಳುವ ಆತಂಕ ಗಾಜಾ ನಿವಾಸಿಗಳಲ್ಲಿ ಕಾಡುತ್ತಿದೆ. ಭವಿಷ್ಯದಲ್ಲಿ ಈ ಪ್ರದೇಶ ಮತ್ತಷ್ಟು ಯುದ್ಧಗಳಿಗೆ ನಾಂದಿ ಹಾಡುತ್ತಾ? ಎಂಬ ಟೆನ್ಷನ್ ಕೂಡ ಮನೆಮಾಡಿದೆ. ಹೀಗಾಗಿ ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನಗಳು ಕೂಡ ಸಾಗಿವೆ.












Click it and Unblock the Notifications