ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ ಜಪಾನ್

|
Google Oneindia Kannada News

ಟೋಕಿಯೋ, ಮೇ 28: ಟೋಕಿಯೊ ಮಹಾನಗರ ಸೇರಿದಂತೆ ನಾಲ್ಕು ನಗರಗಳ ತುರ್ತು ಪರಿಸ್ಥಿತಿಯನ್ನು ಹಿಂಪಡೆದ ಬಳಿಕ ಜಪಾನ್ ಮಹತ್ವದ ಆದೇಶ ಪ್ರಕಟಿಸಿದೆ. ಭಾರತ ಸೇರಿದಂತೆ 10 ದೇಶಗಳ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ.

Recommended Video

ಚೀನಾ ಭಾರತ ಗಡಿ ವಿವಾದ ಬಗೆಹರಿಸಲು ಮುಂದಾದ ಅಮೇರಿಕಾ | Oneindia Kannada

ಕಳೆದ 14 ದಿನಗಳಲ್ಲಿ ಈ ದೇಶಗಳಲ್ಲಿ ಉಳಿದುಕೊಂಡಿದ್ದವರು ಸದ್ಯಕ್ಕೆ ಜಪಾನ್ ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ. ಭಾರತ, ಅಫ್ಘಾನಿಸ್ತಾನ, ಅರ್ಜೆಂಟೀನಾ, ಬಾಂಗ್ಲಾದೇಶ, ಎಲ್ ಸಾಲ್ವಡರ್, ಘಾನಾ, ಕಜಕಿಸ್ತಾನ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ತಜಕಿಸ್ತಾನದ ನಾಗರಿಕರು ಸದ್ಯಕ್ಕೆ ಜಪಾನ್ ಪ್ರವೇಶಿಸುವಂತಿಲ್ಲ.

3C ನಿಯಮ ಪಾಲಿಸಿ ಕೊವಿಡ್ ಯುದ್ಧ ಗೆದ್ದ ಜಪಾನ್ 3C ನಿಯಮ ಪಾಲಿಸಿ ಕೊವಿಡ್ ಯುದ್ಧ ಗೆದ್ದ ಜಪಾನ್

ವಿದೇಶಾಂಗ ಸಚಿವಾಲಯ ನೀಡಿರುವ ಮಾರ್ಗಸೂಚಿಯಂತೆ ಈ ಕ್ರಮ ಜರುಗಿಸಲಾಗುತ್ತಿದೆ ಎಂದು ವಿಮಾನಯಾನ ಇಲಾಖೆ ಹೇಳಿದೆ. ಒಟ್ಟಾರೆ 112ಕ್ಕೂ ಅಧಿಕ ದೇಶಗಳ ಪ್ರವಾಸಿಗರು, ನಾಗರಿಕರಿಗೆ ಸದ್ಯಕ್ಕೆ ಪ್ರವೇಶ ನಿಷೇಧವಿದೆ. ಈ ಪಟ್ಟಿಯಲ್ಲಿ ಯುನೈಟೆಡ್ ಸ್ಟೇಟ್ಸ್, ಚೀನಾ, ದಕ್ಷಿಣ ಕೊರಿಯಾ ಹಾಗೂ ಯುರೋಪಿನ ಕೆಲವು ರಾಷ್ಟ್ರಗಳಿವೆ.

Japan to expand entry ban to visitors from India, 10 others

ಜಪಾನ್ ನಲ್ಲಿ ಲಾಕ್ಡೌನ್ ಕಡ್ಡಾಯವಿಲ್ಲದಿದ್ದರೂ ಜಪಾನ್ ನಾಗರಿಕರು ವಿಮಾನಯಾನದ ಮೂಲಕ ದೇಶವನ್ನು ಪ್ರವೇಶಿಸಿದರೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ. ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಕಡ್ಡಾಯ ನಿಯಮಗಳನ್ನು ಪಾಲಿಸುವುದು ಅನಿವಾರ್ಯ ಎಂದು ಟೋಕಿಯೋ ಗವರ್ನರ್ ಯುರಿಕೋ ಕೊಯ್ಕೆ ಹೇಳಿದ್ದಾರೆ.

ಜಪಾನ್ ನಲ್ಲಿ 16,600 ದಾಖಲಾದ ಪ್ರಕರಣಗಳು, 850 ಸಾವು ಕಂಡಿದ್ದರೂ ಕೊರೊನಾ ವೈರಸ್ ಸೋಂಕು ಏರಿಕೆಯಾಗದಂತೆ ತಡೆಗಟ್ಟಲಾಗಿದೆ. ವೈರಸ್ ಸೋಂಕು ಹರಡುವ ಪ್ರಮಾಣವನ್ನು ತಟಸ್ಥಗೊಳಿಸಿ ಮಟ್ಟಸ ಮಾಡಲಾಗಿದೆ. ಹೀಗಾಗಿ, ಯುಎಸ್ಎ, ಬ್ರೆಜಿಲ್, ಯುರೋಪಿನ ಕೆಲವು ರಾಷ್ಟ್ರಗಳಂತೆ ಸಾವು ನೋವಿನ ಪ್ರಮಾಣ, ಒಂದೇ ದಿನದಲ್ಲಿ ಅತ್ಯಧಿಕ ಪಾಸಿಟಿವ್ ಪ್ರಕರಣ, ಅನಿಯಂತ್ರಿತ ಸೋಂಕು ಹರಡುವುದು ಜಪಾನ್ ನಲ್ಲಿ ಕಂಡು ಬಂದಿಲ್ಲ.

English summary
Japan is expanding its entry ban to India and 10 other nations as part of efforts to contain the spread of the new coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X