Get Updates
Get notified of breaking news, exclusive insights, and must-see stories!

Japan Snowfall: 30 ಜೀವಕ್ಕೆ ಕುತ್ತು ತಂದ ಭಾರಿ ಹಿಮಪಾತ, ಜಪಾನ್ ಪರಿಸ್ಥಿತಿ ಕಂಡು ಪ್ರಪಂಚದ ಕಂಬನಿ

ಜೋರು ಮಳೆ, ಮೈ ಸುಡುವಷ್ಟು ಬಿಸಿಲು, ನಿಂತಲ್ಲೇ ಹೆಪ್ಪುಗಟ್ಟುವ ಚಳಿ... ಹೀಗೆ ಮನುಷ್ಯ ತಾನು ಮಾಡಿಕೊಂಡ ತಪ್ಪಿಗೆ ಇದೀಗ ಪ್ರಕೃತಿ ಮಾತೆಯ ಮುನಿಸಿನ ಮೂಲಕ ನೂರಾರು ಸಮಸ್ಯೆ ಎದುರಿಸುತ್ತಿದ್ದಾನೆ. ಸಾಲು ಸಾಲು ಪ್ರಾಕೃತಿಕ ವಿಕೋಪಗಳು ಇದೀಗ ಮನುಷ್ಯರನ್ನು ದೊಡ್ಡದಾದ ಕಂಟಕಕ್ಕೆ ಸಿಲುಕಿಸಿದೆ. ಇದೇ ರೀತಿ ಜಪಾನ್‌ ನೆಲದಲ್ಲೂ ಪ್ರಕೃತಿಯ ಮುನಿಸಿಗೆ ದೊಡ್ಡ ಅವಾಂತರ ಈಗ ಸೃಷ್ಟಿಯಾಗಿದೆ, ಅಂದಹಾಗೆ ಜಪಾನ್‌ನ ಹಲವು ಪ್ರದೇಶಗಳಲ್ಲಿ ಚಳಿಗಾಲದ ಒತ್ತಡ ಮಾದರಿ ಭಾರಿ ಹಿಮಪಾತವಾಗಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣ ಆಗಿದೆ.

ಜಪಾನ್ ದೇಶದಲ್ಲಿ ಪದೇ ಪದೇ ಭೂಕಂಪನ ಸಂಭವಿಸುವುದು ಹಾಗೂ ಸುನಾಮಿ ಎಚ್ಚರಿಕೆಗಳು ಮಾಮೂಲಿ. ಆದರೆ ಈ ಬಾರಿ ಭೀಕರ ಹಿಮಪಾತ ಕೂಡ ಜಪಾನ್ ಜನರನ್ನು ಹಿಂಡುತ್ತಾ ಇದೆ, ಅಲ್ಲದೆ ಈ ರೀತಿ ಭೀಕರವಾಗಿ ಸುರಿಯುತ್ತಿರುವ ಹಿಮಪಾತ ಈಗಾಗಲೇ ಸುಮಾರು 30ಕ್ಕೂ ಹೆಚ್ಚು ಜನರ ಜೀವ ತೆಗೆದಿದೆ. ಇದರ ಜೊತೆಗೆ 324 ಜನರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದು, ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಿ ಜನರನ್ನು ರಕ್ಷಣೆ ಮಾಡಲು ಹಗಲು & ರಾತ್ರಿ ಪರದಾಡುತ್ತಿದ್ದಾರೆ. ಜನರು ಈಗ ಮನೆಯಿಂದ ಹೊರ ಬರಬೇಕು ಎಂದರೆ ನೂರು ಬಾರಿ ಯೋಚಿಸುವ ಪರಿಸ್ಥಿತಿ ಜಪಾನ್ ನೆಲದಲ್ಲಿ ನಿರ್ಮಾಣ ಆಗಿದೆ.

Japan Snowfall

ಹಿಮ ತೆರವು ಮಾಡುವಾಗಲೇ ಸಮಸ್ಯೆ

ಕಳೆದ ಕೆಲ ವಾರಗಳಿಂದ ಜಪಾನ್ ದೇಶದಲ್ಲಿ ಚಳಿ ಹೆಚ್ಚಾಗಿದ್ದು, ಭಾರಿ ಪ್ರಮಾಣದಲ್ಲಿ ಹಿಮ ಬೀಳುತ್ತಿದೆ. ಹೀಗಿದ್ದಾಗಲೇ ಸರ್ಕಾರ ಕೂಡ ಪರಿಸ್ಥಿತಿ ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ಜಾರಿಗೆ ತಂದಿದ್ದು, ಚಳಿಗಾಲದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಮುಕ್ತಿ ಕೊಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಹೀಗಿದ್ದರೂ ಪ್ರಕೃತಿ ಮಾತೆಯ ಮುನಿಸು ದೊಡ್ಡದಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಫೆಬ್ರವರಿ 2 ಮಂಗಳವಾರದ ತನಕ 8 ಪ್ರಾಂತ್ಯಗಳಲ್ಲಿ ಹಿಮಪಾತ ಹಿನ್ನೆಲೆ ಭಾರಿ ಪ್ರಮಾಣದ ಸಾವುನೋವು ವರದಿಯಾಗಿದೆ. ಹಿಮ ತೆರವುಗೊಳಿಸುವ ಸಮಯದಲ್ಲೇ ಭಾರಿ ಹೆಚ್ಚಿನ ಪ್ರಮಾಣದಲ್ಲಿ ಜೀವಹಾನಿ ಆಗಿರುವುದು ಬೆಳಕಿಗೆ ಬಂದಿದ್ದು, ಜನರಿಗೆ ಎಚ್ಚರಿಕೆಯಿಂದ ಇರಲು ಸರ್ಕಾರ ಸೂಚನೆ ನೀಡಿದೆ.

ಒಂದೇ ಕಡೆ 255 ಸೆಂ.ಮೀ. ಹಿಮ!

ಮತ್ತೊಂದು ಕಡೆ ಟೋಕಮಾಚಿ ನಗರದಲ್ಲಿ ಹಿಮದ ಆಳವು 255 ಸೆಂ.ಮೀ. ತಲುಪಿದ್ದು, ಇದನ್ನು ತೆರವು ಮಾಡಲು ಭಾರಿ ದೊಡ್ಡ ಸಮಸ್ಯೆಗಳು ಸೃಷ್ಟಿ ಆಗುತ್ತಿವೆ. ನೀಗಾಟಾ ಪ್ರಾಂತ್ಯದಲ್ಲಿ ಸರ್ಕಾರ ಮತ್ತಷ್ಟು ವಿಪತ್ತು ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದು, ಈಗಾಗಲೇ ಸಹಾಯ ಕೇಂದ್ರ ಸ್ಥಾಪಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಶಾನ್ಯ ಜಪಾನ್‌ನ ಅಮೋರಿ ಪ್ರಾಂತ್ಯದ ಮೇಲೂ ಹಿಮಪಾತ ದೊಡ್ಡ ಪರಿಣಾಮ ಬೀರಿದ್ದು, ಈ ಭಾಗದಲ್ಲಿ ಹಿಮ ಸಂಗ್ರಹವು ಬರೋಬ್ಬರಿ 183 ಸೆಂಟಿಮೀಟರ್‌ಗೆ ತಲುಪಿಬಿಟ್ಟಿದೆ. ಇದು ವಾರ್ಷಿಕ ಸರಾಸರಿಗಿಂತ ಸುಮಾರು 2.7 ಪಟ್ಟು ಹೆಚ್ಚು ಎಂದು ಅಂದಾಜು ಕೂಡ ಮಾಡಲಾಗಿದೆ. ಭಾರಿ ಹಿಮಪಾತದ ಹಿನ್ನೆಲೆ ಮನೆಗಳ ಛಾವಣಿ ಕುಸಿತ ಕೂಡ ದುರಂತಗಳು ಹೆಚ್ಚಲು ಕಾರಣ ಆಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+