ಜಪಾನ್ : 19 ಮಂದಿ ಅಮಾಯಕರ ದಾರುಣ ಹತ್ಯೆ

Posted By:
Subscribe to Oneindia Kannada

ಟೋಕಿಯೋ, ಜುಲೈ 26: ಜಪಾನ್ ನ ಪಶ್ವಿಮ ಭಾಗದ ಸಂಗಮಿಹಾರಾದಲ್ಲಿರುವ ಮಂಗಳವಾರ ಬೆಳಗ್ಗೆ ಆಘಾತಕಾರಿ ಘಟನೆ ನಡೆದಿದೆ. ಕೇರ್ ಸೆಂಟರ್ ರೊಂದರಲ್ಲಿ ವ್ಯಕ್ತಿಯೊಬ್ಬ 19 ಜನ ಅಮಾಯಕರನ್ನು ಚಾಕುವಿನಿಂದ ಕೊಂದು ಹಾಕಿದ್ದಾರೆ.

ಎರಡನೇ ವಿಶ್ವಯುದ್ಧದ ಬಳಿಕ ಇದು ಅತ್ಯಂತ ಘೋರ ಸರಣಿ ಹತ್ಯೆ ಪ್ರಕರಣವಾಗಿದೆ. ಅಂಗವಿಕಲರು, ಅಬಲೆಯರನ್ನು ಹೊಂದಿದ್ದ ಕೇಂದ್ರಕ್ಕೆ ನುಗ್ಗಿದ ವ್ಯಕ್ತಿ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿ, ಎಲ್ಲರನ್ನು ಕೊಂದು ಹಾಕಿದ್ದಾನೆ.

ನನಗೆ ಅಂಗವಿಕಲರನ್ನು ನಿರ್ಮೂಲನೆ ಮಾಡಬೇಕಿತ್ತು. ಹಾಗಾಗಿ ಹೀಗೆ ಮಾಡಿದೆ ಎಂದು ಪೊಲೀಸರ ಮುಂದೆ ಶರಣಾದ ವ್ಯಕ್ತಿ ಹೇಳಿಕೆ ನೀಡಿದ್ದಾನೆ. ಇದೇ ಕೇರ್ ಸೆಂಟರ್ ನಲ್ಲಿ ಆತ ಈ ಮುಂಚೆ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

Japan Sagamihara knife attack: 19 killed at care centre

26 ವರ್ಷ ವಯಸ್ಸಿನ ಸತೋಶಿ ಉಮೆತ್ಸು ಎಂಬ ಆರೋಪಿ ತ್ಸುಕಿಯಿ ಯಮಯೂರಿ ಗಾರ್ಡನ್ ನಲ್ಲಿರುವ ಕೇಂದ್ರದಲ್ಲಿ ಪುರುಷರ ಹಾಗೂ ಮಹಿಳೆಯರ ಮೇಲೆ 17.30 GMT ಹಲ್ಲೆ ಮಾಡಿದ್ದಾನೆ. 8 ಜನ ಸಿಬ್ಬಂದಿ ಈ ಸಮಯದಲ್ಲಿ ಕರ್ತವ್ಯ ನಿರತರಾಗಿದ್ದರು.

18 ವರ್ಷ ವಯಸ್ಸಿನಿಂದ 70 ವರ್ಷ ವಯಸ್ಸಿನ ತನಕದ ಜನರನ್ನು ಕೊಂದು ಹಾಕಲಾಗಿದೆ. 25 ಮಂದಿ ಗಾಯಗೊಂಡಿದ್ದು ಈ ಪೈಕಿ 20 ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nineteen residents have been killed in a knife attack at a care centre for people with mental disabilities in Japan, The early morning attack in Sagamihara, west of Tokyo, is the worst mass killing in the country since the end of World War Two. BBC reports
Please Wait while comments are loading...