ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ಬುಲೆಟ್ ರೈಲಿಗೆ ವಿಮಾನವೂ ಸಾಟಿಯಿಲ್ಲ!

|
Google Oneindia Kannada News

ಟೋಕಿಯೊ, ಏ. 22: ಬೆಳಕಿನ ವೇಗ, ಶಬ್ದದ ವೇಗ ಎಷ್ಟು? ಎಂಬುದನ್ನು ಕೇಳಿದ್ದೇವೆ ಆದರೆ ಅದನ್ನು ಅನುಭವಿಸಲು ಸಾಧ್ಯವಾಗಿಲ್ಲ. ಆದರೆ ಜಪಾನ್ ತಂತ್ರಜ್ಞಾನ ಈ ವೇಗಕ್ಕೆ ಸಾಟಿಯಾಗುವಂಥ ರೈಲನ್ನು ನಿರ್ಮಾಣ ಮಾಡಿ ಪ್ರಯೋಗಾರ್ಥ ಓಡಾಟನ್ನು ನಡೆಸಿದೆ.

ಜಪಾನ್ ಹೊಸ ವಿಕ್ರಮವೊಂದನ್ನು ಸಾಧಿಸಿದೆ. ವಿಶ್ವದ ಅತ್ಯಂತ ವೇಗದ ಬುಲೆಟ್ ರೈಲನ್ನು ಜಪಾನ್​ನಲ್ಲಿ ಮಂಗಳವಾರ ಪರೀಕ್ಷೆಗೆ ಒಳಪಡಿಸಲಾಗಿದ್ದು, ರೈಲು 603 ಕಿ.ಮೀ. (373 ಮೈಲು) ಪ್ರತಿ ಗಂಟೆ ವೇಗದಲ್ಲಿ ಸಂಚರಿಸಿ ದಾಖಲೆ ನಿರ್ಮಿಸಿದೆ.[ಬೆಂಗಳೂರು-ಮೈಸೂರು ಬುಲೆಟ್ ರೈಲು ಭಾಗ್ಯ ಅಸಾಧ್ಯ]

train

ಅಯಸ್ಕಾಂತ ಬಲದಿಂದ ಸಂಚರಿಸುವ ರೈಲು ಪರೀಕ್ಷಾರ್ಥ ಸಂಚಾರದಲ್ಲಿ ಗರಿಷ್ಠ 603 ಕಿ.ಮೀ. ವೇಗದಲ್ಲಿ ಸಂಚರಿಸಿದೆ. ಸರಾಸರಿ 600 ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಮೂಲಕ ಹಿಂದಿನ ದಾಖಲೆಗಳನ್ನೆಲ್ಲ ಮುರಿದಿದೆ ಎಂದು ಜಪಾನ್ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೈಲು ಒಂದು ವಾರದ ಹಿಂದೆ ಪ್ರಯೋಗಾರ್ಥ ಸಂಚಾರ ಮಾಡಿದ್ದಾಗ 590 ಕಿ.ಮೀ. ವೇಗದಲ್ಲಿ ಸಂಚರಿಸಿತ್ತು, ಈ ಮೂಲಕ 2003ರಲ್ಲಿ ನಿರ್ಮಿಸಿದ್ದ 581 ಕಿ.ಮೀ. ವೇಗದ ದಾಖಲೆಯನ್ನು ಅಳಿಸಿಹಾಕಿತ್ತು.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಅಯಸ್ಕಾಂತಿಯ ಬಲದ ರೈಲು ಹಳಿಯಿಂದ 4 ಇಂಚು ಎತ್ತರದಲ್ಲಿ ತೇಲುತ್ತಾ ಸಂಚರಿಸುತ್ತದೆ. ರೈಲಿಗೆ ವಿದ್ಯುತ್​ಚ್ಛಕ್ತಿ ಆಧರಿತ ಅಯಸ್ಕಾಂತಗಳು ಚಲನ ಶಕ್ತಿ ನೀಡುತ್ತವೆ. ಜಪಾನ್ 2027ರ ವೇಳೆಗೆ ಟೋಕಿಯೋ ಮತ್ತು ನಗೋಯ ನಗರಗಳ ನಡುವೆ 286 ಕಿ.ಮೀ. ದೂರದ ಹಳಿ ನಿರ್ಮಿಸಿ ರೈಲು ಸಂಚಾರ ಆರಂಭಿಸುವ ಯೋಜನೆ ಹೊಂದಿದೆ. ಕಾರಿನಲ್ಲಿ ಸಂಚರಿಸಲು 5 ಗಂಟೆ ಕಾಲ ಬೇಕು. ಆದರೆ ಈ ರೈಲು ಕಾರ್ಯರೂಪಕ್ಕೆ ಬಂದರೆ 40 ನಿಮಿಷದಲ್ಲಿ ಎರಡು ನಗರಗಳ ನಡುವೆ ಸಂಚರಿಸಬಹುದು.

ತಂತ್ರಜ್ಞಾನವನ್ನು ವಿದೇಶಗಳಿಗೆ ಮಾರಾಟ ಮಾಡಲು ಜಪಾನ್ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ವಿಮಾನ ಹಾರಾಟದ ಅನುಭವವನ್ನು ರೈಲಿನಲ್ಲಿಯೇ ಪಡೆಯಬಹುದಾಗಿದೆ.

English summary
A Japan Railway maglev train hit 603 kilometers per hour (374 miles per hour) on an experimental track in Yamanashi Tuesday, setting a decisive new world record. A spokesperson said the train spent 10.8 seconds traveling above 600 kilometers per hour, during which it covered 1.8 kilometers (1.1 miles).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X