ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್‌ನಲ್ಲಿ ಪ್ರಬಲ ಭೂಕಂಪಕ್ಕೆ ಇಬ್ಬರು ಬಲಿ, ನೂರಾರು ಮಂದಿಗೆ ಗಾಯ

|
Google Oneindia Kannada News

ಟೋಕಿಯೋ, ಮಾರ್ಚ್ 17: ಜಪಾನ್ ನ ಫುಕುಶಿಮಾ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಈ ಭೂಕಂಪಕ್ಕೆ ಇಬ್ಬರು ಬಲಿಯಾದರೆ ನೂರಾರು ಮಂದಿಗೆ ಗಾಯವಾಗಿದೆ. ಈಗಾಗಲೇ ಜಪಾನ್ ದೇಶದ ಉತ್ತರ ಭಾಗದಲ್ಲಿ ಕಂಪನ ಕಂಡು ಬಂದಿದ್ದು, ಭೂಕಂಪನದ ಬೆನ್ನಲ್ಲೇ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಹಲವಾರು ಪ್ರದೇಶದಲ್ಲಿ ವಿದ್ಯುತ್‌ ಕಡಿತವಾಗಿದೆ.

ಈಶಾನ್ಯ ಜಪಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 94 ಮಂದಿ ಗಾಯಗೊಂಡಿದ್ದಾರೆ. ಟೋಕಿಯೊದಲ್ಲಿ ಸುಮಾರು 275 ಕಿಲೋಮೀಟರ್ (170 ಮೈಲುಗಳು) ದೂರದಲ್ಲಿರುವ ಕಟ್ಟಡಗಳನ್ನು ಈ ಭೂಕಂಪನವು ಅಲುಗಾಡಿಸಿದೆ. ರಾಜಧಾನಿ ಸೇರಿದಂತೆ ಲಕ್ಷಾಂತರ ಜನರು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

Breaking: ಜಪಾನ್‌ನಲ್ಲಿ ಪ್ರಬಲ ಭೂಕಂಪ, ಸುನಾಮಿ ಅಲರ್ಟ್ Breaking: ಜಪಾನ್‌ನಲ್ಲಿ ಪ್ರಬಲ ಭೂಕಂಪ, ಸುನಾಮಿ ಅಲರ್ಟ್

ಮುಂದಿನ ಎರಡು ಮೂರು ದಿನಗಳಲ್ಲಿ ಮತ್ತಷ್ಟು ಪ್ರಬಲವಾದ ಕಂಪನಗಳ ಸಾಧ್ಯತೆಯ ಬಗ್ಗೆ ಸರ್ಕಾರವು ಹೆಚ್ಚಿನ ಎಚ್ಚರಿಕೆಯನ್ನು ವಹಿಸಲಿದೆ ಎಂದು ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಹೇಳಿದರು. ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ ಗುರುವಾರದಂದು ಕನಿಷ್ಠ 94 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Japan Earthquake: Two Killed, Dozens Injured After 7.3-Magnitude Quake Shakes East Japan

ಈಶಾನ್ಯ ಕರಾವಳಿಯಲ್ಲಿ ಸುನಾಮಿ ಅಲರ್ಟ್ ಈಗ ಇಲ್ಲವಾಗಿದ್ದು, ಗುರುವಾರ ಮುಂಜಾನೆ ರಾಜಧಾನಿಗೆ ವಿದ್ಯುತ್ ಅನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ. ಆದರೂ ಇತರೆಡೆ ಜನರು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಶಿಂಕನ್‌ಸೆನ್ ಬುಲೆಟ್ ರೈಲು ಸೇವೆಯನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸುವುದರೊಂದಿಗೆ ಈಶಾನ್ಯಕ್ಕೆ ಸಾರಿಗೆ ಸಂಪರ್ಕಗಳು ಸಹ ಅಸ್ತವ್ಯಸ್ತಗೊಂಡಿದೆ. ಸುರಕ್ಷತಾ ತಪಾಸಣೆಗಾಗಿ ಪ್ರದೇಶಕ್ಕೆ ಕನಿಷ್ಠ ಒಂದು ಪ್ರಮುಖ ಹೆದ್ದಾರಿಯನ್ನು ಮುಚ್ಚಲಾಗಿದೆ.

ಹಳಿ ತಪ್ಪಿದ ಬುಲೆಟ್‌ ರೈಲು

ಫುಕುಶಿಮಾ ಪ್ರದೇಶವು 11 ವರ್ಷಗಳ ಹಿಂದೆ ವಿಶ್ವದ ಅತ್ಯಂತ ಶಕ್ತಿಶಾಲಿ ಭೂಕಂಪಗಳಿಂದ ಧ್ವಂಸಗೊಂಡಿತು ಮತ್ತು ಅದು ಸೃಷ್ಟಿಸಿದ ಸುನಾಮಿಯು ಫುಕುಶಿಮಾದಲ್ಲಿನ ಪರಮಾಣು ಸ್ಥಾವರವನ್ನು ನಾಶಪಡಿಸಿತು. ದುರ್ಬಲಗೊಂಡ ಫುಕುಶಿಮಾ ಸ್ಥಾವರದಲ್ಲಿನ ಟರ್ಬೈನ್ ಕಟ್ಟಡದಲ್ಲಿ ಅಗ್ನಿಶಾಮಕ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು.

ಸುಮಾರು 100 ಜನರನ್ನು ಹೊತ್ತಿದ್ದ ಶಿಂಕನ್ಸೆನ್ ಬುಲೆಟ್ ರೈಲು ಹಳಿತಪ್ಪಿದ್ದು ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಇನ್ನು ಸ್ಥಳೀಯ ವಿದ್ಯುತ್ ಪೂರೈಕೆದಾರರು ಟೋಕಿಯೊದಲ್ಲಿ ಸುಮಾರು 700,000 ಮನೆಗಳು ಮತ್ತು ಜಪಾನ್‌ನ ಈಶಾನ್ಯದಲ್ಲಿ 156,000 ಮನೆಗಳು ಭೂಕಂಪನದ ನಂತರ ತಕ್ಷಣವೇ ವಿದ್ಯುತ್ ಕಳೆದುಕೊಂಡಿದೆ. ಆದರೆ ಬಳಿಕ ಮತ್ತೆ ವಿದ್ಯುತ್‌ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇಶಿನೋಮಕಿಯಲ್ಲಿ, ನಗರದ ಅಧಿಕಾರಿಯೊಬ್ಬರು ಎಎಫ್‌ಪಿಗೆ ಮಾಹಿತಿ ನೀಡಿದ್ದು, "ನಾನು ನೆಲದ ಕಂಪನವನ್ನು ಅನುಭವಿಸಿದೆ. ಭಯಭೀತರಾಗುವುದಕ್ಕಿಂತ ಹೆಚ್ಚಾಗಿ, ನಾನು ತಕ್ಷಣವೇ ಗ್ರೇಟ್ ಈಸ್ಟ್ ಜಪಾನ್ ಭೂಕಂಪವನ್ನು ನೆನಪಿಸಿಕೊಂಡಿದ್ದೇನೆ," ಎಂದು 2011 ರ ದುರಂತವನ್ನು ಉಲ್ಲೇಖಿಸಿ ಹೇಳಿದರು.

2011ರ ನೆನಪು

2011ರ ಸುನಾಮಿಯಲ್ಲಿ 2,500 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಮಹಿಳೆಯೊಬ್ಬರ ಅಸ್ಥಿಪಂಜರ 2021ರಲ್ಲಿ ಪತ್ತೆಯಾಗಿ ಅಚ್ಚರಿ ಮೂಡಿಸಿತ್ತು. ಮಿಯಾಗಿಯ ಈಶಾನ್ಯ ಕಡಲತೀರದಲ್ಲಿ ಫೆಬ್ರವರಿ 17 ರಂದು ತಲೆಬುರುಡೆ ಸೇರಿದಂತೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದರು. 2011ರ ಮಾರ್ಚ್ 11ರಂದು ನಾಪತ್ತೆಯಾಗಿದ್ದ ನಾಟ್ಸುಕೋ ಒಕ್ಯುಹಾಮಾ ಎಂಬ ಮಹಿಳೆಯ ಅಸ್ಥಿ ಪಂಜರ ಇದಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ದೃಢಪಡಿಸಿದ್ದರು. (ಒನ್‌ಇಂಡಿಯಾ ಸುದ್ದಿ)

Recommended Video

ಅಪ್ಪುಗಾಗಿ ಅಭಿಮಾನಿಗಳು ಇವತ್ತು ಏನೇನ್ ಮಾಡಿದ್ದಾರೆ ಗೊತ್ತಾ? | Oneindia Kannada

English summary
Japan Earthquake: Two killed, dozens injured after 7.3-magnitude quake shakes east Japan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X