ಅಂದು ಬಾಲಕೋಟ್ ನಲ್ಲಿ ಏನಾಯ್ತು? ಜೈಷ್ ಮದರಸಾ ವಿದ್ಯಾರ್ಥಿ ಬಿಚ್ಚಿಟ್ಟ ಸತ್ಯ

Recommended Video

      ಈ ಸತ್ಯ ಗೊತ್ತಾದ್ರೆ ಸಾಕ್ಷಿ ಕೇಳೋರು ಸುಮ್ಮನಾಗ್ತಾರಾ..? | Oneindia Kannada

      ಬಾಲಕೋಟ್, ಮಾರ್ಚ್ 05: "ಫೆಬ್ರವರಿ 26 ರ ನಸುಕಿನಲ್ಲಿ ನಾವೆಲ್ಲ ನಿದ್ರಿಸುತ್ತಿದ್ದೆವು. ಇದ್ದಕ್ಕಿದ್ದಂತೇ ದೊಡ್ಡ ಶಬ್ದ ಕೇಳಿತು. ಏನಾಗುತ್ತಿದೆ ಎಂಬುದು ಗೊತ್ತಾಗುವ ಮೊದಲೇ ಪಾಕ್ ಸೇನಾ ಸಿಬ್ಬಂದಿ ಬಂದು ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿದ್ದರು" ಎಂದು ಬಾಲಕೋಟ್ ನಲ್ಲೇ ಇರುವ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ನಡೆಸುವ ಮದರಸಾವೊಂದರ ವಿದ್ಯಾರ್ಥಿ ಭಾರತದಲ್ಲಿರುವ ತನ್ನ ಸಂಬಂಧಿಕರಿಗೆ ಹೇಳಿದ್ದಾನೆ.

      ಏರ್ ಸ್ಟ್ರೈಕ್ ನಡೆದಿದ್ದೇ ಸುಳ್ಳು, ಸಾಕ್ಷಿ ಕೊಡಿ ಎನ್ನುತ್ತಿದ್ದ ಕೆಲ 'ಅಸಹಿಷ್ಣು' ಭಾರತೀಯರಿಗೂ ಆತನ ಮಾತಿನಲ್ಲಿ ಉತ್ತರ ದೊರಕಿದಂತಾಗಿದೆ.

      ಜೈಷ್ ಮದರಸಾದ ವಿದ್ಯಾರ್ಥಿಯೊಬ್ಬ ಭಾರತದಲ್ಲಿರುವ ತನ್ನ ಸಂಬಂಧಿಕರಿಗೆ ಬಾಲಕೋಟ್ ಏರ್ ಸ್ಟ್ರೈಕ್ ನ ಬಗ್ಗೆ ಹೇಳಿದ್ದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

      ಆತನ ಮಾತು ಮತ್ತು ಜಾಗತಿಕ ಮಾಧ್ಯಮಗಳು ಸಹ ಈ ಘಟನೆಯ ಬಗ್ಗೆ ಸ್ಥಳೀಯರು ನೀಡೀದ ಹೇಳಿಕೆಗಳನ್ನು ಪ್ರಕಟಿಸಿದ್ದನ್ನು ತಾಳೆ ಮಾಡಿ ನೋಡಿದರೆ ಪಾಕಿಸ್ತಾನ ಎಂಥ ಕುತಂತ್ರಿ ರಾಷ್ಟ್ರ ಎಂಬುದು ಸಾಬೀತಾಗುತ್ತದೆ. ಉಗ್ರರಿಗೆ ತಾನು ನೆಲೆ ನೀಡುತ್ತಿಲ್ಲ, ಜೈಷ್ ಕೈವಾಡಕ್ಕೆ ಸಾಕ್ಷಿ ನೀಡಿ ಎಂದೆಲ್ಲ ಹಲಬುವ ಪಾಕಿಸ್ತಾನ ಉಗ್ರರನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

      ನಮ್ಮ ರಕ್ಷಣೆಗೆ ಬಂದ ಸೇನೆ!

      ನಮ್ಮ ರಕ್ಷಣೆಗೆ ಬಂದ ಸೇನೆ!

      "ನಸುಕಿಲ್ಲಿ ಜೋರಾದ ಶಬ್ದ ಕೇಳುತ್ತಿದ್ದಂತೆಯೇ ನಾವೆಲ್ಲ ಹೆದರಿದೆವು. ಎದ್ದು ಏನಾಗುತ್ತಿದೆ ಎಂದು ನೋಡುತ್ತಿದ್ದಂತೆಯೇ ಪಾಕಿಸ್ತಾನದ ಸೇನೆ ನಮ್ಮ ರಕ್ಷಣೆಗೆ ಬಂತು. ನಮ್ಮನ್ನು ತಕ್ಷಣ ಅಲ್ಲಿಂದ ಸ್ಥಳಾಂತರಿಸಲಾಯ್ತು" ಎಂದು ಮದರಸಾ ವಿದ್ಯಾರ್ಥಿ ಹೇಳಿಕೊಂಡಿದ್ದಾನೆ.

      ಕೆಲ ದಿನ ಸೇನೆಯೇ ಆಶ್ರಯ ನೀಡಿತ್ತು!

      ಕೆಲ ದಿನ ಸೇನೆಯೇ ಆಶ್ರಯ ನೀಡಿತ್ತು!

      "ಬಾಲಕೋಟ್ ನಿಂದ ನಮ್ಮನ್ನು ಸ್ಥಳಾಂತರಿಸಿದ ನಂತರ, ಕೆಲದಿನ ಸೇನೆಯೇ ನಮ್ಮನ್ನು ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿತ್ತು. ನಂತರ ನಮ್ಮನ್ನು ನಮ್ಮ ನಮ್ಮ ಮನೆಗೆ ವಾಪಸ್ ಕಳಿಸಲಾಯತು" ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾನೆ.

      ಉಗ್ರರಿಗೆ ತಕ್ಷಣ ರಕ್ಷಣೆ ಮನೀಡುವ ಅಗತ್ಯವೇನಿತ್ತು?

      ಉಗ್ರರಿಗೆ ತಕ್ಷಣ ರಕ್ಷಣೆ ಮನೀಡುವ ಅಗತ್ಯವೇನಿತ್ತು?

      ಹಾಗೆ ನೋಡುವುದಕ್ಕೆ ಹೋದರೆ ಭಾರತ ಪಾಕಿಸ್ತಾನದ ಸೇನೆಯ ಮೇಲಾಗಲೀ, ಅಲ್ಲಿನ ಜನರ ಮೇಲಾಗಲಿ ದಾಳಿ ಮಾಡಿರಲಿಲ್ಲ. ಅದು ದಾಳಿ ಮಾಡಿದ್ದು ಉಗ್ರ ನೆಲೆಯ ಮೇಲೆ. ಉಗ್ರ ದಮನಕ್ಕೆ ತಾನೂ ಕೈಜೋಡಿಸುತ್ತೇನೆ ಎನ್ನುವ ಪಾಕಿಸ್ತಾನದ ಮಾತು ಸತ್ಯವಾಗಿದ್ದರೆ, ದಾಳಿ ನಡೆದ ತಕ್ಷಣವೇ ಉಗ್ರನೆಲೆಗೆ ತೆರಳಿ ರಕ್ಷಣಾ ಕಾರ್ಯ ಆರಂಭಿಸುವ ಅಗತ್ಯ ಏನಿತ್ತು?

      ಮಾಧ್ಯಮಗಳಿಗೆ ಹೇಳಿಕೆ ನೀಡಬೇಡಿ ಎಂಬ ಬೆದರಿಕೆ

      ಮಾಧ್ಯಮಗಳಿಗೆ ಹೇಳಿಕೆ ನೀಡಬೇಡಿ ಎಂಬ ಬೆದರಿಕೆ

      ಬಾಲಕೋಟ್ ದಾಳಿಯ ನಂತರ ಹಲವು ಪತ್ರಕರ್ತರು ಬಾಲಕೋಟ್ ನ ಸುತ್ತಮುತ್ತಲ ಊರಿನ ಜನರನ್ನು ಘಟನೆಯ ಬಗ್ಗೆ ಪ್ರತಿಕ್ರಿಯೆ ಕೇಳಿದ್ದರು. ಆದರೆ ಅಷ್ಟರಲ್ಲಾಗಲೇ ಸೇನೆ ಅವರ ಬಾಯಿ ಮುಚ್ಚಿಸಿತ್ತು. ಯಾರೇ ಬಂದರೂ ಹೇಳಿಕೆ ನೀಡಬಾರದು ಎಂದು ಪಾಕಿಸ್ತಾನೀ ಸೇನೆ ಎಚ್ಚರಿಕೆ ನೀಡಿತ್ತು. ಅದನ್ನು ಸ್ಥಳೀಯರೇ ಹೇಳಿಕೊಂಡಿದ್ದಾರೆ. "ಆ ಘಟನೆಯಂದು ಮೂವತ್ತು-ಮೂವತ್ತೈದು ಹೆಣಗಳನ್ನು ಪಾಕ್ ಸೇನೆ ಎತ್ತಿ, ಕ್ಷಣ ಮಾತ್ರದಲ್ಲೇ ಸ್ಥಳಾಂತರಿಸಿದ್ದನ್ನು ನಾವು ನೋಡಿದ್ದೇವೆ. ಆದರೆ ಅದ್ಯಾವುದನ್ನೂ ಹೇಳದಂತೆ ನಮಗೆ ಬೆದರಿಕೆ ಹಾಕಲಾಯ್ತು. ಅಲ್ಲಿಗೆ ಬಂದಿದ್ದ ಅಂಬುಲೆನ್ಸ್ ನಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಬಳಿ ಇದ್ದ ಮೊಬೈಲ್ ಫೋನ್ ಗಳನ್ನು ಕಸಿದುಕೊಳಳ್ಳಲಾಯ್ತು" ಎಂದು ಸ್ಥಳೀಯರು ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+