ಸೂಪರ್ ಸುದ್ದಿ: ಎರಡು ದಿನಗಳಲ್ಲಿ ಕೊರೊನಾನ ಕೊಲ್ಲುತ್ತೆ ಈ ಔಷಧಿ.!

ಇಡೀ ವಿಶ್ವಕ್ಕೆ ಮಾರಣಾಂತಿಕ ಕೊರೊನಾ ವೈರಸ್ ಮಹಾಮಾರಿಯಾಗಿ ಕಾಡುತ್ತಿದೆ. ಕೋವಿಡ್-19 ಇಲ್ಲಿಯವರೆಗೂ 74,767 ಮಂದಿಯನ್ನು ಬಲಿ ಪಡೆದಿದೆ.

Recommended Video

      ಕುಟುಂಬವನ್ನು ನೆನೆದು ಕಣ್ಣೀರು ಹಾಕಿದ ಮಹಿಳಾ ಡಾಕ್ಟರ್ | Oneindia Kannada

      ಅತ್ತ ಕೊರೊನಾ ವೈರಸ್ ನಿಂದ ದಿನೇ ದಿನೇ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದ್ದರೆ, ಇತ್ತ ಕೊರೊನಾ ವೈರಸ್ ನ ತಡೆಗಟ್ಟಲು ಸಂಶೋಧಕರು, ವಿಜ್ಞಾನಿಗಳು ಹಗಲಿರುಳು ವಿವಿಧ ಪ್ರಯೋಗ, ಅಧ್ಯಯನಗಳನ್ನು ಮಾಡುತ್ತಲೇ ಇದ್ದಾರೆ.

      ಸದ್ಯ ವಿಜ್ಞಾನಿಗಳ ಅಧ್ಯಯನದಿಂದ ಒಂದು ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಈಗಾಗಲೇ ಲಭ್ಯವಿರುವ ಒಂದು ಔಷಧಿ ಡೆಡ್ಲಿ ನೋವೆಲ್ ಕೊರೊನಾ ವೈರಸ್ ನ ಕೇವಲ ಎರಡು ದಿನಗಳಲ್ಲಿ.. ಅಂದ್ರೆ 48 ಗಂಟೆಗಳಲ್ಲಿ ಕೊಲ್ಲುವ ಶಕ್ತಿ ಹೊಂದಿರುವ ಬಗ್ಗೆ ಸಂಶೋಧಕರಿಗೆ ತಿಳಿದು ಬಂದಿದೆ.

      ಯಾವುದು ಆ ಔಷಧಿ.?

      ಯಾವುದು ಆ ಔಷಧಿ.?

      ಕೊರೊನಾ ವೈರಸ್ ನ 48 ಗಂಟೆಗಳಲ್ಲಿ ಕೊಲ್ಲುವ ಶಕ್ತಿ ಈಗಾಗಲೇ ವಿಶ್ವದಾದ್ಯಂತ ಲಭ್ಯವಿರುವ Ivermectin, anti-parasitic ಡ್ರಗ್ ಗೆ ಇದೆ ಎಂಬುದು ಅಧ್ಯಯನದ ಮೂಲಕ ಬಹಿರಂಗವಾಗಿದೆ. antiviral ರಿಸರ್ಚ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, Ivermectin ಎಂಬ ಔಷಧಿ ಕೋವಿಡ್-19 ಗೆ ಕಾರಣವಾಗುವ ವೈರಸ್ ಅನ್ನು 48 ಗಂಟೆಗಳ ಒಳಗೆ ನಾಶಪಡಿಸಿದೆ.

      24 ಗಂಟೆಗಳಲ್ಲಿ ವೈರಸ್ ಕ್ಷೀಣ

      24 ಗಂಟೆಗಳಲ್ಲಿ ವೈರಸ್ ಕ್ಷೀಣ

      ''Ivermectin ಡ್ರಗ್ ನ ಸಿಂಗಲ್ ಡೋಸ್ ನಿಂದ, 24 ಗಂಟೆಗಳಲ್ಲಿ ವೈರಸ್ ಕ್ಷೀಣಿಸುತ್ತದೆ. 48 ಗಂಟೆಗಳಲ್ಲಿ ಎಲ್ಲಾ ವೈರಲ್ RNA ನಾಶವಾಗುತ್ತದೆ'' ಎಂದು ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾನಿಲಯದ ಕೈಲಿ ವ್ಯಾಗ್ ಸ್ಟ್ಯಾಫ್ ತಿಳಿಸಿದ್ದಾರೆ.

      ಹಲವು ವೈರಸ್ ಗಳ ವಿರುದ್ಧ ಪರಿಣಾಮಕಾರಿ

      ಹಲವು ವೈರಸ್ ಗಳ ವಿರುದ್ಧ ಪರಿಣಾಮಕಾರಿ

      Ivermectin ಎಂಬುದು ಈಗಾಗಲೇ ಅನುಮೋದಿತ anti-parasitic ಡ್ರಗ್ ಆಗಿದ್ದು, ಹೆಚ್.ಐ.ವಿ, ಡೆಂಘೀ, ಇನ್ ಫ್ಲೂಯೆನ್ಝಾ, ಝೀಕಾ ವೈರಸ್ ಸೇರಿದಂತೆ ಹಲವು ವೈರಸ್ ಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿದೆ.

      ಕ್ಲಿನಿಕಲ್ ಪ್ರಯೋಗದ ಅವಶ್ಯಕತೆ ಇದೆ

      ಕ್ಲಿನಿಕಲ್ ಪ್ರಯೋಗದ ಅವಶ್ಯಕತೆ ಇದೆ

      ''Ivermectin ಸೇಫ್ ಡ್ರಗ್. ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಆದ್ರೆ, ಇದನ್ನೇ ಕೋವಿಡ್-19ಗೂ ಬಳಸಬಹುದೇ, ಬಳಸುವುದೇ ಆದಲ್ಲಿ ಎಷ್ಟು ಡೋಸೇಜ್ ಬೇಕಾಗುತ್ತದೆ, ಮನುಷ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಕ್ಲಿನಿಕಲ್ ಪ್ರಯೋಗದ ಅವಶ್ಯಕತೆ ಇದೆ'' ಎಂದಿದ್ದಾರೆ ಕೈಲಿ ವ್ಯಾಗ್ ಸ್ಟ್ಯಾಫ್

      ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶದ ಮೇಲೆ ಮುಂದಿನ ತೀರ್ಮಾನ

      ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶದ ಮೇಲೆ ಮುಂದಿನ ತೀರ್ಮಾನ

      ''ಜನರ ಮೇಲೆ Ivermectin ಪ್ರಯೋಗಿಸುವ ಅವಶ್ಯಕತೆ ಇದೀಗ ಎದುರಾಗಿದ್ದು, ಕೋವಿಡ್-19 ಅನ್ನು ತಡೆಗಟ್ಟಲು Ivermectin ಬಳಕೆಯು ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ'' ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+