ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿ ಸುದ್ದಿ: ವಿಶ್ವದ ಮೊಟ್ಟಮೊದಲ ಕೊರೊನಾ ಲಸಿಕೆ ತಯಾರಿಸಿದ ಇಟಲಿ ವಿಜ್ಞಾನಿಗಳು

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ಅಟ್ಟಹಾಸಕ್ಕೆ ಬ್ರೇಕ್ ಬೀಳುತ್ತಲೇ ಇಲ್ಲ. ಹೀಗಾಗಿ, ಅದನ್ನು ಬಗ್ಗುಬಡಿಯಲು ಲಸಿಕೆಗಳನ್ನು ಅಭಿವೃದ್ಧಿ ಪಡಿಸುವ ಔಷಧಿ ತಯಾರಕರ ಮೇಲೆ ಒತ್ತಡ ಹೆಚ್ಚಾಗಿದೆ. ಆದರೆ, ಲಸಿಕೆ ತಯಾರಿ ಎಲ್ಲರೂ ಅಂದುಕೊಂಡಷ್ಟು ಸುಲಭವಲ್ಲ.

Recommended Video

ಗ್ಯಾಸ್ ಸೋರಿಕೆಯನ್ನು ನಿಲ್ಲಿಸಲಾಗಿದೆ ಎಂದ ಅಧಿಕಾರಿ | Vizag | Oneindia Kannada

''12-18 ತಿಂಗಳ ಒಳಗೆ ಕೊರೊನಾ ವೈರಸ್ ಲಸಿಕೆ ಸಿಗಲಿದೆ'' ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯಸ್ ಡಿಸೀಸಸ್ ನ ನಿರ್ದೇಶಕ ಡಾ.ಆಂಥೋನಿ ಫೌಸಿ ಹೇಳಿದ್ದರು. ಆದರೆ, ಗ್ಲೋಬಲ್ ವ್ಯಾಕ್ಸಿನಾಲಜಿ ಅಂಡ್ ವ್ಯಾಕ್ಸಿನ್ ಪಾಲಿಸಿಯ ಪ್ರೊಫೆಸರ್ ಜಾನ್ ಆಂಡ್ರೂಸ್ ಹೇಳುವ ಪ್ರಕಾರ, ''ಲಸಿಕೆಯೊಂದು ಮಾರುಕಟ್ಟೆಗೆ ಬರಬೇಕು ಅಂದ್ರೆ.. ಏನಿಲ್ಲ ಅಂದರೂ 5-15 ವರ್ಷ ಕಾಲಾವಕಾಶ ತೆಗೆದುಕೊಳ್ಳಲಿದೆ''.

ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!ಸಿಹಿ ಸುದ್ದಿ: ಮಂಗಗಳ ಮೇಲೆ ಪ್ರಯೋಗ ಯಶಸ್ವಿ, ಸೆಪ್ಟೆಂಬರ್ ನಲ್ಲಿ ಕೊರೊನಾ ಲಸಿಕೆ!

ಇದೀಗ ಕೊರೊನಾ ವೈರಸ್ ಸೃಷ್ಟಿಸಿರುವ ಹೆಲ್ತ್ ಎಮರ್ಜೆನ್ಸಿಯಿಂದಾಗಿ ಲಸಿಕೆಯನ್ನು ಕಂಡುಹಿಡಿಯಲು ವಿಶ್ವದಾದ್ಯಂತ ವಿಜ್ಞಾನಿಗಳು ರೇಸ್ ಗೆ ಇಳಿದಿದ್ದಾರೆ. ಹೀಗಿರುವಾಗಲೇ, ಇಟಲಿಯಲ್ಲಿ ವಿಶ್ವದ ಮೊಟ್ಟ ಮೊದಲ ಕೊರೊನಾ ವೈರಸ್ ಲಸಿಕೆ ತಯಾರಿಸಲಾಗಿದೆ. ಹಾಗಂತ ಇಟಲಿಯ ವಿಜ್ಞಾನಿಗಳು ಹೇಳಿಕೊಳ್ಳುತ್ತಿದ್ದಾರೆ. ಹಾಗಾದ್ರೆ, ಈ ಲಸಿಕೆ ಪರಿಣಾಮಕಾರಿಯೇ.?

ಪರಿಣಾಮಕಾರಿಯಾಗಿದೆ.!

ಪರಿಣಾಮಕಾರಿಯಾಗಿದೆ.!

ರೋಮ್ ನಲ್ಲಿನ ಸಾಂಕ್ರಾಮಿಕ-ರೋಗದ ಸ್ವಲ್ಲಾಂಜಾನಿ ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಗಳ ಪ್ರಕಾರ, ಇಟಾಲಿಯನ್ ಕೊರೊನಾ ವೈರಸ್ ಲಸಿಕೆಯಿಂದಾಗಿ ಇಲಿಗಳಲ್ಲಿ antibodies ಉತ್ಪತ್ತಿಯಾಗಿದ್ದು, ಅವು ಮಾನವನ ಜೀವಕೋಶಗಳ ಮೇಲೂ ಪರಿಣಾಮಕಾರಿ ಕೆಲಸ ಮಾಡುತ್ತದೆ.

ವೈರಸ್ ತಟಸ್ಥ

ವೈರಸ್ ತಟಸ್ಥ

''ಮಾನವನ ಜೀವಕೋಶಗಳಲ್ಲಿ ವೈರಸ್ ತಟಸ್ಥಗೊಂಡಿರುವ ಅಂಶ ಲಸಿಕೆಯನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಕಂಡುಬಂದಿದೆ. ಇದು ಇಲ್ಲಿಯವರೆಗಿನ ಲಸಿಕೆ ಪರೀಕ್ಷೆಯ ಅತ್ಯಾಧುನಿಕ ಹಂತ. ಮಾನವನ ಮೇಲಿನ ಲಸಿಕೆ ಪರೀಕ್ಷೆಗಳು ಬರುವ ಬೇಸಿಗೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ'' ಎಂದು Takis ಸಿಇಒ ಲುಯಿಗಿ ಆರಿಶಿಚಿಯೋ ಹೇಳಿದ್ದಾರೆ. ಅಮೇರಿಕಾದ ಡ್ರಗ್ ಕಂಪನಿ LineaRx ಜೊತೆಗಿನ ಸಹಯೋಗದೊಂದಿಗೆ Takis ಸಂಸ್ಥೆ ಇಟಲಿಯಲ್ಲಿ ಕೊರೊನಾ ವೈರಸ್ ಗಾಗಿ ಲಸಿಕೆ ಅಭಿವೃದ್ಧಿ ಪಡಿಸುತ್ತಿದೆ.

ವಾವ್: ಸಂಭಾವ್ಯ ಕೊರೊನಾ ವೈರಸ್ ಲಸಿಕೆ ಮೊದಲ ಹಂತದಲ್ಲಿ ಪಾಸ್.!ವಾವ್: ಸಂಭಾವ್ಯ ಕೊರೊನಾ ವೈರಸ್ ಲಸಿಕೆ ಮೊದಲ ಹಂತದಲ್ಲಿ ಪಾಸ್.!

ಪ್ರಯೋಗ ಫಲಪ್ರದ

ಪ್ರಯೋಗ ಫಲಪ್ರದ

ಇಲಿಗಳ ಮೇಲೆ ವಿಜ್ಞಾನಿಗಳು ಲಸಿಕೆ ಪ್ರಯೋಗ ಮಾಡಿದ್ದು, ಒಂದು ಬಾರಿ ನೀಡಿದ ವ್ಯಾಕ್ಸಿನೇಷನ್ ನಂತರ ಇಲಿಗಳಲ್ಲಿ antibodies ಉತ್ಪತ್ತಿಯಾಗಿದೆ. ಅವು ವೈರಸ್ ಅನ್ನು ಮಾನವ ಜೀವಕೋಶಗಳಿಗೆ ಸೋಂಕು ತಗುಲದಂತೆ ತಡೆಯಲಿದೆ.

ವಿಜ್ಞಾನಿಗಳ ನಂಬಿಕೆ

ವಿಜ್ಞಾನಿಗಳ ನಂಬಿಕೆ

ಪ್ರಸ್ತುತ ಅಭಿವೃದ್ಧಿ ಪಡಿಸುತ್ತಿರುವ ಬಹುತೇಕ ಎಲ್ಲಾ ಲಸಿಕೆಗಳು ಡಿಎನ್ಎ ಪ್ರೋಟೀನ್ 'ಸ್ಪೈಕ್'ನ ಜೆನೆಟಿಕ್ ಮೆಟೀರಿಯಲ್ ಮೇಲೆ ಆಧಾರಿತವಾಗಿದೆ. ಲಸಿಕೆಯಿಂದ ಜೀವಕೋಶಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುವಂತೆ 'ಎಲೆಕ್ಟ್ರೋಪೊರೇಷನ್' ತಂತ್ರವನ್ನು ಅನುಸರಿಸಲಾಗಿದೆ. ಶ್ವಾಸಕೋಶದಲ್ಲಿ ಸ್ಪೈಕ್ ಪ್ರೋಟೀನ್ ವಿರುದ್ಧ antibodies ಉತ್ಪಾದಿಸುವಲ್ಲಿ ಈ ಲಸಿಕೆ ಶಕ್ತವಾಗಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

English summary
Italian Scientists Claim the World's First Covid 19 Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X