• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್ ಭೀತಿ: ಇಟಲಿ ರೆಸ್ಟೋರೆಂಟ್ ನಲ್ಲಿ ಇನ್ಮೇಲೆ ಪೇಪರ್ ಮೆನು ಇಲ್ಲ.!

|

ಡೆಡ್ಲಿ ಕೊರೊನಾ ವೈರಸ್ ಗೆ ಜರ್ಜರಿತಗೊಂಡ ದೇಶಗಳ ಪೈಕಿ ಇಟಲಿ ಕೂಡ ಒಂದು. ಇಟಲಿಯಲ್ಲಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕೊರೊನಾ ವೈರಸ್ ತಾಂಡವವಾಡಿತ್ತು. ಇದೀಗ ಇಟಲಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬಂದಿದೆ.

   ಉಡುಪಿಯಲ್ಲಿ 18 ಮಕ್ಕಳು ಕೊರೋನಾ‌ ಗೆದ್ದಿದ್ದು ಹೇಗೆ? | Udupi 18 Children recovered

   ಇಲ್ಲಿಯವರೆಗೂ ಇಟಲಿಯಲ್ಲಿ 232,664 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 33,340 ಮಂದಿ ಕೋವಿಡ್-19 ನಿಂದ ಮೃತಪಟ್ಟಿದ್ದರೆ, 155,633 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸದ್ಯ ಇಟಲಿಯಲ್ಲಿ 450 ಮಂದಿಯ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿದೆ.

   ಸಿಹಿ ಸುದ್ದಿ: ವಿಶ್ವದ ಮೊಟ್ಟಮೊದಲ ಕೊರೊನಾ ಲಸಿಕೆ ತಯಾರಿಸಿದ ಇಟಲಿ ವಿಜ್ಞಾನಿಗಳು

   ಕೊರೊನಾ ವೈರಸ್ ಅಟ್ಟಹಾಸ ಕಡಿಮೆಯಾಗುತ್ತಿದ್ದಂತೆಯೇ, ಇಟಲಿಯಲ್ಲಿ ಲಾಕ್ ಡೌನ್ ಸಡಿಲಗೊಂಡಿದೆ. ವ್ಯಾಪಾರ-ವಹಿವಾಟು, ದೈನಂದಿಕ ಚಟುವಟಿಕೆ ಪುನರಾರಂಭಗೊಂಡಿದೆ. ಹೋಟೆಲ್, ರೆಸ್ಟೋರೆಂಟ್ ಗಳೂ ಕೂಡ ಓಪನ್ ಆಗಿವೆ.

   ಪೇಪರ್ ಮೆನುಗೆ ಗುಡ್ ಬೈ

   ಪೇಪರ್ ಮೆನುಗೆ ಗುಡ್ ಬೈ

   ಎರಡುವರೆ ತಿಂಗಳ ಬಳಿಕ ಇಟಲಿಯಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಓಪನ್ ಆಗಿವೆ. ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಈ ಹಿಂದೆ ಪೇಪರ್ ಮೆನು ನೀಡಲಾಗುತ್ತಿತ್ತು. ಆದ್ರೀಗ, ಇಟಲಿಯ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಪೇಪರ್ ಮೆನು ಇಲ್ಲ. ಪೇಪರ್ ಮೆನು ಜಾಗಕ್ಕೆ ಕ್ಯೂ.ಆರ್ ಕೋಡ್ ಸ್ಕ್ಯಾನರ್ ಬಂದು ನಿಂತಿದೆ.

   ಕೋಡ್ ಸ್ಕ್ಯಾನ್ ಮಾಡಿ ಮೆನು ನೋಡಿ

   ಕೋಡ್ ಸ್ಕ್ಯಾನ್ ಮಾಡಿ ಮೆನು ನೋಡಿ

   ಫೈಲ್ ಮೂಲಕ ಕೊಡಲಾಗುವ ಪೇಪರ್ ಮೆನು ಹಲವರ ಕೈಗೆ ಸಿಗುವುದರಿಂದ, ಕಾಂಟ್ಯಾಕ್ಟ್ ಲೆಸ್ ಮೆನು ನೀಡಲು ಇಟಲಿಯ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಕ್ಯೂ ಆರ್ ಕೋಡ್ ಸ್ಕ್ಯಾನರ್ ಗಳ ಮೊರೆ ಹೋಗಿವೆ. ಸ್ಮಾರ್ಟ್ ಫೋನ್ ಮುಖಾಂತರ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ಗ್ರಾಹಕರ ಮೊಬೈಲ್ ಗಳಲ್ಲಿ ಹೋಟೆಲ್ ಮೆನು ಗೋಚರಿಸುತ್ತದೆ.

   ಶಾಕಿಂಗ್: ಚೀನಾದಲ್ಲಿ ಪತ್ತೆಯಾಗುವ ಮುನ್ನವೇ 'ಈ' ದೇಶದಲ್ಲಿತ್ತೇ ಕೊರೊನಾ?

   ಹೋಟೆಲ್ ಗಳಲ್ಲಿ ಸಾಮಾಜಿಕ ಅಂತರ

   ಹೋಟೆಲ್ ಗಳಲ್ಲಿ ಸಾಮಾಜಿಕ ಅಂತರ

   ಇಟಲಿಯ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡುವ ಶೆಫ್, ವೇಯ್ಟರ್ ಗಳು ಕೂಡ ಮಾಸ್ಕ್, ಗ್ಲೌಸ್, ಸೇಫ್ಟಿ ಕನ್ನಡಕ ಧರಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹೋಟೆಲ್ ಗಳಲ್ಲಿ ಟೇಬಲ್ ಮತ್ತು ಕುರ್ಚಿಗಳ ಸಂಖ್ಯೆ ಅರ್ಧಕ್ಕೆ ಇಳಿಸಲಾಗಿದೆ. ಒಂದು ಟೇಬಲ್ ನಿಂದ ಮತ್ತೊಂದು ಟೇಬಲ್ ಗೆ 1 ರಿಂದ 2 ಮೀಟರ್ ಅಂತರವಿದೆ.

   ತೃಪ್ತಿ ನೀಡಿದೆ

   ತೃಪ್ತಿ ನೀಡಿದೆ

   ''ಎರಡುವರೆ ತಿಂಗಳ ಗೃಹಬಂಧನದ ಬಳಿಕ ಹೊರಗೆ ಬಂದಿದ್ದೇನೆ. ಸೂಪರ್ ಮಾರ್ಕೆಟ್ ಗೆ ಮಾತ್ರ ಅಲ್ಲ... ರೆಸ್ಟೋರೆಂಟ್ ಗೂ ಭೇಟಿ ಕೊಟ್ಟೆ. ಸುರಕ್ಷತಾ ಕ್ರಮಗಳನ್ನು ಪಾಲಿಸಿ ರೆಸ್ಟೋರೆಂಟ್ ನಲ್ಲಿ ರುಚಿಯಾದ ಖಾದ್ಯ ಸೇವಿಸಿದ್ದು ಮನಸ್ಸಿಗೆ ತೃಪ್ತಿ ನೀಡಿದೆ'' ಎಂದಿದ್ದಾರೆ ಇಟಲಿ ಪ್ರಜೆ ಸ್ಟೆಫಾನೋ ಪ್ರಾತಿ.

   English summary
   Italian Restaurants replaces Paper Menu with QR Scan Codes.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X