Breaking: ಇಟಲಿ ಪ್ರಧಾನಿ ಮಾರಿಯೋ ದ್ರಾಘಿ ರಾಜೀನಾಮೆ
ರೋಮ್, ಜುಲೈ 21: ಇಟಲಿಯ ಏಕೀಕೃತ ಸರ್ಕಾರದ ಚುನಾಯಿತ ಮುಖ್ಯಸ್ಥರಾಗಿ ನೇಮಕಗೊಂಡ ಒಂದೂವರೆ ವರ್ಷದ ನಂತರ, ಮಾರಿಯೋ ಡ್ರಾಘಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಮಾರಿಯೋ ದ್ರಾಘಿ ಇಟಲಿ ಅಧ್ಯಕ್ಷ ಸೆರ್ಗಿಯೋ ಮಟ್ಟರೆಲ್ಲಾಗೆ ರಾಜೀನಾಮೆ ಸಲ್ಲಿಸಿದರು.
ಮಾರಿಯೋ ದ್ರಾಘಿ ಅವರ ಒಕ್ಕೂಟ ಸರ್ಕಾರವು ಪತನಗೊಂಡ ನಂತರ, ದೇಶವು ರಾಜಕೀಯ ಪ್ರಕ್ಷುಬ್ಧತೆಗೆ ದೂಡಿದೆ ಮತ್ತು ಆರ್ಥಿಕತೆ ತೀರ ಕುಸಿದಿದೆ. ಇನ್ನು ಬುಧವಾರ ರಾತ್ರಿ ವಿಶ್ವಾಸ ಮತ ಯಾಚನೆ ವೇಳೆ ಅವರದ್ದೇ ಸರ್ಕಾರದಲ್ಲಿನ ಮೂರು ಪಕ್ಷಗಳು ನಿರಾಕರಿಸಿದ್ದವು.
ರಾಜೀನಾಮೆಯನ್ನು ಅಂಗೀಕರಿಸಿರುವ ಇಟಲಿ ಅಧ್ಯಕ್ಷ ಮುಂದಿನ ಚುನಾವಣೆಗಳ ತನಕ ಉಸ್ತುವಾರಿ ನಾಯಕರಾಗಿ ಉಳಿಯುವಂತೆ ಕೇಳಿಕೊಂಡಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಆರಂಭಿಕ ಚುನಾವಣೆಗೆ ಕರೆ ನೀಡುತ್ತಾರೆ. ಅಲ್ಲಿಯವರೆಗೆ ದ್ರಾಘಿ ಅವರು ಸರ್ಕಾರದ ಮುಖ್ಯಸ್ಥರಾಗಿ ಮುಂದುವರಿಯಬಹುದು.

ಸಿಲ್ವಿಯೊ ಬರ್ಲುಸ್ಕೋನಿಯ ಸೆಂಟರ್-ರೈಟ್ ಫೋರ್ಜಾ ಇಟಾಲಿಯಾ, ಮ್ಯಾಟಿಯೊ ಸಾಲ್ವಿನಿಯ ಆಂಟಿ ಮೈಗ್ರೆಂಟ್ ಲೀಗ್ ಮತ್ತು ಪಾಪುಲಿಸ್ಟ್ ಫೈವ್ ಸ್ಟಾರ್ ಮೂವ್ಮೆಂಟ್ ಮೂರು ಪಕ್ಷಗಳು
ಅವರನ್ನು ಬೆಂಬಲಿಸಿಲ್ಲ. ಒಟ್ಟಾಗಿ ಕೆಲಸ ಮಾಡುವುದು ಇನ್ನು ಮುಂದೆ ಸಾಧ್ಯವಿಲ್ಲ ಎಂದು ಈ ಪಕ್ಷಗಳು ವಿಶ್ವಾಸ ಮತದಿಂದ ಹೊರಗುಳಿಯಲು ನಿರ್ಧರಿಸಿದ್ದವು. ಇದು ಪ್ರಧಾನಿ ದಾಘ್ರಿಗೆ ದೊಡ್ಡ ಪೆಟ್ಟು ನೀಡಿತು.
Recommended Video
74 ವರ್ಷದ ಮಾರಿಯೋ ದ್ರಾಘಿ ಇಟಲಿಯಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಮುಖ್ಯಸ್ಥರಾಗಿ ಅವರು ಯೂರೋಜೋನ್ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ಅವರನ್ನು ಸೂಪರ್ ಮಾರಿಯೋ ಎಂದು ಕರೆಯಲಾಗುತ್ತಿತ್ತು.
ಕೊರೊನಾ ಸಾಂಕ್ರಾಮಿಕ ಮತ್ತು ಅನಾರೋಗ್ಯದ ಜೊತೆಗೆ ಆರ್ಥಿಕ ಪಥನದೊಂದಿಗೆ ಇಟಲಿ ಸೆಣಸಾಡುತ್ತಿರುವಾಗ 2021 ರಲ್ಲಿ ಮಾರಿಯೋ ಡ್ರಾಘಿ ಪ್ರಧಾನ ಮಂತ್ರಿ ಸ್ಥಾನಕ್ಕೆ ಏರಿದ್ದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications