Get Updates
Get notified of breaking news, exclusive insights, and must-see stories!

ಚರ್ಚೆ: ಭಾರತದ ಜತೆ ನಂಟು ಗಟ್ಟಿ ಮಾಡಿಕೊಳ್ಳಲು ತಪ್ಪಿಸಿಕೊಂಡಿತೆ ಯುಕೆ?

ಇದು ಯುಕೆ- ಭಾರತ ಸಪ್ತಾಹ. ಬ್ರೆಕ್ಸಿಟ್ ನಂತರ ಭಾರತದ ಜತೆ ಬಾಂಧವ್ಯ ಬೆಳೆಸುವ ಹಾಗೂ ಹತ್ತಿರವಾಗುವ ಅವಕಾಶವನ್ನು ಬ್ರಿಟನ್ ತಪ್ಪಿಸಿಕೊಂಡು ಬಿಟ್ಟಿತಾ? ಕೋಬ್ರಾ ಬಿಯರ್ ನ ಸ್ಥಾಪಕ ಹಾಗೂ ಅಧ್ಯಕ್ಷ ಮತ್ತು ಯು.ಕೆ. ಕೌನ್ಸಿಲ್ ಫಾರ್ ಇಂಟರ್ ನ್ಯಾಷನಲ್ ಸ್ಟೂಡೆಂಟ್ ಅಫೇರ್ಸ್ ಅಧ್ಯಕ್ಷ ಲಾರ್ಡ್ ಬಿಲಿಮೊರಿಯಾ ಪ್ರಕಾರ, ಇದಕ್ಕೆ ಉತ್ತರ ಹೌದು.

ಬ್ರಿಟನ್ ನ ವಲಸೆ ನೀತಿ ವಿಚಾರವಾಗಿ ಅಲ್ಲಿನ ಸರಕಾರ ಸಕಾರಾತ್ಮಕ ಹೆಜ್ಜೆಗಳನ್ನು ಇಡದ ಪರಿಣಾಮ ಭಾರತದ ಜತೆಗೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳುವ ಅವಕಾಶ ಕಡಿಮೆ ಮಾಡಿಕೊಂಡಿತು. ಚೀನಿಯರಿಗೆ ಹೋಲಿಸಿದರೆ ವ್ಯಾಪಾರ ಉದ್ದೇಶಕ್ಕೆ ಹಾಗೂ ಪ್ರವಾಸಿ ವೀಸಾಕ್ಕಾಗಿ ಭಾರತೀಯರು ನಾಲ್ಕು ಪಟ್ಟು ಹೆಚ್ಚು ವೀಸಾ ಶುಲ್ಕ ಪಾವತಿಸಬೇಕು. ಇದು ಎರಡು ವರ್ಷದ ಅವಧಿಯ ಮಲ್ಟಿಪಲ್ ವೀಸಾ ಎಂಟ್ರಿಗೆ.

ಮುಕ್ತ ವ್ಯಾಪಾರ ಒಪ್ಪಂದವೂ ಸೇರಿ ಯುಕೆ- ಭಾರತದ ಬಾಂಧವ್ಯ ಗಟ್ಟಿಯಾದರೆ ಬ್ರಿಟನ್ ಸರಕಾರದ ವಲಸೆ ನೀತಿಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ ಎಂದು ಬಿಲಿಮೊರಿಯಾ ಅಭಿಪ್ರಾಯಪಟ್ಟಿದ್ದಾರೆ.

It’s UK-India week, has Britain missed chance for closer post-Brexit Indian ties?

ಮುಕ್ತ ವ್ಯಾಪಾರ ಒಪ್ಪಂದ ಅಂದರೆ ಸುಂಕ- ತೆರಿಗೆ ಮಾತ್ರವಲ್ಲ, ಅದರಲ್ಲಿ ಜನರೂ ಸೇರಿರುತ್ತಾರೆ. ಉದ್ಯಮಿಗಳು, ನುರಿತ ಕೆಲಗಾರರು, ವಿದ್ಯಾರ್ಥಿಗಳು ಹೀಗೆ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಯುಕೆ ವಿವಿಗಳಲ್ಲಿ ವ್ಯಾಸಂಗಕ್ಕೆ ಕೆಲ ವಿನಾಯಿತಿ ನೀಡಬೇಕು. ಆದರೆ ಅದು ಸಾಧ್ಯವಾಗುವಂತೆ ಕಾಣುವುದಿಲ್ಲ ಎನ್ನುತ್ತಾರೆ ಅವರು.

ಆದರೆ, ಇಂಡಿಯಾ ಇಂಕ್ ನ ಸ್ಥಾಪಕರಾದ ಮನೋಜ್ ಲಾಡ್ವಾ ಯುಕೆ- ಇಂಡಿಯಾ ಸಪ್ತಾಹವನ್ನು ದೊಡ್ಡ ಮಟ್ಟದ ಸಕಾರಾತ್ಮಕ ಅವಕಾಶವಾಗಿ ನೋಡುತ್ತಾರೆ. ಭಾರತದ ಪಾಲಿಗೆ ಬ್ರಿಟನ್ ಇಡೀ ಯುರೋಪಿನ ಮುಖ್ಯಬಾಗಿಲು. ಭಾರತದಲ್ಲಿ ಹೂಡಿಕೆ ಹೆಚ್ಚಲು ಲಂಡನ್ ಷೇರು ಮಾರುಕಟ್ಟೆ ಒಳ್ಳೆ ಅವಕಾಶ ಎನ್ನುತ್ತಾರೆ.

ಇದೊಂದು ಜೀವನ ಬದಲಾವಣೆಯ ಕಾಲ. ಈ ಅವಕಾಶ ಸಿಕ್ಕಿರುವುದಕ್ಕೆ ನಾವು ಅದೃಷ್ಟವಂತರು ಎನ್ನುತ್ತಾರೆ ಮನೋಜ್ ಲಾಡ್ವಾ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+