20 ವರ್ಷಗಳಲ್ಲಿ ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲ್‌ನ ಅತಿದೊಡ್ಡ ದಾಳಿ: 8 ಸಾವು
ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ನಗರದ ಜೆನಿನ್‌ನಲ್ಲಿ ನಡೆದ ವಾಯು ದಾಳಿಯಲ್ಲಿ ಎಂಟು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದು 50 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಜೆನಿನ್ ನಗರ ಮತ್ತು ಅದರ ನಿರಾಶ್ರಿತರ ಶಿಬಿರಗಳು ಪ್ಯಾಲೇಸ್ಟಿನಿಯನ್ ಸಶಸ್ತ್ರ ಗುಂಪುಗಳ ಭದ್ರಕೋಟೆಯಾಗಿದೆ. ಉಗ್ರರ ಬಳಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ದಾಸ್ತಾನು ಮಾಡುವ ಸ್ಥಳ ಇದಾಗಿದೆ.

ಹಮಾಸ್, ಇಸ್ಲಾಮಿಕ್ ಜಿಹಾದ್ ಮತ್ತು ಫತಾಹ್ ಸೇರಿದಂತೆ ಭಯೋತ್ಪಾದಕ ಗುಂಪುಗಳ ನೂರಾರು ಹೋರಾಟಗಾರರು 70 ವರ್ಷಗಳ ಹಿಂದೆ 1948 ರ ಪ್ಯಾಲೇಸ್ಟಿನಿಯನ್ ಯುದ್ಧದ ನಂತರ ನಿರಾಶ್ರಿತರಿಗಾಗಿ ಸ್ಥಾಪಿಸಲಾದ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಇಸ್ರೇಲಿ ಸೇನೆ ಈ ಪ್ರದೇಶದಲ್ಲಿ ದಾಳಿ ಮಾಡಿದೆ.
ದಾಳಿಯ ಬಳಿಕ ಪ್ಯಾಲೇಸ್ಟಿನಿಯನ್ನರು ಇಸ್ರೇಲಿ ಸೈನಿಕರ ಮೇಲೆ ಕಲ್ಲುಗಳನ್ನು ಎಸೆದರು. ಹೀಗಾಗಿ ಇಲ್ಲಿ ವೈಮಾನಿಕ ದಾಳಿಯ ಜೊತೆಗೆ ದೈಹಿಕ ದಾಳಿಯೂ ನಡೆಯುತ್ತಿದೆ. ಜೆನಿನ್ ವಿರುದ್ಧ ಇಸ್ರೇಲಿ ಸೇನೆ ಬಹಿರಂಗ ಸಮರ ಆರಂಭಿಸಿದೆ ಎಂದು ಪ್ಯಾಲೇಸ್ಟಿನಿಯನ್ ವಿದೇಶಾಂಗ ಸಚಿವಾಲಯ ವರದಿ ಮಾಡಿದೆ.
ವರದಿಯ ಪ್ರಕಾರ, ಕಳೆದ 20 ವರ್ಷಗಳಲ್ಲಿ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ. ಇದಕ್ಕೂ ಮೊದಲು 2002 ರಲ್ಲಿ, ವಾರಗಳ ಕಾಲ ನಡೆದ ಯುದ್ಧದಲ್ಲಿ 50 ಕ್ಕೂ ಹೆಚ್ಚು ಪ್ಯಾಲೇಸ್ಟಿನಿಯನ್ ಮತ್ತು 23 ಇಸ್ರೇಲಿ ಸೈನಿಕರು ಸಾವನ್ನಪ್ಪಿದರು. ಸುಮಾರು ಎರಡು ದಶಕಗಳ ನಂತರ, ಇದು ಮತ್ತೊಂದು ದೊಡ್ಡ ದಾಳಿಯಾಗಿದೆ.












Click it and Unblock the Notifications