Israel-Lebanon War: ಸುಮ್ಮನೆ ಇರದೇ ಇದ್ದರೆ ನೀವು ಗಾಜಾ ರೀತಿಯಲ್ಲೇ...
ಇಸ್ರೇಲ್ ಮಿಲಿಟರಿ ಇದೀಗ ಅದೆಷ್ಟು ಕಠಿಣವಾಗಿ ಲೆಬನಾನ್‌ನ ವಿರುದ್ಧ ದಾಳಿ ನಡೆಸುತ್ತಿದೆ ಅಂದ್ರೆ, ಯಾವುದೇ ಕಾರಣಕ್ಕೂ ಈ ಯುದ್ಧದಲ್ಲಿ ನಾವು ಸೈಲೆಂಟ್ ಆಗುವ ಚಾನ್ಸೆ ಇಲ್ಲ ಎಂಬ ಮೆಸೇಜ್ ಕೊಡುತ್ತಿದೆ. ಇಂತಹ ಸಮಯದಲ್ಲೇ ಖುದ್ದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಲೆಬನಾನ್ ದೇಶದಲ್ಲೂ ಗಾಜಾ ರೀತಿಯ ವಿನಾಶಕಾರಿ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. ಹಾಗಾದ್ರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ರೀತಿಯ ಎಚ್ಚರಿಕೆ ಮಾತುಗಳ ಹಿಂದಿನ ಉದ್ದೇಶ ಏನು? ಬನ್ನಿ ತಿಳಿಯೋಣ.
ಇಸ್ರೇಲ್ ಸೇನೆ ಲೆಬನಾನ್ ವಿರುದ್ಧ ದಾಳಿ ನಡೆಸುತ್ತಿದ್ದು, ಈ ಮೂಲಕ ಹಿಜ್ಬುಲಾ ನಾಶಕ್ಕೆ ರಣಕಹಳೆ ಮೊಳಗಿಸಿದೆ. ಇದೇ ಕಾರಣಕ್ಕೆ ದಕ್ಷಿಣ ಲೆಬನಾನ್ ಇದೀಗ ನರಕದಂತೆ ಕಾಣ್ತಿದೆ. ಅಷ್ಟಕ್ಕೂ ಹಿಜ್ಬುಲ್ಲಾ ಗುರಿಯಾಗಿಸಿ ಇಸ್ರೇಲ್ ನಡೆಸಿರುವ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಸುಹೇಲ್ ಹುಸೇನ್ ಹುಸೇನಿ ಕೂಡ ಜೀವ ಬಿಟ್ಟಿರುವುದು ಇದೀಗ ಗೊತ್ತಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಲೆಬನಾನ್ ರಾಜಧಾನಿ ಬೈರೂತ್ ನಗರದಲ್ಲಿ.

ಅಷ್ಟಕ್ಕೂ, ಈ ಜಾಗವೇ ಹಿಜ್ಬುಲ್ಲಾ ಸಂಘಟನೆ ಪ್ರಧಾನ ಕಚೇರಿ ಇರುವ ಸ್ಥಳವಾಗಿದ್ದು. ಇದೀಗ ಹಿಜ್ಬುಲ್ಲಾ ಪ್ರಧಾನ ಕಚೇರಿಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದ ಅಂದರೆ ಕಮಾಂಡರ್ ಆಗಿದ್ದ ಹುಸೇನಿ ಹತ್ಯೆ ಮಾಡಿದ್ದೇವೆ ಎಂದಿದೆ ಇಸ್ರೇಲ್ ಸೇನೆ. ಹೀಗೆ ಸುಹೇಲ್ ಹುಸೇನ್ ಹುಸೇನಿ ಹತ್ಯೆ ಬೆನ್ನಲ್ಲೇ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಸುಮ್ಮನೆ ಇರದಿದ್ರೆ ಲೆಬನಾನ್ ಕೂಡ ಗಾಜಾ ರೀತಿಯೇ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಈ ಮೂಲಕ ಇಸ್ರೇಲ್ ಮತ್ತಷ್ಟು ಘೋರ ದಾಳಿಗೆ ಸಜ್ಜಾದಂತೆ ಕಾಣುತ್ತಿದೆ.
ಹಿಜ್ಬುಲ್ಲಾ ಸಂಘಟನೆ ಮುಖಂಡರ ಹತ್ಯೆ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಗಾಜಾ ರೀತಿಯ ವಿನಾಶಕಾರಿ ಸ್ಥಿತಿ ಎದುರಾಗುವ ಮೊದಲು ಲೆಬನಾನ್ ಉಳಿಸುವ ಅವಕಾಶ ನಿಮ್ಮಲ್ಲೇ ಉಳಿದಿದೆ ಎಂದಿದ್ದಾರೆ. ಯುದ್ಧವನ್ನು ನಿಲ್ಲಿಸಲು ಈ ಮೂಲಕ ಲೆಬನಾನ್ ದೇಶವನ್ನು ಉಳಿಸಲು ಹಿಜ್ಬುಲ್ಲಾ ಮುಕ್ತಗೊಳಿಸಬೇಕು ಎಂದಿದ್ದಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು. ಹಿಜ್ಬುಲ್ಲ ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿ ಹಲವರನ್ನ ಹತ್ಯೆ ಮಾಡಲಾಗಿದೆ. ಹಾಗೇ ಇದೇ ವೇಳೆ ನಸ್ರಲ್ಲಾ ಉತ್ತರಾಧಿಕಾರಿ ಸೇರಿ, ಆತನ ಉತ್ತರಾಧಿಕಾರಿಯನ್ನ ಕೂಡ ಹತ್ಯೆ ಮಾಡ್ಲಾಗಿದೆ ಎಂಬ ಸ್ಫೋಟಕ ವಿಚಾರವನ್ನ ಕೂಡ ತಿಳಿಸಿದ್ದಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು.












Click it and Unblock the Notifications