Israel-Lebanon War: ಇಸ್ರೇಲ್ ಸೇನೆಯಿಂದ ಮುಂದುವರಿದ ಅಟ್ಯಾಕ್, ಮತ್ತೊಬ್ಬ ಹಿಜ್ಬುಲ್ಲಾ ಲೀಡರ್ ಹತ್ಯೆ?
ಇಸ್ರೇಲ್ ಸೇನೆ ತನ್ನ ಶತ್ರುಗಳನ್ನ ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದ್ದು, ಲೆಬನಾನ್ ಈಗ ನರಕವಾಗಿ ಬದಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದು ಒಂದು ಕಡೆಯಾದರೆ, ಇದೇ ಸಮಯದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಕೂಡ ಬಯಲಾಗಿದೆ. ಹಿಜ್ಬುಲ್ಲಾ ಸಂಘಟನೆ ಮುಖಂಡರ ಜಾಗಗಳ ಬಗ್ಗೆ ಪಕ್ಕಾ ಮಾಹಿತಿ ಪಡೆದಿರುವ ಇಸ್ರೇಲ್ ಸೇನೆ ಆ ಜಾಗಗಳ ಮೇಲೆ ಅತ್ಯಂತ ಶಕ್ತಿಶಾಲಿ ಬಾಂಬ್‌ಗಳನ್ನ ಹಾಕುತ್ತಿದೆ. ಹಾಗಾದ್ರೆ ಇಸ್ರೇಲ್ ಈ ರೀತಿ ದಾಳಿ ನಡೆಸಿ, ಶತ್ರುಗಳನ್ನ ಕೆಣಕುತ್ತಿರುವ ಕಾರಣಕ್ಕೆ 3ನೇ ಮಹಾಯುದ್ಧ ಫಿಕ್ಸ್ ಆಯ್ತಾ? ಬನ್ನಿ ತಿಳಿಯೋಣ.
ಇಸ್ರೇಲ್ & ಹಿಜ್ಬುಲ್ಲಾ ನಡುವೆ ರಕ್ತ ಕಾಳಗ ಬಲು ಜೋರಾಗಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಆತಂಕ ಕಾಡುತ್ತಿದೆ. ಅದರಲ್ಲೂ ದಕ್ಷಿಣ ಲೆಬನಾನ್ ಈಗ ಅಕ್ಷರಶಃ ಸ್ಮಶಾನದ ರೂಪ ಪಡೆಯುತ್ತಿದ್ದು, ಹೀಗಾಗಿ ಜನರು ಕೂಡ ಜೀವ ಉಳಿಸಿಕೊಳ್ಳಲು ದೇಶ ಬಿಟ್ಟು ಹೊರಗೆ ಹೋಗುವ ವಾತಾವರಣ ಸೃಷ್ಟಿಯಾಗಿದೆ. ಕೆಲವು ದಿನಗಳ ಹಿಂದಷ್ಟೇ ಹಿಜ್ಬುಲ್ಲಾ ಮುಖ್ಯಸ್ಥನ ಕಥೆ ಮುಗಿಸಿದ್ದ ಇಸ್ರೇಲ್ ಮಿಲಿಟರಿ ಆ ನಂತರ ಹಲವು ಮುಖಂಡರ ಹತ್ಯೆ ಮಾಡಿತ್ತು. ಇದೀಗ ಹಿಜ್ಬುಲ್ಲಾದ ಪ್ರಮುಖ ಕಮಾಂಡರ್ ಕೂಡ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಜೀವ ಬಿಟ್ಟಿರುವುದು ಲೆಬನಾನ್ ದೇಶದಲ್ಲಿ ಸಂಚಲನ ಸೃಷ್ಟಿಸಿದೆ.

ಹಿಜ್ಬುಲ್ಲಾ ಪ್ರಧಾನ ಕಚೇರಿ ಮೇಲೆ...
ಅಷ್ಟಕ್ಕೂ ಹಿಜ್ಬುಲ್ಲಾ ಗುರಿಯಾಗಿಸಿ ಇಸ್ರೇಲ್ ನಡೆಸಿರುವ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಸುಹೇಲ್ ಹುಸೇನ್ ಹುಸೇನಿ ಕೂಡ ಜೀವ ಬಿಟ್ಟಿರುವುದು ಇದೀಗ ಗೊತ್ತಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಲೆಬನಾನ್ ರಾಜಧಾನಿ ಬೈರೂತ್ ನಗರದಲ್ಲಿ. ಅಷ್ಟಕ್ಕೂ ಈ ಜಾಗವೇ ಹಿಜ್ಬುಲ್ಲಾ ಸಂಘಟನೆಯ ಪ್ರಧಾನ ಕಚೇರಿ ಇರುವ ಸ್ಥಳವಾಗಿದ್ದು, ಇದೀಗ ಹಿಜ್ಬುಲ್ಲಾ ಪ್ರಧಾನ ಕಚೇರಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದ ಅಂದ್ರೆ ಕಮಾಂಡರ್ ಆಗಿದ್ದ ಹುಸೇನಿ ಹತ್ಯೆ ಮಾಡಿದ್ದೇವೆ ಎಂದಿದೆ ಇಸ್ರೇಲ್ ಸೇನೆ.
ಜಗತ್ತಿನಾದ್ಯಂತ ಹೊಸ ಟೆನ್ಷನ್ ಶುರು!
ಮತ್ತೊಂದು ಕಡೆ ಇನ್ನೊಂದು ಬದಿಯಲ್ಲಿ ಹಿಜ್ಬುಲ್ಲಾ ಮುಖಂಡರ ಪೈಕಿ ಹಲವರು ಈಗಾಗಲೇ ಲೆಬನಾನ್ ಬಿಟ್ಟು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಹೀಗಿದ್ದರೂ ತನ್ನ ಕಾರ್ಯಾಚರಣೆಯ ತೀವ್ರತೆ ಹೆಚ್ಚು ಮಾಡಿರುವ ಇಸ್ರೇಲ್ ಮಿಲಿಟರಿ ಅಧಿಕಾರಿಗಳು, ಲೆಬನಾನ್ ಭಾಗದಲ್ಲಿರುವ ಹಿಜ್ಬುಲ್ಲಾ ಪ್ರದೇಶಗಳನ್ನ ಇದೀಗ ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡುತ್ತಿದ್ದಾರೆ. ಈ ಮೂಲಕ ಇಬ್ಬರ ನಡುವಿನ ಈ ಜಗಳ ಇದೀಗ ಜಗತ್ತಿನಾದ್ಯಂತ ಹೊಸ ಟೆನ್ಷನ್ ಹುಟ್ಟು ಹಾಕುತ್ತಿದೆ. ಇದು ಲೆಬನಾನ್ ಕಥೆಯಾಗಿದ್ದರೆ, ಇನ್ನೊಂದು ಕಡೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನೆಯ ಸೈನಿಕರು ಹಮಾಸ್ ಗುರಿಯಾಗಿಸಿ ದಾಳಿ ಮುಂದುವರಿಸಿದ್ದಾರೆ. ಮಧ್ಯಪ್ರಾಚ್ಯದ ಈ ಕಿತ್ತಾಟದ ಕಾರಣಕ್ಕೆ ಇದೀಗ 3ನೇ ಮಹಾಯುದ್ಧದ ಭಯ ಸೃಷ್ಟಿಯಾಗಿದೆ.












Click it and Unblock the Notifications