Surgical Strike: ಭಾರತದ ಬೆನ್ನಿಗೆ ನಿಂತು, ಧೈರ್ಯ ತುಂಬಿದ ಇಸ್ರೇಲ್!

ಭಾರತದಲ್ಲಿ ನಡೆದಿರುವ ಉಗ್ರರ ದಾಳಿ ಇದೀಗ ಜಾಗತಿಕ ಮಟ್ಟದಲ್ಲೂ ಭಾರಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಉಗ್ರರು ಕಣಿವೆ ರಾಜ್ಯ ಕಾಶ್ಮೀರದಲ್ಲಿ ರಕ್ತಪಾತ ಮಾಡಿದ್ದು, ಈಗ ನಲುಗಿರುವ ಕಾಶ್ಮೀರಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಕ್ಕಿದೆ. ಅದರಲ್ಲೂ ಉಗ್ರರನ್ನು ಹುಡುಕಿ, ಸೂಕ್ತ ಶಿಕ್ಷೆ ನೀಡಬೇಕು ಎಂಬ ಆಗ್ರಹ ಕೂಡ ಕೇಳಿ ಬರುತ್ತಿದೆ. ಇಂತಹ ನೋವಿನ ಸಮಯದಲ್ಲೇ ಇಡೀ ಜಗತ್ತು ಭಾರತದ ಬೆನ್ನಿಗೆ ನಿಲ್ಲುತ್ತಿದೆ. ಅದೇ ರೀತಿ ಇಸ್ರೇಲ್ ಕೂಡ ಭಾರತಕ್ಕೆ ಇಂತಹ ನೋವಿನ ಸಮಯದಲ್ಲಿ ಧೈರ್ಯ ತುಂಬಿದೆ.

ಭಾರತ & ಇಸ್ರೇಲ್ ನಡುವೆ ಅತ್ಯುತ್ತಮ ಸಂಬಂಧ ಇದ್ದು, ಎರಡೂ ದೇಶಗಳ ನಡುವೆ ಭಾರಿ ದೊಡ್ಡ ಮಟ್ಟದ ವ್ಯಾಪಾರ ಹಾಗೂ ವ್ಯವಹಾರ ನಡೆಯುತ್ತಿದೆ. ಅದರಲ್ಲೂ ಇಸ್ರೇಲ್ ನಮ್ಮ ಭಾರತದ ಮೂಲಕ ದೊಡ್ಡ ಮಟ್ಟದಲ್ಲಿ ಸಹಾಯ ಪಡೆಯುತ್ತಿದೆ. ಭಾರತ & ಇಸ್ರೇಲ್ ದೋಸ್ತಿ ಭವಿಷ್ಯದಲ್ಲಿ ಕೂಡ ಇದೇ ರೀತಿ ಮುಂದುವರಿಯಲು ಬೇಕಾದ ಕ್ರಮಗಳನ್ನು ಕೂಡ ಭಾರತ ಕೈಗೊಳ್ಳುತ್ತಿದೆ. ಇಷ್ಟೆಲ್ಲದರ ನಡುವೆ ಭಾರತದ ಮೇಲೆ ಪಾಪಿ ಪಾಕಿಸ್ತಾನದ ಮೂಲಕ ಉಗ್ರರು ಬಂದು ದಾಳಿ ಮಾಡಿದ್ದು, ಈ ವಿಚಾರವನ್ನು ಇಸ್ರೇಲ್ ಖಂಡಿಸಿದೆ. ಅಲ್ಲದೆ ಇದೇ ವಿಚಾರವಾಗಿ ಭಾರತಕ್ಕೆ ಧೈರ್ಯವನ್ನೂ ತುಂಬಿದೆ ಇಸ್ರೇಲ್.

Israel Supports India in Fight Against Terrorism Following Pahalgam Attack

ಭಾರತದ ಬೆನ್ನಿಗೆ ನಿಂತ ಇಸ್ರೇಲ್

ಅಂದಹಾಗೆ ಪಾಪಿ ಪಾಕಿಸ್ತಾನ ಸಹಾಯ ಪಡೆದು ಬಂದಿದ್ದ ಉಗ್ರರು ಕಣಿವೆ ರಾಜ್ಯದಲ್ಲಿ ಹಿಂಸೆ ನಡೆಸಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. ಕಾಶ್ಮೀರದ ಶ್ರೀನಗರ ಭಾಗದಿಂದ ಕೇವಲ 90 ಕಿ.ಮೀ. ದೂರದಲ್ಲಿ ಇರುವ ಪಹಲ್ಗಾಮ್‌ ಜಾಗದಲ್ಲಿ ಉಗ್ರರು ಅಟ್ಟಹಾಸವನ್ನ ಮೆರೆದಿದ್ದಾರೆ. ಪಹಲ್ಗಾಮ್‌ ಪ್ರದೇಶಕ್ಕೆ ಪ್ರವಾಸಕ್ಕೆ ಅಂತಾ ತೆರಳಿದ್ದ ಟೂರಿಸ್ಟ್‌ಗಳನ್ನೇ ಈಗ ಟಾರ್ಗೆಟ್ ಮಾಡಿ ಪಾಪಿ ಉಗ್ರರು ಅಟ್ಯಾಕ್ ಮಾಡಿದ್ದಾರೆ, ಈ ಮೂಲಕ 26 ಭಾರತೀಯರ ಹತ್ಯೆ ನಡೆದಿದೆ. ಈ ಘಟನೆ ಬಗ್ಗೆ ಇಸ್ರೇಲ್ ಕೂಡ ಪ್ರತಿಕ್ರಿಯೆ ನೀಡಿದ್ದು, ಭಾರತಕ್ಕೆ ಧೈರ್ಯ ಹೇಳಿದೆ. ಹೀಗಾಗಿ ಭಾರತಕ್ಕೆ ಶಕ್ತಿಶಾಲಿ ದೇಶಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+