Get Updates
Get notified of breaking news, exclusive insights, and must-see stories!

ಪರಮಾಣು ಬಾಂಬ್ ದಾಳಿಯ ಭಯ ಮತ್ತಷ್ಟು ಹೆಚ್ಚಾಯ್ತು, ಇರಾನ್ ಮೇಲೆ ಜಗತ್ತಿನ ಕಣ್ಣು | Israel Military

ಇರಾನ್ ಮೇಲೆ ಭೀಕರ ದಾಳಿ ಮಾಡಿರುವ ಇಸ್ರೇಲ್ ಹಾಗೂ ಅಮೆರಿಕ, ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಈಗ ಇರಾನ್ ಸರ್ವಾಧಿಕಾರಿ ಖಮೇನಿ ಕಥೆಯನ್ನೇ ಮುಗಿಸಿವೆ. ಈ ಬಗ್ಗೆ ಇರಾನ್ ಮಾಧ್ಯಮಗಳು ಕೂಡ ಅಧಿಕೃತವಾಗಿ ಮಾಹಿತಿ ನೀಡಿದ್ದು, ಅಮೆರಿಕ ಹಾಗೂ ಇರಾನ್ ನಡುವೆ ನೇರವಾದ ಸಂಘರ್ಷ ಶುರುವಾಗಿದೆ. ನೋಡ ನೋಡುತ್ತಲೇ ಭಾರಿ ದೊಡ್ಡ ಹಂತಕ್ಕೆ ತಲುಪಿರುವ ಈ ಯುದ್ಧ ಪರಮಾಣು ಸಂಘರ್ಷವಾಗಿ ಕೂಡ ಬದಲಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ಕಾರಣಕ್ಕೆ ಪ್ರಪಂಚದ ಎಲ್ಲೆಡೆಯೂ ಈ ಬಗ್ಗೆ ಆತಂಕ ಶುರುವಾಗಿದೆ. ಏಕೆಂದರೆ ಅಕಸ್ಮಾತ್ ಇರಾನ್ ಇಲ್ಲಿ ಪರಮಾಣು ಬಾಂಬ್ ಬಳಸಿದ್ದೇ ಆದರೆ ಆಗ ಇನ್ನೂ ದೊಡ್ಡ ಗಲಾಟೆ ಶುರುವಾಗಲಿದೆ. ಹಾಗಾದರೆ ಇರಾನ್ ಕಥೆ ಮುಗಿಸಲು ಇದೀಗ ಅಮೆರಿಕ ಹಾಕಿರುವ ಪ್ಲಾನ್ ಏನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವೆ ಕಳೆದ ಕೆಲ ದಿನಗಳಿಂದ ದೊಡ್ಡದಾಗಿ ಸಂಘರ್ಷ ಶುರುವಾಗಿತ್ತು. ಟ್ರಂಪ್ ಅವರು ಕೂಡ ಪದೇ ಪದೇ ಇರಾನ್ ಮೇಲೆ ಯುದ್ಧ ಸಾರುವ & ಆ ಮೂಲಕ ದೊಡ್ಡ ಮಟ್ಟದಲ್ಲಿ ಸೇನಾ ಕಾರ್ಯಾಚರಣೆ ನಡೆಸುವ ಎಚ್ಚರಿಕೆ ನೀಡುತ್ತಾ ಬಂದಿದ್ದರು. ಹೀಗಿದ್ದಾಗ ಶನಿವಾರ ದಿಢೀರ್ ದೊಡ್ಡ ಮಟ್ಟದಲ್ಲಿ ದಿಢೀರ್ ದಾಳಿ ಶುರು ಮಾಡಿದ್ದ ಇಸ್ರೇಲ್ ಸೇನೆ ಇಡೀ ಇರಾನ್ ನಲುಗುವಂತೆ ಮಾಡಿತ್ತು. ಇದೇ ಸಮಯದಲ್ಲಿ ಇಸ್ರೇಲ್ ಕ್ಷಿಪಣಿ ದಾಳಿಗೆ ಖಮೇನಿಯ ಕಥೆ ಕೂಡ ಮುಗಿದು ಹೋಗಿದ್ದು, ಇರಾನ್ ಕಂಡ ಸರ್ವಾಧಿಕಾರಿ ಅಧಿಕಾರ ಅಂತ್ಯವಾಗಿದೆ. ಹೀಗಾಗಿ ಇರಾನ್ ಇನ್ನಷ್ಟು ಸೇಡಿನ ಕ್ರಮಕ್ಕೆ ಮುಂದಾಗುವ ಭೀತಿ ಇದೀಗ ಎದುರಾಗಿದೆ. ಅಲ್ಲದೆ ಭವಿಷ್ಯದಲ್ಲಿ ಮಧ್ಯಪ್ರಾಚ್ಯ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಆತಂಕ ಕೂಡ ಜಗತ್ತನ್ನು ಕಾಡುತ್ತಿದೆ.

Israel Military

ಈಗಾಗಲೇ ಇದೆಯಾ ಪರಮಾಣು ಬಾಂಬ್?

ಅಮೆರಿಕ & ಇರಾನ್ ನಡುವೆ ಭೀಕರ ಜಗಳ ಶುರುವಾಗಿದ್ದೇ ಈ ಪರಮಾಣು ಬಾಂಬ್‌ನ ವಿಚಾರವಾಗಿ. ಇರಾನ್ ತನ್ನ ಪರಮಾಣು ಸ್ಥಾವರಗಳ ಮೂಲಕ ಪರಮಾಣು ಬಾಂಬ್ ತಯಾರಿಸುತ್ತಿದೆ, ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅಮೆರಿಕ ಆರೋಪ ಮಾಡಿತ್ತು. ಅದ್ರಲ್ಲೂ ಇದೇ ವಿಚಾರದಲ್ಲಿ ಅತ್ತ ಇಸ್ರೇಲ್ ಜೊತೆಯಲ್ಲೂ ಇರಾನ್ ಕಿರಿಕ್ ಮಾಡಿಕೊಂಡಿದೆ. ಹೀಗಿದ್ದಾಗ ದಿಢೀರ್ ದಾಳಿ ಮಾಡಿ ಇಡೀ ಇರಾನ್ ಪುಡಿಪುಡಿ ಆಗುವಂತೆ ಮಾಡುತ್ತಿದೆ ಅಮೆರಿಕ ಮತ್ತು ಇಸ್ರೇಲ್ ಸೇನೆ. ಇಂತಹ ಸಮಯದಲ್ಲೇ ಇರಾನ್ ಬಳಿ ಪರಮಾಣು ಬಾಂಬ್ ಇರುವ ಆತಂಕ ಇದೀಗ ಎದುರಾಗಿದೆ. ಇದೇ ಕಾರಣಕ್ಕೆ ಅಮೆರಿಕ ಕೂಡ ಪೂರ್ತಿ ಅಲರ್ಟ್ ಆಗಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನ ಈಗ ಕೈಗೊಳ್ಳಲಾಗಿದೆ.

ರಷ್ಯಾ & ಚೀನಾ ನಡೆ ಏನು?

ಇರಾನ್ ಸರ್ವಾಧಿಕಾರಿ ಖಮೇನಿಯ ಕಥೆ ಮುಗಿದ ನಂತರ ಇರಾನ್ ಈಗ ಥಂಡಾ ಹೊಡೆದು ಬಿಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಅಂದುಕೊಂಡ ರೀತಿಯಲ್ಲೇ ಈಗ ಮಾಡಿದ್ದು, ಅಮೆರಿಕದ ದೊಡ್ಡ ಶತ್ರು ಇರಾನ್ ಮೊದಲ ಬಾರಿಗೆ ದೊಡ್ಡ ಆಘಾತ ಎದುರಿಸಿದೆ. ಇಸ್ರೇಲ್ ಈ ವಿಚಾರದಲ್ಲಿ ಮುಂದೆ ನುಗ್ಗಿ ದಾಳಿ ಆರಂಭ ಮಾಡಿದ್ದು, ಇರಾನ್ & ಇಸ್ರೇಲ್ ನಡುವೆ ಭಾರಿ ದೊಡ್ಡ ತಿಕ್ಕಾಟವು ಆರಂಭ ಆಗಿದೆ. ಅಲ್ಲದೆ ಇನ್ನಷ್ಟು ಘೋರ ದಾಳಿಯ ಮೂಲಕ ಸಂಪೂರ್ಣವಾಗಿ ಇರಾನ್ ಸೈಲೆಂಟ್ ಆಗುವಂತೆ ಮಾಡಿ, ತನ್ನ ಹಿಡಿತಕ್ಕೆ ಪಡೆಯಲು ಅಮೆರಿಕ ಹಾಗೂ ಇಸ್ರೇಲ್ ಸಜ್ಜಾಗಿವೆ. ಹಾಗೇ ಇನ್ನೊಂದು ಕಡೆ ರಷ್ಯಾ ಮತ್ತು ಚೀನಾ ನಡೆ ಬಗ್ಗೆ ಕೂಡ ಇದೀಗ ಚರ್ಚೆ ಜೋರಾಗಿದೆ. ಏಕೆಂದರೆ ಇರಾನ್ ಬೆನ್ನಿಗೆ ನಿಂತಿದ್ದ ಇದೇ ರಷ್ಯಾ ಮತ್ತು ಚೀನಾ ಸದ್ಯಕ್ಕೆ ಯಾವುದೇ ದೊಡ್ಡ ಹೇಳಿಕೆ ನೀಡದೆ ತಟಸ್ಥವಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+