ಇಸ್ರೇಲ್-ಸಂಯೋಜಿತ ಗುಂಪಿನಿಂದ ಭಾರತದಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಪ್ರಚಾರಗಳ ನಿರ್ವಹಣೆ: ವರದಿ
ಇಸ್ರೇಲ್-ಸಂಯೋಜಿತ ಗುಂಪಿನಿಂದ ಭಾರತದಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಪ್ರಚಾರಗಳ ನಿರ್ವಹಣೆಯಾಗುತ್ತಿದೆ ಎಂದು ವರದಿಯಾಗಿದೆ.
ಲಂಡನ್ ಫೆಬ್ರವರಿ 17: ಇಸ್ರೇಲ್ ಸಂಸ್ಥೆಯೊಂದು ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದೆ ಎಂಬ ವರದಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ಅದರಲ್ಲೂ ಆಡಳಿತಾರೂಢ ಬಿಜೆಪಿ ಇದರಲ್ಲಿ ಭಾಗಿಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಆರೋಪಿಸಿದೆ.
ವಿಶ್ವದಾದ್ಯಂತ 30 ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಮಧ್ಯಪ್ರವೇಶಿಸಿರುವ ಶಂಕಿತ ಇಸ್ರೇಲಿ ಗುತ್ತಿಗೆದಾರರ ಗುಂಪು, ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಪ್ರಚಾರಗಳನ್ನು ನಿರ್ವಹಿಸಲು ಸಾಫ್ಟ್‌ವೇರ್‌ನೊಂದಿಗೆ ಸಂಪರ್ಕ ಹೊಂದಿದೆ ಎಂದು ದಿ ಗಾರ್ಡಿಯನ್ಸ್ ವರದಿ ಮಾಡಿದೆ.
ಯುಕೆಯಲ್ಲಿನ ದಿ ಗಾರ್ಡಿಯನ್ ಪತ್ರಿಕೆಯ ವರದಿಯು "ಟೀಮ್ ಜಾರ್ಜ್" ಎಂದು ಕರೆಯಲ್ಪಡುವ ಘಟಕವು ಅದರ ಪ್ರಮುಖ ಸೇವೆಗಳಲ್ಲಿ ಒಂದಾಗಿ ವಾಣಿಜ್ಯ ಕ್ಲೈಂಟ್‌ಗಳಿಗೆ ಅಡ್ವಾನ್ಸ್ಡ್ ಇಂಪ್ಯಾಕ್ಟ್ ಮೀಡಿಯಾ ಸೊಲ್ಯೂಷನ್ಸ್ (ಏಮ್ಸ್) ಎಂಬ ಅತ್ಯಾಧುನಿಕ ಸಾಫ್ಟ್‌ವೇರ್ ಪ್ಯಾಕೇಜ್ ಅನ್ನು ನೀಡುವುದರೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದೆ.
ದಿ ಗಾರ್ಡಿಯನ್ ವರದಿಯ ಪ್ರಕಾರ, ಈ ಘಟಕವನ್ನು 50 ವರ್ಷದ ಮಾಜಿ ಇಸ್ರೇಲಿ ವಿಶೇಷ ಪಡೆಗಳ ಆಪರೇಟಿವ್ ಟಾಲ್ ಹನಾನ್ ಅವರು ನಡೆಸುತ್ತಿದ್ದಾರೆಂದು ಹೇಳಲಾಗುತ್ತದೆ.
ಅವರು "ಜಾರ್ಜ್" ಎಂಬ ಗುಪ್ತನಾಮವನ್ನು ಬಳಸಿಕೊಂಡು ಖಾಸಗಿಯಾಗಿ ಕೆಲಸ ಮಾಡುತ್ತಾರೆ ಮತ್ತು ಈ ಟೀಮ್ ಜಾರ್ಜ್ ಹ್ಯಾಕಿಂಗ್‌ನಂತಹ ವಿಧಾನಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ವಿವರಗಳ ಬಗ್ಗೆ ಕೇಳಿದಾಗ, ಹನಾನ್ ಅವರು ಆರೋಪವನ್ನು ಅನ್ನು ನಿರಾಕರಿಸುತ್ತಾರೆ. ಟೀಮ್ ಜಾರ್ಜ್ ಹಲವಾರು ಸೇವೆಗಳನ್ನು ಟ್ರ್ಯಾಕ್ ಮಾಡಿದೆ ಮತ್ತು "ಯುಕೆ, ಯುಎಸ್, ಕೆನಡಾ, ಜರ್ಮನಿ, ಸ್ವಿಟ್ಜರ್ಲೆಂಡ್, ಮೆಕ್ಸಿಕೊ, ಸೆನೆಗಲ್, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ 20 ದೇಶಗಳ ಬಹುತೇಕ ವಾಣಿಜ್ಯ ವಿವಾದಗಳನ್ನು ಒಳಗೊಂಡಿರುವ ನಕಲಿ ಸಾಮಾಜಿಕ ಮಾಧ್ಯಮ ಪ್ರಚಾರಗಳ ಹಿಂದೆ ಅದು ಕಂಡುಬಂದಿದೆ''.

ಟೀಮ್ ಜಾರ್ಜ್ ಕುರಿತು ತನಿಖೆ ನಡೆಸಿದ ಪತ್ರಕರ್ತರ ಒಕ್ಕೂಟವು ಲೆ ಮಾಂಡೆ, ಡೆರ್ ಸ್ಪೀಗೆಲ್ ಮತ್ತು ಎಲ್ ಪೈಸ್ ಸೇರಿದಂತೆ 30 ಜಾಗತಿಕ ಮಾಧ್ಯಮಗಳ ವರದಿಗಾರರನ್ನು ಒಳಗೊಂಡಿದೆ.
ಆರು ಗಂಟೆಗಳಿಗೂ ಹೆಚ್ಚು ಕಾಲ ರಹಸ್ಯವಾಗಿ ರೆಕಾರ್ಡ್ ಮಾಡಿದ ಸಭೆಗಳಲ್ಲಿ, Gmail ಮತ್ತು ಟೆಲಿಗ್ರಾಮ್ ಖಾತೆಗಳನ್ನು ಪ್ರವೇಶಿಸಲು ಹ್ಯಾಕಿಂಗ್ ತಂತ್ರಗಳನ್ನು ಬಳಸುವುದು ಸೇರಿದಂತೆ ಪ್ರತಿಸ್ಪರ್ಧಿಗಳ ಬಗ್ಗೆ ಗುಪ್ತಚರವನ್ನು ಹೇಗೆ ಸಂಗ್ರಹಿಸಬಹುದು ಎಂಬುದರ ಕುರಿತು ಹನನ್ ಮತ್ತು ಅವರ ತಂಡವು ಮಾತನಾಡುತ್ತಾರೆ ಎಂದು ವರದಿಯಾಗಿದೆ.












Click it and Unblock the Notifications