ಗಾಜಾ ಯುದ್ಧ ದಿಢೀರ್ ನಿಲ್ಲಿಸಲು ನಿರ್ಧಾರ ಕೈಗೊಳ್ಳುತ್ತಾ ಇಸ್ರೇಲ್ ಮಿಲಿಟರಿ?

ಇಸ್ರೇಲ್ & ಗಾಜಾ ನಡುವೆ ಯುದ್ಧ ಶುರುವಾಗಿ ಹಲವು ವರ್ಷಗಳೇ ಕಳೆದು ಹೋಗಿದ್ದು, ಯುದ್ಧವನ್ನ ನಿಲ್ಲಿಸಲು ನಡೆದ ಪ್ರಯತ್ನಗಳು ಫಲ ನೀಡುತ್ತಿಲ್ಲ. ಬದಲಾಗಿ ಇನ್ನಷ್ಟು ಬಡಿದಾಟ ಹೆಚ್ಚಾಗುತ್ತಿರುವ ಕಾರಣ ಚಿಂತೆ ಕೂಡ ಹೆಚ್ಚಾಗಿದೆ. ಅದರಲ್ಲೂ ಇಸ್ರೇಲ್ ಸೇನೆ ಗಾಜಾ ಪಟ್ಟಿಯಲ್ಲಿ ನಿರಾಶ್ರಿತರ ಶಿಬಿರಗಳ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದೆ ಎಂಬ ಗಂಭೀರ ಆರೋಪದ ನಂತರ ಅಲ್ಲೋಲ & ಕಲ್ಲೋಲ ಈಗ ಸೃಷ್ಟಿಯಾಗಿದೆ. ಇಂತಹ ಸಮಯದಲ್ಲೇ, ಗಾಜಾ ಯುದ್ಧ ದಿಢೀರ್ ನಿಲ್ಲಿಸಲು ನಿರ್ಧಾರ ಕೈಗೊಳ್ಳುತ್ತಾ ಇಸ್ರೇಲ್ ಮಿಲಿಟರಿ?

ಹೌದು, ಇಸ್ರೇಲ್ & ಗಾಜಾ ನಡುವಿನ ಯುದ್ಧದಲ್ಲಿ ಇದೀಗ ಭಾರಿ ದೊಡ್ಡ ಪ್ರಮಾಣದಲ್ಲಿ ಅಮಾಯಕರು ಮೃತಪಟ್ಟಿರುವ ಆರೋಪ ಕೇಳಿಬಂದ ಹಿನ್ನೆಲೆ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೆಚ್ಚಾಗಿದೆ. ಇದೇ ಕಾರಣಕ್ಕೆ ಇದೀಗ ಇಸ್ರೇಲ್ ಯುದ್ಧ ನಿಲ್ಲಿಸುತ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲಿ ಕೂಡ ಈ ವಿಚಾರ ದೊಡ್ಡ ಚರ್ಚೆಗೂ ಗ್ರಾಸವಾಗಿದೆ.

Israel Is Facing Pressure After This Incident At Gaza Strip

ಯುದ್ಧ ನಿಲ್ಲಿಸುತ್ತಾ ಇಸ್ರೇಲ್ ಸೇನೆ?

ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ತನ್ನ ದಾಳಿಯನ್ನ ಈಗಲೂ ನಿಲ್ಲಿಸುವ ಮನಸ್ಸು ಮಾಡ್ತಿಲ್ಲ. ಅಂತಾರಾಷ್ಟ್ರೀಯ ಒತ್ತಡಗಳಿಗೆ ಕೂಡ ಮಣಿಯದೆ ತನ್ನ ದಾಳಿ ಮುಂದುವರಿಸಿರುವ ಇಸ್ರೇಲ್ ಸೇನೆಯು ಇದೀಗ ಗಾಜಾ ನಗರದ ಮತ್ತಷ್ಟು ಪ್ರದೇಶಗಳನ್ನ ಧೂಳ್ ಧೂಳ್ ಮಾಡಿದೆ ಎಂಬ ಭಾರಿ ಆರೋಪ ಕೂಡ ಕೇಳಿಬರುತ್ತಲೇ ಇದೆ. ಅಲ್ಲದೆ ಇನ್ನೊಂದು ಕಡೆ ಅನ್ನ & ನೀರು ಇಲ್ಲದೆ ನರಳಿ ಹೋಗಿದ್ದಾರೆ ಗಾಜಾ ಜನರು ಅನ್ಣೋ ಆರೋಪ ಕೂಡ ಕೇಳಿಬರುತ್ತಿದೆ. ಹೀಗಾಗಿ ಕೂಡಲೇ ಯುದ್ಧ ನಿಲ್ಲಿಸಲು ಇದೀಗ ಇಸ್ರೇಲ್ ಮೇಲೆ ಒತ್ತಡ ಹೆಚ್ಚಾಗಿದೆ.

ಅಂತಿಮ ಹಂತ ತಲುಪಿದ ಕದನ?

2023 ಅಕ್ಟೋಬರ್ 7ರ ಶನಿವಾರ ಇಸ್ರೇಲ್‌ ಮೇಲೆ ನುಗ್ಗಿ ಬಂದ ಹಮಾಸ್ ರಾಕೆಟ್ & ಕ್ಷಿಪಣಿಗಳು ಘೋರ ಪರಿಸ್ಥಿತಿ ಸೃಷ್ಟಿ ಮಾಡಿಬಿಟ್ಟವು. ಹೀಗೆ 2023ರ ಅಕ್ಟೋಬರ್ 7ಕ್ಕೆ ಶುರುವಾಗಿದ್ದ ಗಾಜಾ & ಇಸ್ರೇಲ್ ವಾರ್ ಇಂದಿಗೂ ನಿಂತಿಲ್ಲ. ಹೀಗಿದ್ದಾಗ ಗಾಜಾ ನಿವಾಸಿಗಳ ಮೇಲೆ ಈಗ ಒತ್ತಡ ಹೇರುವ ಮೂಲಕ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎಂಬ ಆರೋಪ ಕೂಡ ಮಾಡಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಯಾವುದೇ ಚಿಂತೆ ಮಾಡದೆ ಮುಂದೆ ನುಗ್ಗಲು ನಿರ್ಧಾರ ಮಾಡಿರುವ ಇಸ್ರೇಲ್ ಸೇನೆ ಈಗ ಕೆಲವೇ ದಿನಗಳಲ್ಲಿ ಭಾರಿ ದೊಡ್ಡ ಕಾರ್ಯಾಚರಣೆ ಕೈಗೊಳ್ಳುವ ಆತಂಕ ಗಾಜಾ ನಿವಾಸಿಗಳಲ್ಲಿ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+