Israel-Hamas war: ಇಸ್ರೇಲ್- ಪ್ಯಾಲೆಸ್ತೀನ್‌ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ರಷ್ಯಾ- ಪುಟಿನ್‌ರಿಂದ ಮಾನವತೆಯ ಪಾಠ

ಇಸ್ರೇಲ್- ಪ್ಯಾಲೆಸ್ತೀನ್‌ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ರಷ್ಯಾ ದೇಶವು ಹೇಳಿದೆ. ನಾಗರಿಕರ ವಿರುದ್ಧದ ಹಿಂಸಾಚಾರ ಹಾಗೂ ಎಲ್ಲಾ ಭಯೋತ್ಪಾದನಾ ಕೃತ್ಯಗಳನ್ನು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯವನ್ನು ರಷ್ಯಾ ಬೆಂಬಲಿಸಿದೆ.

ಇಸ್ರೇಲ್‌ ಹಾಗೂ ಗಾಜಾ ವಿಚಾರದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಂಪೂರ್ಣ ನಿಷ್ಕ್ರಿಯತೆ ಹೊಂದಿದೆ. ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಇದನ್ನು ಒಪ್ಪಿಕೊಳ್ಳಲು ರಷ್ಯಾಗೆ ಸಾಧ್ಯವಿಲ್ಲ ಎಂದು ರಷ್ಯಾದ ಯುಎನ್ ರಾಯಭಾರಿ ವಾಸಿಲಿ ನೆಬೆಂಜಿಯಾ ಹೇಳಿದ್ದಾರೆ.

Israel-Hamas war: Russia says ready to mediate between Israel and Palestine

ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಗೆ ಪ್ಯಾಲೆಸ್ತೀನ್‌ ಮನವಿ

ಗಾಜಾದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ವಿಶ್ವಸಂಸ್ಥೆ ತಡೆಯಬೇಕು ಎಂದು ಪ್ಯಾಲೆಸ್ತೀನ್‌ ಆಗ್ರಹಿಸಿದೆ. ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್‌ಗೆ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ರಾಯಭಾರಿ ಮನವಿ ಮಾಡಿದ್ದಾರೆ.

ಮಾನವೀಯತೆಯ ವಿರುದ್ಧದ ಅಪರಾಧವನ್ನು ತಡೆಯಲು ವಿಶ್ವಸಂಸ್ಥೆಯು ಕ್ರಮ ಕೈಗೊಳ್ಳಬೇಕು. ಇಸ್ರೇಲ್‌ ದಾಳಿಯನ್ನು ಮಾಡುತ್ತಿದೆ. ಗಾಜಾ ಪಟ್ಟಿಯ ಅರ್ಧದಷ್ಟು ಜನಸಂಖ್ಯೆಯನ್ನು ಸ್ಥಳಾಂತರಿವುದಾಗಿ ಎಚ್ಚರಿಕೆ ನೀಡಿದೆ ಎಂದು ಪ್ಯಾಲೆಸ್ತೀನ್‌ ಆಪಾದಿಸಿದೆ.

Israel-Hamas war: Russia says ready to mediate between Israel and Palestine

'ವಿಶ್ವಸಂಸ್ಥೆಯ ಹೆಚ್ಚು ಸಹಾಯ ಮಾಡಬೇಕಾಗಿದೆ. ಏನು ಮಾಡಿದರೂ ಸಾಕಾಗುವುದಿಲ್ಲ. ಮಾನವೀಯತೆಯ ವಿರುದ್ಧದ ಈ ಅಪರಾಧವನ್ನು ನಿಲ್ಲಿಸಲು ನಾವೆಲ್ಲರೂ ಹೆಚ್ಚಿನದನ್ನು ಮಾಡಬೇಕಾಗಿದೆ' ಎಂದು ಪ್ಯಾಲೆಸ್ತೀನ್‌ ಯುಎನ್ ರಾಯಭಾರಿ ರಿಯಾದ್ ಮನ್ಸೂರ್ ವಿಶ್ವಸಂಸ್ಥೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ವಾರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ಯುದ್ಧವನ್ನು ಘೋಷಿಸಿದೆ. ಈಗಾಗಲೇ ಸಾವಿರಾರು ಜನರು ಅಸುನೀಗಿದ್ದಾರೆ. ಲಕ್ಷಾಂತರ ಜನರು ಗಾಜಾ ನಗರವನ್ನು ತೊರೆದಿದ್ದಾರೆ. ಯುದ್ಧವನ್ನು ಮುಂದುವರಿಸುವುದಾಗಿ ಇಸ್ರೇಲ್‌ ಹೇಳಿದೆ.

ಉತ್ತರ ಗಾಜಾ ಪಟ್ಟಿಯಲ್ಲಿ ನೆಲೆಸಿರುವ 11 ಲಕ್ಷಕ್ಕೂ ಅಧಿಕ ಜನರಿಗೆ ಎಚ್ಚರಿಕೆ ನೀಡಿದೆ. ಗಾಜಾ ತೊರೆಯುವಂತೆ ಇಸ್ರೇಲ್‌ ತಿಳಿಸಿದೆ. 24 ಗಂಟೆಗಳ ಒಳಗೆ ಸ್ಥಳಾಂತರಗೊಳ್ಳಬೇಕು. ಇಲ್ಲದಿದ್ದರೆ, ಪ್ರಾಣ ಕಳೆದುಕೊಳ್ಳಬೇಕು ಎಂದು ಇಸ್ರೇಲ್‌ ಪ್ರಧಾನಿ ಹೇಳಿದ್ದಾರೆ.

ಅಕ್ಟೋಬರ್ 7 ರಂದು ಹಮಾಸ್‌ನ ಮಾರಣಾಂತಿಕ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ಯುದ್ಧವನ್ನು ಘೋಷಿಸಿದೆ. ನೆಲದ ಆಕ್ರಮಣಕ್ಕೆ ಮುಂಚಿತವಾಗಿ ಸ್ಥಳಾಂತರಗೊಳ್ಳುವಂತೆ ಜನರಿಗೆ ಇಸ್ರೇಲ್ ಎಚ್ಚರಿಕೆ ನೀಡಿದೆ. ನಾವು ಹಮಾಸ್‌ ವಿರುದ್ಧ ಹೋರಾಟ ನಡೆಸುತ್ತೇವೆ. ಪ್ಯಾಲೆಸ್ತೀನ್‌ ನಾಗರಿಕರು ನಮ್ಮ ಶತ್ರುಗಳಲ್ಲ ಎಂದು ಇಸ್ರೇಲಿ ರಕ್ಷಣಾ ಪಡೆಗಳು ಶನಿವಾರ ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+