Get Updates
Get notified of breaking news, exclusive insights, and must-see stories!

Israel War: ಜೀವ ಉಳಿಸಿಕೊಳ್ಳಲು ಗಂಟು-ಮೂಟೆ ಕಟ್ಟಿಕೊಂಡು ಓಡಿದ ಜನ

ಹಮಾಸ್ ವಿರುದ್ಧ ಕೋಪಕ್ಕೆ, ಇಡೀ ಗಾಜಾಪಟ್ಟಿ ನಗರವನ್ನೇ ಸರ್ವನಾಶ ಮಾಡುತ್ತಿದೆ ಇಸ್ರೇಲ್ ಸೇನೆ. ಇದೇ ಸಮಯದಲ್ಲಿ ಗಾಜಾಪಟ್ಟಿ ಜನರಿಗೆ ಊರು ಬಿಟ್ಟು ಹೋಗಿ ಅಂತಾ ಇಸ್ರೇಲ್ ಸೇನೆ ಖಡಕ್ ಎಚ್ಚರಿಕೆ ನೀಡಿದೆ. ಈಗಾಗಲೇ ಸಾವಿರಾರು ಅಮಾಯಕರು ಬಲಿಯಾದ ಹಿನ್ನೆಲೆ ಜನರು ತಮ್ಮ ಮತ್ತು ತಮ್ಮ ಕುಟುಂಬದ ಜೀವ ಉಳಿಸಿಕೊಳ್ಳಲು ಗಾಜಾಪಟ್ಟಿ ಬಿಟ್ಟು ಹೋಗುತ್ತಿದ್ದಾರೆ. ಹಾಗಾದರೆ ಹೇಗಿದೆ ಈಗ ಗಾಜಾಪಟ್ಟಿ ಪರಿಸ್ಥಿತಿ? ಸಂಪೂರ್ಣ ಚಿತ್ರಣ ಇಲ್ಲಿದೆ.

ಹಮಾಸ್ & ಇಸ್ರೇಲ್ ನಡುವೆ ಯುದ್ಧ ಶುರುವಾಗಿ ಇಂದಿಗೆ ಸರಿಯಾಗಿ ಒಂದು ವಾರ ಕಳೆದಿದೆ. ಈ ಸಮಯದಲ್ಲೇ ಇಸ್ರೇಲ್ ಕಡೆ 1300 ಕ್ಕೂ ಹೆಚ್ಚು ಜನ ಹಾಗೂ ಪ್ಯಾಲೆಸ್ತೀನ್ ಕಡೆ 1800 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ವಾಯುದಾಳಿ ಜೊತೆ ಇಸ್ರೇಲ್ ಗಾಜಾಪಟ್ಟಿ ಮೇಲೆ ಭೂಸೇನೆಯನ್ನೂ ನುಗ್ಗಿಸುತ್ತಿದೆ. ಹೀಗಾಗಿ ಸ್ಥಿತಿ ಕೈಮೀರಿ ಹೊಗಿದ್ದು ನೀವು ಗಾಜಾಪಟ್ಟಿ ಬಿಟ್ಟು ಹೋಗಿ ಅಂತಾ ಇಸ್ರೇಲ್ ಸೇನೆ ಗಾಜಾ ನಿವಾಸಿಗಳಿಗೆ ಆಗ್ರಹಿಸಿದೆ. ಇಷ್ಟೆಲ್ಲ ಹಿಂಸಾಚಾರ ನಡುವೆ ಜನ ಕೂಡ ಜೀವ ಉಳಿಸಿಕೊಳ್ಳಲು ಗಂಟು-ಮೂಟೆ ಕಟ್ಟಿದ್ದಾರೆ.

israel-hamas-conflict

ಎಲ್ಲಿಗೆ ಹೋಗುವುದು.. ಏನು ಮಾಡುವುದು?

ಗಾಜಾಪಟ್ಟಿ ಸಂಪೂರ್ಣ ನಾಶವಾಗಿ ಹೋಗಿದೆ ಏನೂ ತಪ್ಪು ಮಾಡದ ಸಾಮಾನ್ಯ ಜನರು ಇಲ್ಲಿ ಸಮಸ್ಯೆ ಸುಳಿಗೆ ಸಿಲುಕಿದ್ದಾರೆ ಎಂಬ ಆರೋಪ ಇದೆ. ಈ ಎಲ್ಲಾ ನೋವುಗಳ ನಡುವೆ ಜನರಿಗೆ ಎಲ್ಲಿ ಹೊಗುವುದು? ಏನು ಮಾಡುವುದು? ಅನ್ನೋದೆ ತಿಳಿಯುತ್ತಿಲ್ಲ. ಬಹುತೇಕ ಉತ್ತರ ಗಾಜಾ ಪ್ರದೇಶದಿಂದ, ಸಾಮಾನ್ಯ ಜನರು ಬೇರೆ ಬೇರೆ ಜಾಗಗಳಿಗೆ ಹೋಗುತ್ತಿದ್ದಾರೆ. ಹೀಗಾಗಿ ಟ್ರಾಫಿಕ್ ಕೂಡ ಉಂಟಾಗಿದೆ. ಕಾರುಗಳು ಮುಖ್ಯ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿವೆ.

ಹಾಗೇ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಗಾಜಾಪಟ್ಟಿ ಬಿಟ್ಟು ಹೋದರೆ ನಾವು ಸುರಕ್ಷಿತ ಎಂಬುದು ಜನರಿಗೆ ಗೊತ್ತಾಗಿದೆ. ಹೀಗಾಗಿ ಜನರನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಹಾಗೇ ಜನರು ಹಾಸಿಗೆ, ದಿಂಬು, ಬಟ್ಟೆಗಳನ್ನ ಕಾರ್ ಮೇಲೆ ಕಟ್ಟಿಕೊಂಡು ಹೋಗುತ್ತಿದ್ದಾರೆ. ಗಾಜಾದ ಗಲ್ಲಿ ಗಲ್ಲಿಗಳಲ್ಲೂ ಇದೇ ಸೀನ್ ಕಾಣುತ್ತಿದೆ. ಕಾರಿನ ವ್ಯವಸ್ಥೆ ಇಲ್ಲದವರು & ಬಡವರು ಇತರರ ಜೊತೆ ಸೇರಿ ಟ್ರಕ್‌ಗಳ ಮೂಲಕ ತಮ್ಮ ವಸ್ತುಗಳೊಂದಿಗೆ ಸುರಕ್ಷಿತ ಜಾಗಗಳಿಗೆ ಹೋಗುತ್ತಿದ್ದಾರೆ.

israel-hamas-conflict

ಹಮಾಸ್ ನೆಲೆಗಳ ಮೇಲೆ ಭೀಕರ ದಾಳಿ?

ಗಾಜಾಪಟ್ಟಿ ಮೊದಲೇ ಬಡತನ ಹಸಿವಿನಿಂದ ಬಳಲಿದೆ. ಈ ಮಧ್ಯೆ ಹಮಾಸ್ ಕಾಟ ಶುರುವಾಗಿದೆ. ಉಗ್ರರು & ಬಡತನ ನಡುವೆ ನರಳುತ್ತಿದ್ದ ಗಾಜಾಪಟ್ಟಿಯ ಸಾಮಾನ್ಯ ಜನರೀಗ ಇಸ್ರೇಲ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಮಾಸ್ ಹೊಡೆದು ಹಾಕಲು ಇಸ್ರೇಲ್ ಮುಂದಾಗಿದ್ದರೆ, ಕೈಗೆ ಸಿಗುತ್ತಿರುವುದು ಮಾತ್ರ ಸಾಮಾನ್ಯ ಜನ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ವಿರುದ್ಧ ಆಕ್ರೋಶ ಕೂಡ ಮೊಳಗಿತ್ತು. ಹೀಗಾಗಿ ಅಲರ್ಟ್ ಆಗಿರುವ ಇಸ್ರೇಲ್ ಸೇನೆ, ಮೊದಲು ಸಾಮಾನ್ಯ ಜನರು ಗಾಜಾಪಟ್ಟಿ ಬಿಟ್ಟು ಹೋಗಲಿ ಎಂದು ಆದೇಶ ನೀಡಿದೆ. ಆ ನಂತರ ಹಮಾಸ್ ನೆಲೆಗಳ ಮೇಲೆ ಭೀಕರ ದಾಳಿ ನಡೆಸಲು ಇಸ್ರೇಲ್ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

ಇಸ್ರೇಲ್ ಸೇನಾ ಶಕ್ತಿ ಬಲಶಾಲಿ ದೇಶಗಳನ್ನೇ ಮೀರಿಸುತ್ತೆ ಇಸ್ರೇಲ್ ವಾಯು ಸೇನೆಯ ಬಳಿ ಡ್ರೋನ್‌ ಸೇರಿ 684 ಯುದ್ಧ ವಿಮಾನ ಇವೆ. ಇಸ್ರೇಲ್ ಭೂ ಸೇನೆ ಬಲವಾಗಿದ್ದು, 2500 ಯುದ್ಧ ಟ್ಯಾಂಕರ್ ಹಾಗೂ 5000 ಶಸ್ತ್ರಾಸ್ತ್ರ ಸಾಗಿಸುವ ವಾಹನ ಇದೀಗ ಗಾಜಾಪಟ್ಟಿ ಕಡೆಗೆ ನುಗ್ಗುತ್ತಿವೆ. ಇದರ ಜೊತೆ ಸುಮಾರು 3,00,000 ಇಸ್ರೇಲಿ ಸೈನಿಕರು ಗಾಜಾಪಟ್ಟಿ ಮೇಲೆ ದಾಳಿ ಮಾಡಿ, ಹಮಾಸ್ ನೆಲೆಗಳ ನಾಶ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ಮೊದ್ಲು ಜೀವ ಉಳಿಸಿಕೊಳ್ಳೋಣ ಅಂತಾ ಜನರು ಕೂಡ ಓಡಿ ಹೋಗುತ್ತಿದ್ದಾರೆ. ತಮ್ಮ ಹಾಸಿಗೆ & ದಿಂಬು ಎಲ್ಲವನ್ನೂ ಕಾರ್‌ಗೆ ಕಟ್ಟಿಕೊಂಡು ಓಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+