ರಾಮನವಮಿ ಹಿಂಸಾಚಾರ ಪೂರ್ವ ಯೋಜಿತ ಸಂಚು: ಇಸ್ಲಾಮಿಕ್ ರಾಷ್ಟ್ರಗಳ ಹೇಳಿಕೆ ಖಂಡಿಸಿದ ಭಾರತ
ರಾಮನವಮಿ ಮೆರವಣಿಗೆಯಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿ OIC ಸೆಕ್ರೆಟರಿಯೇಟ್ ಹೇಳಿಕೆ ನೀಡಿದೆ. ರಾಮನವಮಿ ಹಿಂಸಾಚಾರ ಪೂರ್ವ ಯೋಜಿತ ಸಂಚು ಎಂದು ಆರೋಪಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಒಐಸಿ ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ.

ಭಾರತದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಇಂದು OIC ಸೆಕ್ರೆಟರಿಯೇಟ್ ನೀಡಿರುವ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದು ಅವರ ಕೋಮುವಾದಿ ಮನಸ್ಥಿತಿ ಮತ್ತು ಭಾರತ ವಿರೋಧಿ ಅಜೆಂಡಾಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಬಾಗ್ಚಿ ಹೇಳಿದರು.
ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಭಾರತದ ಹಲವಾರು ರಾಜ್ಯಗಳಲ್ಲಿ ಮದರಸಾ ದಹನ ಸೇರಿದಂತೆ ಹಲವೆಡೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳನ್ನು ಯೋಜನೆ ಮೂಲಕ ಮಾಡಲಾಗುತ್ತಿದೆ ಎಂದು OICಯ ಪ್ರಧಾನ ಕಾರ್ಯದರ್ಶಿ ಈ ಹಿಂದೆ ಹೇಳಿಕೆಯನ್ನು ನೀಡಿದ್ದರು. ಮಾರ್ಚ್ 31, 2023 ರಂದು ಬಿಹಾರ ಷರೀಫ್‌ನಲ್ಲಿ ಉಗ್ರ ಹಿಂದೂ ಜನಸಮೂಹದಿಂದ ಗ್ರಂಥಾಲಯದ ಮೇಲೆ ದಾಳ ಮಾಡಲಾಗಿತ್ತು.
ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಹೆಚ್ಚುತ್ತಿರುವ 'ಇಸ್ಲಾಮೋಫೋಬಿಯಾ' ಮತ್ತು ವ್ಯವಸ್ಥಿತ ಗುರಿಯ ಎದ್ದುಕಾಣುತ್ತಿದೆ. ಇಂತಹ 'ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳ ಪ್ರಚೋದನಕಾರಿ ಕೃತ್ಯಗಳನ್ನು ನಾವು ಖಂಡಿಸುತ್ತೇವೆ ಎಂದು OIC ಜನರಲ್ ಸೆಕ್ರೆಟರಿಯೇಟ್ ಹೇಳಿದೆ.

'ಇಂತಹ ಕೃತ್ಯಗಳ ಪ್ರಚೋದಕರು ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ದೇಶದಲ್ಲಿ ಮುಸ್ಲಿಂ ಸಮುದಾಯದ ಸುರಕ್ಷತೆ, ಭದ್ರತೆ, ಹಕ್ಕುಗಳು ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಓಐಸಿ ಪ್ರಧಾನ ಕಾರ್ಯದರ್ಶಿ ಭಾರತೀಯ ಅಧಿಕಾರಿಗಳಿಗೆ ಕರೆ ನೀಡುತ್ತಾರೆ' ಎಂದು ಒಐಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಒಐಸಿ ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ.
ರಾಮನವಮಿ ಮೆರವಣಿಗೆಯಲ್ಲಿ ದೇಶದ ಹಲವೆಡೆ ಘರ್ಷಣೆ
ರಾಮನವಮಿ ದಿನದಂದು ದೇಶದ ಹಲವೆಡೆ ಸಂಘರ್ಷಗಳು ವರದಿಯಾಗಿದೆ. ಮಸೀದಿ ಮಂದಿರಗಳ ಮೇಲೆ ಕಲ್ಲು ತೂರಾಟ, ಪರಸ್ಪರ ಹಲ್ಲೆ, ಶಸ್ತ್ರಗಳ ಬಳಕೆ, ವಾಹನಗಳಿಗೆ ಬೆಂಕಿ, ಪೊಲೀಸರ ಮೇಲೆ ದಾಳಿ ಇಂತೆಲ್ಲಾ ಘಟನೆಗಳು ವರದಿಯಾಗಿದೆ. ಯುಪಿ, ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ ಇತರೆಡೆ ಗಲಭೆಗಳು ವರದಿಯಾಗಿದೆ.
ಪ್ರತೀ ರಾಮನವಮಿ ವೇಳೆ ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದು ಸ್ಥಳೀಯ ಸರ್ಕಾರಗಳು ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿವೆ. ಈ ನಡುವೆ ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾದ ಜನರ ಕೆಲ ಫೋಟೋಗಳು ವೈರಲ್ ಮಾಡಲಾಗಿದೆ.

ರಾಮನವಮಿ ಮೆರವಣಿಗೆ ವೇಳೆ ಹೌರಾದಲ್ಲಿ ಗಲಾಟೆ
ಕೋಲ್ಕತ್ತಾದ ಹೌರಾದಲ್ಲಿ ರಾಮನವಮಿ ಮೆರವಣಿಗೆ ವೇಳೆ ಬಂದೂಕು ಝಳಪಿಸಿರುವ ಆರೋಪ ಹೊತ್ತಿರುವ ಸುಮಿತ್ ಶಾ ಎಂಬಾತನನ್ನು ಬಂಧಿಸಿದ ನಂತರ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಬಿಜೆಪಿ ವಿರುದ್ಧ ದಾಳಿಯನ್ನು ಹೆಚ್ಚಿಸಿದೆ. ಇತ್ತ ರಾಜ್ಯದ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಬೇಕು ಮತ್ತು ಕೇಂದ್ರ ಏಜೆನ್ಸಿಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
'ಬಿಜೆಪಿಯವರು ಎಲ್ಲಾ ಗಲಭೆಗೆ ಕಾರಣ. ಹೀಗಾಗಿ ನಾವು ಸದಾ ಎಚ್ಚರದಿಂದಿರಬೇಕು, ಬಂಗಾಳದ ಜನರಿಗೆ ಗಲಭೆ ಇಷ್ಟವಿಲ್ಲ, ಗಲಭೆಗಳು ನಮ್ಮ ಸಂಸ್ಕೃತಿಯಲ್ಲಿಲ್ಲ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ, ಜನರು ತೊಡಗಿಸಿಕೊಳ್ಳುವುದಿಲ್ಲ. ಹೀಗಾಘಿ ಬಿಜೆಪಿ ಅವರೇ ಗಲಭೆಗೆ ಕಾರಣ' ದೀದಿ ಹೇಳಿದ್ದಾರೆ.
ಬಿಜೆಪಿ ಗಲಭೆಗಳನ್ನು ಉಂಟುಮಾಡಲು ಹೊರಗಿನಿಂದ ಬಾಡಿಗೆ ಗೂಂಡಾಗಳನ್ನು ಕರೆತರುತ್ತಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.












Click it and Unblock the Notifications