ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾಕ್‌ ಮಾರುಕಟ್ಟೆಯಲ್ಲಿ ಬಾಂಬ್‌ಸ್ಫೋಟ: ಮೃತರ ಸಂಖ್ಯೆ 35ಕ್ಕೆ ಏರಿಕೆ

|
Google Oneindia Kannada News

ಬಾಗ್ದಾದ್, ಜುಲೈ 20: ಬಾಗ್ದಾದ್‌ನ ಉಪನಗರ ಸದರ್ ಸಿಟಿಯಲ್ಲಿನ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಈದ್ ಹಬ್ಬದಲ್ಲಿ ನಿರತರಾಗಿದ್ದ ವೇಳೆ ರಸ್ತೆ ಬದಿಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು, ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಘಟನೆಯನ್ನು ಖಂಡಿಸಿರುವ ಪ್ರಧಾನಿ ಮುಸ್ತಾಫಾ ಅಲ್-ಖದಿಮಿ ಅವರು ಭದ್ರತಾ ಪಡೆಗಳ ಅಧಿಕಾರಿಗೊಂದಿಗೆ ತುರ್ತು ಸಭೆ ನಡೆಸಿದ್ದು, ಮಾಹಿತಿ ಪಡೆದಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Bomb attacks have been on the rise in Sadr City

ಇಸ್ಲಾಮಿಕ್ ಸ್ಟೇಟ್ ದಾಳಿಯ ಹೊಣೆ ಹುತ್ತುಕೊಂಡಿದೆ. ಐಎಸ್ ಟೆಲಿಗ್ರಾಂ ಚಾನೆಲ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದು, ಅಬು ಹಮ್ಜಾ ಅಲ್-ಇರಾಕಿ ಹೆಸರಿನ ಆತ್ಮಾಹುತಿ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಗಾಯಗೊಂಡಿದ್ದ ಕೆಲವರ ಸ್ಥಿತಿ ಗಂಭೀರವಾಗಿದೆ, ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇರಾಕಿ ಅಧ್ಯಕ್ಷ ಬರ್ಹಮ್ ಸಾಲಿಹ್ ಬಾಂಬ್ ಸ್ಫೋಟವನ್ನು "ಘೋರ ಅಪರಾಧ" ಎಂದು ಹೇಳಿದ್ದು ಮೃತರಿಗೆ ಸಂತಾಪ ಸೂಚಿಸಿದರು. ಅವರು ಈದ್ ಮುನ್ನಾದಿನದಂದು ಸದರ್ ಸಿಟಿಯಲ್ಲಿರುವ ನಮ್ಮ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸಾಲಿಹ್ ಟ್ವೀಟ್ ಮಾಡಿದ್ದು ಅವರು (ದುಷ್ಕರ್ಮಿಗಳು) ಒಂದು ಕ್ಷಣವೂ ಜನರನ್ನು ಸಂತೋಷದಿಂದಿರಲು ಬಿಡುವುದಿಲ್ಲ ಎಂದಿದ್ದಾರೆ.

Security forces comb through wreckage in Wahailat market, Sadr City

"ಇದು ಇರಾಕ್ ನಲ್ಲಿ ದುಃಖದ ಈದ್ ರಾತ್ರಿ" ಎಂದು ಇಂಟರ್ನ್ಯಾಷನಲ್ ರೆಡ್ ಕ್ರಾಸ್ ಹೇಳಿದೆ. "ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಮ್ಮ ಆಳವಾದ ಸಹಾನುಭೂತಿ ಮತ್ತು ಸಂತಾಪ."

ಈ ವರ್ಷ ಮೂರನೇ ಬಾರಿಗೆ ಜನದಟ್ಟಣೆ ಇರುವ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಏಪ್ರಿಲ್ ನಲ್ಲಿ ಸಾದರ್ ನಗರದಲ್ಲಿ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದರು. ಮಾರುಕಟ್ಟೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಜೋಡಿಸಲಾದ ಸ್ಫೋಟಕ ಸಾಧನದಿಂದ ಆ ಸ್ಫೋಟ ಸಂಭವಿಸಿದೆ.

English summary
The bomb ripped through a crowded market in a Shiite majority city that has come under increasing attack. The "Islamic State" militant group claimed responsibility for the attack on the eve of Eid holiday celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X