Israel-Iran War: ಇಸ್ರೇಲ್ ಕೋಪ ಮತ್ತೆ ಹೆಚ್ಚಿಸಿದ ಇರಾನ್ ದೇಶದ ಸುಪ್ರೀಂ ಲೀಡರ್?
ಇರಾನ್ & ಇಸ್ರೇಲ್ ಜಗಳ ಇನ್ನೇನು ಸೈಲೆಂಟ್ ಆಗಿಬಿಡುತ್ತೆ ಅಂತಾ ನಿರೀಕ್ಷೆ ಇಟ್ಟುಕೊಂಡ ಬೆನ್ನಲ್ಲೇ ಮತ್ತೆ ಕಿರಿಕ್ ಶುರುವಾಗಿದೆ. ಈಗ ಕಿರಿಕ್ ಶುರುವಾಗಲು ಕಾರಣವಾಗಿದ್ದು ಇರಾನ್ ಸರ್ವೋಚ್ಛ ನಾಯಕನ ಹೇಳಿಕೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಈ ತಿಕ್ಕಾಟ, ಇನ್ನೇನು ಸೈಲೆಂಟ್ ಆಗೋಯ್ತು ಗುರು ಅಂತಾ ಅಂದುಕೊಳ್ಳುವ ಸಮಯದಲ್ಲೇ ಇರಾನ್‌ನ ಸುಪ್ರೀಂ ಲೀಡರ್ ನೀಡಿರುವ ಹೇಳಿಕೆ ಬೆಂಕಿ ಹೊತ್ತಿಸಿದೆ. ಹಾಗಾದ್ರೆ ಏನದು ಹೇಳಿಕೆ? ಹೀಗೆ ಒಂದು ಹೇಳಿಕೆ ಹೇಗೆಲ್ಲಾ ಸಂಚಲನ ಸೃಷ್ಟಿ ಮಾಡುತ್ತಿದೆ? ಬನ್ನಿ ತಿಳಿಯೋಣ.
ಮಧ್ಯಪ್ರಾಚ್ಯ ದೇಶಗಳ ನಡುವೆ ದ್ವೇಷದ ಬೆಂಕಿ ಹೆಚ್ಚಾಗಿದ್ದು, ಕಿತ್ತಾಟ ಕೂಡ ಜೋರಾಗಿದೆ. ಇಸ್ರೇಲ್ ಒಂದು ಬಾರಿ ಶತ್ರುಗಳ ಮೇಲೆ ಸೇಡಿಗೆ ಬಿತ್ತು ಅಂದ್ರೆ ಸೇಡಿಗೆ ಸೇಡು ಗ್ಯಾರಂಟಿ. ಈ ಕಾರಣಕ್ಕೆ ಇದೀಗ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ಯುದ್ಧ ಆರಂಭವಾಗಿದೆ. ಒಂದು ಕಡೆ ಇಸ್ರೇಲ್ ವಿರುದ್ಧ ಲೆಬನಾನ್, ಇರಾನ್, ಸಿರಿಯಾ ಒಟ್ಟಾಗಿ ದಾಳಿ ಮಾಡಲು ಸಜ್ಜಾಗಿವೆ. ಈ ಸಮಯದಲ್ಲೇ ಇರಾನ್ ನೇರವಾಗಿ ಇಸ್ರೇಲ್ ವಿರುದ್ಧ ಕ್ಷಿಪಣಿಗಳ ಮೂಲಕ ದಾಳಿ ಮಾಡಿದೆ. ಹಾಗೇ ಮತ್ತಷ್ಟು ಘೋರ ದಾಳಿಯ ಬಗ್ಗೆ ಎಚ್ಚರಿಕೆ ನೀಡುತ್ತಿದೆ ಇರಾನ್. ಇಂತಹ ಸಮಯದಲ್ಲೇ ಪ್ರತಿಕ್ರಿಯೆ ನೀಡಿರುವ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತೊಮ್ಮೆ ಇಸ್ರೇಲ್ ಸೇನೆಯನ್ನ ಕೆಣಕಿದ್ದಾರೆ.

ಹಮಾಸ್ ಅಟ್ಯಾಕ್ ಬಗ್ಗೆ ಸಮರ್ಥನೆ!
ಅಂದಹಾಗೆ ಈಗ ಇಸ್ರೇಲ್ ಬಗ್ಗೆ ಮಾತನಾಡಿರುವ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ, ಇಸ್ರೇಲ್ ವಿರುದ್ಧವೇ ಹಮಾಸ್ ಕಳೆದ ವರ್ಷ ನಡೆಸಿದ್ದ ದಾಳಿಯನ್ನ ಇದೀಗ ಸಮರ್ಥಿಸಿಕೊಂಡು ಇಸ್ರೇಲ್ ನಾಯಕತ್ವವನ್ನು ಕೆಣಕಿದ್ದಾರೆ. ಅಲ್ಲದೆ ಹಮಾಸ್ ನಡೆಸಿರುವ ದಾಳಿಯನ್ನು ಈಗ ತಾರ್ಕಿಕ & ಕಾನೂನಾತ್ಮಕ ಎಂದು ಹೇಳುವ ಮೂಲಕ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹೊಸ ಸಂಚಲನ ಸೃಷ್ಟಿ ಮಾಡಿದ್ದಾರೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಶುಕ್ರವಾರದ ಪಾರ್ಥನೆ ವೇಳೆ ಅಯತೊಲ್ಲಾ ಅಲಿ ಖಮೇನಿ ನೇತೃತ್ವ ವಹಿಸಿ ಮಾತನಾಡಿದರು.
41 ಸಾವಿರಕ್ಕೂ ಹೆಚ್ಚು ಜನ ಬಲಿ?
ಮಧ್ಯಪ್ರಾಚ್ಯದಲ್ಲಿ ಮೊದಲು ಹೀಗೆ ಬೆಂಕಿ ಹೊತ್ತಿಕೊಂಡಿದ್ದು 2023ರ ಅಕ್ಟೋಬರ್ 7ರಂದು. ಇಸ್ರೇಲ್ ವಿರುದ್ಧ 2023ರ ಅಕ್ಟೋಬರ್ 7 ರಂದು ಹಮಾಸ್ ದಾಳಿ ನಡೆಸಿತ್ತು. ಹೀಗಾಗಿ 1,200 ಇಸ್ರೇಲ್ ಪ್ರಜೆಗಳು ಮೃತಪಟ್ಟರು. ಈ ಘಟನೆ ನಂತರ ರೊಚ್ಚಿಗೆದ್ದ ಇಸ್ರೇಲ್ ಯುದ್ಧವನ್ನೇ ಸಾರಿತ್ತು, ಕೊನೆಗೆ ಒಂದು ವರ್ಷದಿಂದ ಈ ಯುದ್ಧ ನಡೆಯುತ್ತಿದ್ದು ಈವರೆಗೂ ಸುಮಾರು 41 ಸಾವಿರಕ್ಕೂ ಹೆಚ್ಚು ಗಾಜಾ ನಿವಾಸಿಗಳು ಯುದ್ಧಕ್ಕೆ ಬಲಿಯಾಗಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ.












Click it and Unblock the Notifications