Israel & Iran: ಇರಾನ್ ಉಪಗ್ರಹ ಉಡಾವಣೆಯಿಂದ ಹೊಸ ಆತಂಕ ಶುರು?
ಇಸ್ರೇಲ್ & ಇರಾನ್ ನಡುವೆ ಘೋರ ಕಾಳಗ ನಡೆದಿತ್ತು, ಕೆಲವು ತಿಂಗಳ ಹಿಂದಷ್ಟೇ ಇಬ್ಬರ ನಡುವೆ ಇನ್ನೇನು ಯುದ್ಧ ನಡೆದೇ ಹೋಗಲಿದೆ ಎನ್ನುವ ವಾತಾವರಣ ಕೂಡ ನಿರ್ಮಾಣ ಆಗಿತ್ತು. ಆ ನಂತರ ಪರಿಸ್ಥಿತಿ ಕೂಡ ತಣ್ಣಗಾಗಿ ಇಸ್ರೇಲ್ & ಇರಾನ್ ಸೈಲೆಂಟ್ ಆಗಿದ್ದವು. ಇಷ್ಟೆಲ್ಲದರ ನಡುವೆ ಇದೀಗ ಇರಾನ್ ಉಪಗ್ರಹ ಉಡಾವಣೆ ಮೂಲಕ ತನ್ನ ಶತ್ರು ಪಡೆಗಳಿಗೆ ಆಘಾತ ನೀಡಲು ಮುಂದಾಗಿದೆ!
ಹೌದು, ಇದೀಗ ಇರಾನ್ ಮಾಡಿರುವ ಪ್ಲಾನ್ ಕಂಡು ಮತ್ತೊಮ್ಮೆ ಇಸ್ರೇಲ್ & ಅಮೆರಿಕದ ನಾಯಕರು ಬೆಚ್ಚಿ ಬಿದ್ದಿದ್ದಾರೆ. ಪದೇ ಪದೇ ಅಮೆರಿಕ & ಇರಾನ್ ನಾಯಕರ ನಡುವೆ ಕಿರಿಕ್ ನಡೆಯುತ್ತಾ ಬಂದಿದೆ. ಅದರಲ್ಲೂ ಇರಾನ್ ತನ್ನ ಬಳಿ ಇರುವ ಪರಮಾಣು ಅಸ್ತ್ರಗಳನ್ನೇ, ಶತ್ರುಗಳ ವಿರುದ್ಧದ ಬಂಡವಾಳ ಮಾಡಿಕೊಂಡಿದೆ. ಇದು ಸಾಲದು ಎನ್ನುವಂತೆ ಈಗ ಭಾರಿ ದೊಡ್ಡ ಪ್ರಮಾದಕ್ಕೆ ಕೂಡ ಇರಾನ್ ಸ್ಕೆಚ್ ಹಾಕಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ನ್ಯೂಕ್ಲಿಯರ್ ದಾಳಿಗೆ ಇರಾನ್ ಸ್ಕೆಚ್?
ಅಷ್ಟಕ್ಕೂ ಇದೀಗ ಇರಾನ್ ತನ್ನ ಶತ್ರುಗಳಾದ ಅಮೆರಿಕ & ಇಸ್ರೇಲ್‌ಗೆ ವಾರ್ನಿಂಗ್ ಕೊಡುವ ರೀತಿ ಸಿಮೋರ್ಗ್ ಪ್ರೋಗ್ರಾಂ ಅನ್ನು ಬಳಸಿಕೊಳ್ಳಲು ಮುಂದಾಗಿದೆ. ಸಿಮೋರ್ಗ್ ಪ್ರೋಗ್ರಾಂನ ಮೂಲಕ, ಬಾಹ್ಯಾಕಾಶ ನೌಕೆಯ ಕಕ್ಷೆ ಬದಲಾಯಿಸುವ ಸಾಮರ್ಥ್ಯ ಹೊಂದಿದ ಉಪಗ್ರಹ ಉಡಾವಣೆ ಮಾಡಿದೆ ಎಂದು ಆರೋಪ ಮಾಡಲಾಗಿದೆ. ಇದರ ಬಗ್ಗೆ ಯಾಕಿಷ್ಟು ಭಯ, ಭಯ ಕಾಡುತ್ತಿದೆ ಅಂದ್ರೆ, ಅಮೆರಿಕ & ಇಸ್ರೇಲ್ ಮೇಲೆ ಪರಮಾಣು ಬಾಂಬ್ ದಾಳಿಗೆ ಇರಾನ್ ಈ ಮೂಲಕ ಸ್ಕೆಚ್ ಹಾಕಿದೆಯಾ? ಎಂಬ ಅನುಮಾನವೇ ಭಾರಿ ಆತಂಕಕ್ಕೆ ಕಾರಣವಾಗಿದೆ.
ನ್ಯೂಕ್ಲಿಯರ್ ಬಾಂಬ್ ಸಾಮರ್ಥ್ಯ!
ಇರಾನ್ ಇದೇ ಕೆಲಸದಲ್ಲಿ ಹಿಂದೆ ಹಲವು ಬಾರಿ ಪ್ರಯತ್ನ ಮಾಡಿ ಸಿಮೋರ್ಗ್ ಪ್ರೋಗ್ರಾಂನ ಜಾರಿಗೆ ತರುವಲ್ಲಿ ಫೇಲ್ ಆಗಿತ್ತು. ಆದರೆ ಇದೀಗ ಇರಾನ್ ಸಿಮೋರ್ಗ್ ಪ್ರೋಗ್ರಾಂನಲ್ಲಿ ಭಾರಿ ದೊಡ್ಡ ಸಕ್ಸಸ್ ಕಂಡಿದೆ. ಅಂದಹಾಗೆ ಈ ಉಪಗ್ರಹ ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿ ಸ್ಥಾಪನೆ ಮಾಡಿರುತ್ತಾರೆ. ಹಾಗೇ ಇದ್ರಲ್ಲಿ ಪರಮಾಣು ಅಂದ್ರೆ ನ್ಯೂಕ್ಲಿಯರ್ ಬಾಂಬ್ ಅಡಗಿಸಿ ಇಡಬಲ್ಲ ಸಾಮರ್ಥ್ಯ ಕೂಡ ಇದೆ ಎಂದು ಅನುಮಾನಿಸಲಾಗಿದೆ. ಹೀಗಾಗಿ ಇದೀಗ ಭಾರಿ ದೊಡ್ಡ ಚರ್ಚೆಗೆ ಈ ವಿಚಾರ ಇದೀಗ ವೇದಿಕೆ ಒದಗಿಸಿದೆ.
ಒಟ್ನಲ್ಲಿ ಈಗಾಗಲೇ ರಷ್ಯಾ & ಉಕ್ರೇನ್ ಬಡಿದಾಡುವ ಸಮಯದಲ್ಲಿ, ಮತ್ತೊಂದು ಕಡೆ ಗಾಜಾ & ಇಸ್ರೇಲ್ ಹಾಗೂ ಲೆಬನಾನ್ & ಇಸ್ರೇಲ್ ನಡುವೆ ಯುದ್ಧ ನಡೆಯುವಾಗಲೇ ಹೀಗೆ ಇರಾನ್ ಕೂಡ ರೊಚ್ಚಿಗೆದ್ದು ಕೂತಿದೆ. ಹೀಗಾಗಿ ಮುಂದಿನ ಪರಿಸ್ಥಿತಿ ಏನಾಗಬಹುದು? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications