ಅಮೆರಿಕ ಜೊತೆ ಇರಾನ್ ಸಭೆ ಬಹುತೇಕ ಸಕ್ಸಸ್, ಮಧ್ಯಪ್ರಾಚ್ಯ ಶಾಂತಿಗಾಗಿ ಭಾರಿ ಪ್ರಯತ್ನ | Iran Foreign Minister
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮೂಡಿಸುವ ಪ್ರಯತ್ನ ಮೊದಲ ಹಂತದಲ್ಲೇ ಭರ್ಜರಿಯಾಗಿ ಸಕ್ಸಸ್ ಆಗುತ್ತಿದೆ. ಎರಡೂ ದೇಶಗಳ ನಡುವೆ ಇನ್ನೇನು ಪರಮಾಣು ಯುದ್ಧ ನಡೆಯುವ ಆತಂಕವು ಆವರಿಸಿತ್ತು, ಅಲ್ಲದೆ ಅಮೆರಿಕ ತನ್ನ ಸೇನೆಯ ದೊಡ್ಡ ಯುದ್ಧ ನೌಕೆ ಹಾಗೂ ಯುದ್ಧ ವಿಮಾನಗಳನ್ನ ಇರಾನ್ ಸಮೀಪಕ್ಕೆ ನುಗ್ಗಿಸಿತ್ತು. ಎಲ್ಲವನ್ನೂ ಕಂಡು ಇಡೀ ಪ್ರಪಂಚ ಮತ್ತೊಂದು ಮಹಾಯುದ್ಧ ಫಿಕ್ಸ್ ಆಯ್ತಾ? ಎಂಬ ಚಿಂತೆಯಲ್ಲಿ ಮುಳುಗಿತ್ತು. ಆದರೆ ಇದೀಗ ಅಮೆರಿಕ & ಇರಾನ್ ನಡುವೆ ಪರಮಾಣು ಒಪ್ಪಂದದ ಮೊದಲ ಹಂತದ ಮಾತುಕತೆ ಭರ್ಜರಿ ಸಕ್ಸಸ್ ಕಾಣುತ್ತಿದೆ.
ಅಮೆರಿಕ ಸುಖಾಸುಮ್ಮನೆ ಇಷ್ಟು ಹೆಸರು ಮಾಡಿಲ್ಲ ಅಥವಾ ದೊಡ್ಡಣ್ಣ ಎಂಬ ಬಿರುದು ಪಡೆದಿಲ್ಲ. ನಿಜವಾಗಿಯೂ ಅಮೆರಿಕದ ಬಳಿ ಅಷ್ಟು ಶಕ್ತಿ ಹಾಗೂ ಸಾಮರ್ಥ್ಯ ಇದ್ದು, ಅಮೆರಿಕ ಸೇನೆ ಜಗತ್ತಿನ ನಂಬರ್ 1 ಸ್ಥಾನದಲ್ಲಿ ಇದೆ. ಅಕಸ್ಮಾತ್ ಎದುರಾಳಿ ದೇಶಗಳ ಜೊತೆಗೆ ಯುದ್ಧವಾದರೆ, ಅದು ಯಾವ ರೀತಿಯ ಪರಿಸ್ಥಿತಿಯೇ ಇರಲಿ ಗೆದ್ದು ಬೀಗುವ ಕೆಪಾಸಿಟಿ ಅಮೆರಿಕಗೆ ಇದೆ. ಹೀಗಾಗಿಯೇ ಇರಾನ್ ದೇಶ ತನ್ನ ಬಳಿ ಪರಮಾಣು ಅಸ್ತ್ರ ಇದೆ ಎಂಬ ರೀತಿ ಭಯ ಹುಟ್ಟಿಸುತ್ತಿದ್ದರೂ ಕೇರ್ ಮಾಡದೆ ನೇರವಾಗಿ ಯುದ್ಧಕ್ಕೆ ನುಗ್ಗಿತ್ತು ಅಮೆರಿಕ. ಅದರಲ್ಲೂ ಅಮೆರಿಕದ ಪ್ರಬಲ ಯುದ್ಧ ನೌಕೆ ತನ್ನ ಬಳಿ ಬಂದಿದ್ದೇ ತಡ ಇರಾನ್ ತನ್ನ ರಾಗ ಕೂಡ ಬದಲಿಸಿತ್ತು. ಇದೀಗ ಶಾಂತಿ ಮಾತುಕತೆ ಮೊದಲ ಹಂತ ಒಮನ್ ದೇಶದಲ್ಲಿ ಬಹುತೇಕ ಯಶಸ್ಸು ಕಂಡಿದೆ.

ಮಧ್ಯಪ್ರಾಚ್ಯ ಭಾಗಕ್ಕೆ ಅತಿಮುಖ್ಯ ವಿಚಾರ
ಇರಾನ್ & ಅಮೆರಿಕ ನಡುವೆ ಸಂಧಾನ ನಡೆದರೆ ಅದು ಸಂಪೂರ್ಣ ಮಧ್ಯಪ್ರಾಚ್ಯಕ್ಕೆ ಸಹಾಯ ಆಗಲಿದೆ. ಅಮೆರಿಕ ಜೊತೆಗೆ ಮಧ್ಯಪ್ರಾಚ್ಯ ಭಾಗದ ದೇಶಗಳು ಉತ್ತಮ ಬಾಂಧವ್ಯ ಹೊಂದಿವೆ, ಆದರೆ ಇರಾನ್ ಜೊತೆಗೆ ಬಹುತೇಕ ದೇಶಗಳು ಅಂತರ ಕಾಯ್ದುಕೊಂಡು ಬಂದಿವೆ. ಒಮಾನ್ ಮಾತ್ರ ಎರಡೂ ದೇಶಗಳ ಜೊತೆಗೆ ನಂಬಿಕೆ ಹಾಗೂ ಸ್ನೇಹ ಉಳಿಸಿಕೊಂಡು ಬಂದಿದ್ದು, ಇರಾನ್ & ಅಮೆರಿಕ ಜೊತೆಗೆ ಒಮಾನ್‌ಗೆ ಒಳ್ಳೆಯ ಸಂಬಂಧ ಇದೆ. ಇದೇ ಕಾರಣಕ್ಕೆ ಒಮಾನ್ ನೆಲದಲ್ಲಿ ಬಂದು ಸಂಧಾನ ಮಾತುಕತೆ ನಡೆಸಿದ ಇರಾನ್ ಈಗ ಅಮೆರಿಕ ಜೊತೆಗಿನ ಚರ್ಚೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ಪರಮಾಣು ಒಪ್ಪಂದ ಘೋಷಣೆ ಆಗುವ ನಿರೀಕ್ಷೆ ಇದೆ.
ಪರಮಾಣು ಒಪ್ಪಂದಕ್ಕೆ ಸಕಲ ಸಿದ್ಧತೆ
2015ರ ಪರಮಾಣು ಒಪ್ಪಂದದ ಮಾತುಕತೆ ಆಧಾರದಲ್ಲಿ ಮತ್ತೊಮ್ಮೆ ಅಮೆರಿಕ ಹಾಗೂ ಇರಾನ್ ಚರ್ಚೆ ನಡೆಸಿವೆ ಎನ್ನಲಾಗಿದೆ. ಇತ್ತೀಚೆಗೆ ಇರಾನ್ ಪರಮಾಣು ಬಾಂಬ್ ಪ್ರಯೋಗ ನಡೆಸಲು ಸಜ್ಜಾಗುತ್ತಿದೆ ಎಂದು ಅಮೆರಿಕ ಮತ್ತು ಇಸ್ರೇಲ್‌ಗೆ ಅನುಮಾನ ಬಂದಿತ್ತು. ಹೀಗಾಗಿ ಸೂಕ್ತವಾದ ಒಪ್ಪಂದ ನಡೆದರೆ ಇರಾನ್ ಪರಮಾಣು ಅಸ್ತ್ರಗಳಿಂದ ದೂರ ಉಳಿಯಲಿದೆ ಎಂಬುದು ಅಮೆರಿಕದ ಲೆಕ್ಕಾಚಾರ. ಹಾಗೇ ಇನ್ನೊಂದು ಕಡೆ ಇರಾನ್ ಈಗ ಯುದ್ಧದಿಂದ ಬಚಾವ್ ಆಗಲು ಈ ಒಪ್ಪಂದಕ್ಕೆ ಜೈ ಎನ್ನಲೇಬೇಕಿದೆ.












Click it and Unblock the Notifications