ಓಡಿ ಹೋಗುತ್ತಿರುವ ಇರಾನ್ ಪ್ರಜೆಗಳು, ಎಲ್ಲೆಲ್ಲೂ ಬರೀ ಬಾಂಬ್ & ಮಿಸೈಲ್ ಸದ್ದು! Israel And Iran
ಇರಾನ್ ನೆಲದಲ್ಲಿ ಅಕ್ಷರಶಃ ನರಕವೇ ನಿರ್ಮಾಣ ಆಗಿ ಹೋಗಿದೆ, ಜನರು ನಲುಗಿ ಹೋಗಿ ಜೀವ ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ದಿಢೀರ್ ಇರಾನ್ ರಾಜಧಾನಿ ಧಗಧಗ ಹೊತ್ತಿ ಉರಿಯುತ್ತಿದ್ದು, ಸುಮಾರು 600 ಜನರು ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಕಠಿಣ ಸಮಯದಲ್ಲೇ ಇರಾನ್ ಪ್ರಜೆಗಳು ಕೂಡ ದೇಶದ ರಾಜಧಾನಿ ಬಿಟ್ಟು ಹೊರಗೆ ಓಡಿ ಬರುತ್ತಿದ್ದು, ಈಗಿನ ವಾತಾವರಣ ನೋಡಿದರೆ ಕೆಲವೇ ಕೆಲವು ದಿನಗಳಲ್ಲಿ ಸ್ಮಶಾನ ಆಗಿ ಹೋಗಲಿದೆ ಇರಾನ್!
ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಶುರುವಾಗಲು ಪ್ರಮುಖ ಕಾರಣ ಡ್ರೋನ್ ದಾಳಿ ಎಂದು ಆರೋಪಿಸಲಾಗಿದೆ. ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 ಡ್ರೋನ್‌ಗಳನ್ನು ಹಾರಿಸಿದೆ ಅಂತಾ ಇಸ್ರೇಲ್ ಆರೋಪ ಮಾಡಿ, ತಿರುಗೇಟು ನೀಡಲು ಮರುದಾಳಿ ನಡೆಸಿತ್ತು. ಆ ನಂತರವೇ ನೋಡಿ ಅಸಲಿ ಆಟ ಶುರುವಾಗಿದ್ದು, ಮತ್ತೆ ಇರಾನ್ ಸೇನೆಯಿಂದ ಇಸ್ರೇಲ್ ವಿರುದ್ಧ ಭಾರಿ ದೊಡ್ಡ ಮಟ್ಟದಲ್ಲಿ ಅಟ್ಯಾಕ್ ನಡೆದಿತ್ತು. ಹೀಗೆ ಇರಾನ್ & ಇಸ್ರೇಲ್ ಭಾರಿ ಭರ್ಜರಿಯಾಗಿ ಬಡಿದಾಟ ಶುರು ಮಾಡಿಬಿಟ್ಟವು.

ಓಡ್ರೋ, ಓಡ್ರೋ, ಓಡ್ರೋ ಇದು...
ಇರಾನ್ ಒಂದು ಕಡೆ ಇಸ್ರೇಲ್ ವಿರುದ್ಧ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದ್ದರೆ, ಅತ್ತ ಇಸ್ರೇಲ್ ಕೂಡ ಭಾರಿ ದೊಡ್ಡ ಮಟ್ಟದಲ್ಲೇ ಕೌಂಟರ್ ಅಟ್ಯಾಕ್ ಮಾಡುತ್ತಿದೆ. ಹೀಗಾಗಿಯೇ ಇರಾನ್ ಪ್ರಜೆಗಳು ಕೂಡ ಗಂಟು & ಮೂಟೆ ಕಟ್ಟಿಕೊಂಡು ಎಸ್ಕೇಪ್ ಆಗುತ್ತಿದ್ದಾರೆ. ಅಲ್ಲದೆ ಅಮೆರಿಕ ಕೂಡ ಈಗಾಗಲೇ ಇರಾನ್ ಪ್ರಜೆಗಳಿಗೆ ಜಾಗ ಖಾಲಿ ಮಾಡುವಂತೆ ಹೇಳಿದೆ. ಇದೇ ಹಿನ್ನೆಲೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಇರಾನ್ ರಸ್ತೆಗಳಲ್ಲಿ ಭಾರಿ ದೊಡ್ಡ ಟ್ರಾಫಿಕ್ ಕೂಡ ಉಂಟಾಗಿದೆ.












Click it and Unblock the Notifications