Iran Ceasefire: 2 ವಾರಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ ಇರಾನ್; ಶಾಶ್ವತ ಕದನ ವಿರಾಮದ ಬಗ್ಗೆ ಹೇಳಿದ್ದೇನು
Iran Ceasefire: ಮಧ್ಯಪ್ರಾಚ್ಯದ ಇರಾನ್‌ನ ಮೇಲೆ ಅಮೆರಿಕ ವಿಷಕಾರಿ ಬಾಂಬ್ ದಾಳಿ (ನ್ಯೂಕ್ಲಿಯರ್ ಮಾದರಿ) ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಈ ಬಾಂಬ್ ದಾಳಿಯನ್ನು ಮಂಗಳವಾರ ರಾತ್ರಿ 8ಕ್ಕೆ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 5.30)ಕ್ಕೆ ನಡೆಸುವುದಾಗಿ ಗಡುವು ನಿಗದಿ ಮಾಡಲಾಗಿತ್ತು. ಇದೀಗ ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ಭಾರೀ ಬಾಂಬ್ ದಾಳಿ ಮಾಡುವ ಪ್ರಸ್ತಾವನೆಯನ್ನು ಹಿಂಪಡೆದಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಇರಾನ್ ಸಹ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆಸಿದ ಮಾತುಕತೆ ಫಲಪ್ರದವಾಗಿರುವುದರಿಂದ ಎರಡು ವಾರಗಳ ಕದನ ವಿರಾಮ ಒಪ್ಪಂದಕ್ಕೆ ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ಈ ಸಂಬಂಧ Aljazeera ವರದಿ ಮಾಡಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ಎರಡು ವಾರಗಳ ಕಾಲ ಕದನ ವಿರಾಮ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಎಲ್ಲ ಪ್ರಮುಖ ಮಾತುಕತೆ ಮುಗಿಯಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಇದೀಗ ಇರಾನ್ ಸಹ ಪ್ರತಿಕ್ರಿಯೆ ನೀಡಿರುವುದು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದೆ ಎನ್ನುವ ವಿಚಾರ ದೃಢಪಟ್ಟಿದೆ. ಇನ್ನು ಮೆಹರ್ ಸುದ್ದಿ ಸಂಸ್ಥೆ ಪ್ರಕಟಿಸಿರುವ ಹೇಳಿಕೆಯ ಪ್ರಕಾರ, ಇರಾನ್ ದೇಶದ ನೂತನ ಸುಪ್ರೀಂ ನಾಯಕ ಆಯತೊಲ್ಲಾ ಮೊಜ್ತಬಾ ಖಾಮಿನೈ ಅವರ ಅನುಮೋದನೆಯೊಂದಿಗೆ ಈ ಒಪ್ಪಂದ ಅಂತಿಮಗೊಂಡಿದೆ ಎನ್ನಲಾಗಿದೆ.
Iran Ceasefire: ನಮಗೆ ಸಿಕ್ಕ ದೊಡ್ಡ ಗೆಲುವು
ಇನ್ನು ಎರಡು ವಾರಗಳ ಕದನ ವಿರಾಮವು ನಮಗೆ ಈ ಯುದ್ಧದಲ್ಲಿ ಸಿಕ್ಕ ದೊಡ್ದ ಗೆಲುವು ಎಂದು ಇರಾನ್ ಹೇಳಿದೆ. ಈ ಕದನ ವಿರಾಮ ಇರಾನ್‌ಗೆ ಸಿಕ್ಕ ಗೆಲುವು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಅಲ್ಲದೆ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯಲ್ಲಿ ಇದು ಮಹತ್ವದ ಬೆಳವಣಿಗೆ ಎಂದು ಮಂಡಳಿ ಉಲ್ಲೇಖಿಸಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಕದನ ವಿರಾಮ ಒಪ್ಪಂದ ಸಾಧಿಸಲು ಮಾತುಕತೆಗಳನ್ನು ಮುಂದುವರಿಸಲಾಗುವುದು ಇರಾನ್ ಹೇಳಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನದಲ್ಲಿ ಮಾತುಕತೆ ನಡೆಯಲಿದೆ ಎಂದ ಇರಾನ್
ಇನ್ನು ಇರಾನ್ - ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧದ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಮಾತುಕತೆ ನಡೆಯಲಿದೆ ಎಂದು ಇರಾನ್ ಹೇಳಿದೆ. ಘೋಷಿತ ಷರತ್ತುಬದ್ಧ ಕದನ ವಿರಾಮದ ನಂತರ ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ (SNSC) ಹೇಳಿಕೆಯಲ್ಲಿ ತಾರ್ಕಿಕ ಕದನ ವಿರಾಮ ಅಥವಾ ಈ ವಿಷಯವನ್ನು ಅಂತಿಮಗೊಳಿಸಲು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಗರಿಷ್ಠ 15 ದಿನಗಳ ಅವಧಿಯಲ್ಲಿ ಮಾತುಕತೆ ನಡೆಯಲಿದೆ ಎಂದು ತಿಳಿಸಿದೆ. ಇರಾನ್‌ನ ವಿಜಯವನ್ನು ರಾಜಕೀಯ ಮಾತುಕತೆಗಳಲ್ಲಿಯೂ ಕ್ರೋಢೀಕರಿಸಲು ಮಾತುಕತೆ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ತಕ್ಷಣದ ಪರಿಣಾಮಕಾರಿ ಎಂದು ಪಾಕಿಸ್ತಾನ ಹೇಳಿದೆ
ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಕದನ ವಿರಾಮ ತಕ್ಷಣವೇ ಜಾರಿಗೆ ಬರುತ್ತಿದೆ ಎಂದು ಹೇಳಿದ್ದಾರೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಅವರ ಮಿತ್ರರಾಷ್ಟ್ರಗಳೊಂದಿಗೆ, ಲೆಬನಾನ್ ಮತ್ತು ಇತರೆಡೆ ಸೇರಿದಂತೆ ಎಲ್ಲೆಡೆ, ಪರಿಣಾಮಕಾರಿಯಾಗಿ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅತ್ಯಂತ ನಮ್ರತೆಯಿಂದ ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಪಾಕ್ ಹೇಳಿದೆ. ಈ ಕ್ರಮವನ್ನು ಸ್ವಾಗತಿಸಿದ್ದು ಏಪ್ರಿಲ್ 10ರ ಶುಕ್ರವಾರದಂದು ಎಲ್ಲಾ ವಿವಾದಗಳನ್ನು ಇತ್ಯರ್ಥಗೊಳಿಸಲು ನಿರ್ಣಾಯಕ ಒಪ್ಪಂದಕ್ಕಾಗಿ ಮತ್ತಷ್ಟು ಮಾತುಕತೆ ನಡೆಸಲು ನಿಯೋಗಗಳನ್ನು ಇಸ್ಲಾಮಾಬಾದ್‌ಗೆ ಆಹ್ವಾನಿಸಿದೆ ಎಂದೂ ಇರಾನ್ ಹೇಳಿರುವುದು ವರದಿಯಾಗಿದೆ.












Click it and Unblock the Notifications