189 ಪ್ರಯಾಣಿಕರಿದ್ದ ಇಂಡೋನೇಷ್ಯಾದ ಲಯನ್ ಏರ್ ವಿಮಾನ ಪತನ
Recommended Video

Indonesia Lion Air Plane Crash : 189 ಪ್ರಯಾಣಿಕರಿದ್ದ ವಿಮಾನ ಸಮುದ್ರದಲ್ಲಿ ಪತನ | Oneindia Kannada
ಜಕಾರ್ತಾ, ಅಕ್ಟೋಬರ್ 29: 189 ಪ್ರಯಾಣಿಕರನ್ನು ಹೊತ್ತಿದ್ದ ಇಂಡೋನೇಷ್ಯಾದ ಲಯನ್ ಏರ್ ಬೋಯಿಂಗ್ 737 ವಿಮಾನ ಪತನವಾಗಿದೆ.
ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಿಂದ ಟೇಕಾಫ್ ಆಗಿದ್ದ ವಿಮಾನ ನಂತರ ಸಮುದ್ರದ ಬಳಿ ಪತನವಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಟೇಕಾಫ್ ಆದ 13 ನಿಮಿಷಗಳ ನಂತರ ನಾಪತ್ತೆಯಾದ ವಿಮಾನ ಸಮುದ್ರದಲ್ಲಿ ಪತನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಮಾನವು ಜಕಾರ್ತಾದಿಂದ ಪ್ಯಾಂಗ್ಕಲ್ ಪಿನಾಗ್ ಎಂಬ ಇಂಡೋನೇಷ್ಯಾದ ದ್ವೀಪವೊಂದಕ್ಕೆ ತೆರಳುತ್ತಿತ್ತು.
ಸ್ಥಳೀಯ ಕಾಲಮಾನ ಬೆಳಿಗ್ಗೆ 6:20 ಕ್ಕೆ ಟೇಕಾಫ್ ಆದ ವಿಮಾನ 6:33 ರ ಸಮಯಕ್ಕೆ ಸಂಪರ್ಕ ಕಳೆದುಕೊಂಡಿತ್ತು. ವಿಮಾನದಲ್ಲಿದ್ದ 189 ಪ್ರಯಾಣಿಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕೆಲವು ಮಾಹಿತಿಯ ಪ್ರಕಾರ ಸಮುದ್ರದಲ್ಲಿ ವಿಮಾನದ ಬಿಡಿಭಾಗಗಳು ತೇಲುತ್ತಿದ್ದು, ಹಲವು ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.












Click it and Unblock the Notifications