ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷಿಯಾ: ಫುಟ್‌ಬಾಲ್ ಪಂದ್ಯದ ಬಳಿಕ ಫ್ಯಾನ್ಸ್ ಕಿತ್ತಾಟ, 129 ಮಂದಿ ಸಾವು

|
Google Oneindia Kannada News

ಜಕಾರ್ತ, ಅ.2: ಇಂಡೋನೇಷಿಯನ್ ಲೀಗ್ ಫುಟ್ಬಾಲ್ ಪಂದ್ಯದ ಬಳಿಕ ಅಭಿಮಾನಿಗಳ ನಡುವೆ ನಡೆದ ಕಿತ್ತಾಟ, ಬಡಿದಾಟ, ಕಾಲ್ತುಳಿತದ ಪರಿಣಾಮ ಸುಮಾರು 129ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 180ಕ್ಕೂ ಅಧಿಕ ಮಂದಿಗೆ ತೀವ್ರಗಾಯಗಳಗಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಜಾವ ಮೂಲದ ಕ್ಲಬ್ ಅರೆಮಾ ಹಾಗೂ ಪರ್ಸೆಬಾಯ ಸುರಾಬಾಯ ಕ್ಲಬ್ ನಡುವಿನ ಪಂದ್ಯದ ಫಲಿತಾಂಶವೆ ಉಭಯ ತಂಡಗಳ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಪೂರ್ವ ಜಾವದ ಮಲಾಂಗ್ ಪ್ರಾಂತ್ಯದ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸುರಾಬಾಯ ಕ್ಲಬ್ ವಿರುದ್ಧ ಅರೆಮಾ ತಂಡ 3-2ರಲ್ಲಿ ಸೋಲು ಕಂಡಿತ್ತು.

Indonesia football violence: Over 129 people killed after stampede at match

ಸೋಲನ್ನು ಸಹಿಸಿಕೊಳ್ಳದ ಅರೆಮಾ ತಂಡದ ಪರ ಅಭಿಮಾನಿಗಳು ಮೈದಾನದಲ್ಲಿ ರಂಪಾಟ ಆರಂಭಿಸಿದರು ನಂತರ ಫ್ಯಾನ್ಸ್ ನಡುವಿನ ಕಿತ್ತಾಟ ವಿಕೋಪಕ್ಕೆ ತಿರುಗಿದ ಪರಿಣಾಮ ಹಲವರ ಸಾವಿಗೆ ಕಾರಣವಾಯಿತು ಎಂದು ತಿಳಿದು ಬಂದಿದೆ.

ಕಂಜುರುಹಾನ್ ಮೈದಾನದಲ್ಲಿ ನಡೆದ ಗಲಭೆ, ಕಿತ್ತಾಟ ಹತ್ತಿಕ್ಕಲು ಪೊಲೀಸರು ತಕ್ಷಣವೇ ಅಶ್ರುವಾಯು ಪ್ರಯೋಗಿಸಿದರೂ ಪ್ರಯೋಜನವಾಗಿಲ್ಲ. ಕೆಲವರು ಕಿತ್ತಾಟದಲ್ಲಿ ತೊಡಗಿದ್ದರೆ, ಇನ್ನು ಕೆಲವರು ಮೈದಾನದಿಂದ ಹೊರಕ್ಕೆ ಹೋಗಲು ಯತ್ನಿಸಿ ವಿಫಲರಾಗಿ ಕಾಲ್ತುಳಿತಕ್ಕೆ ಒಳಗಾದರು ಎಂದು ಪೊಲೀಸರು ಹೇಳಿದ್ದಾರೆ.

ಪೂರ್ವ ಜಾವಾದ ಪೊಲೀಸ್ ಮುಖ್ಯಸ್ಥ ನಿಕೋ ಅಫಿಂಟಾ ಮಾತನಾಡಿ, ಸೋತ ತಂಡದ ಪರ ಅಭಿಮಾನಿಗಳು ಮೈದಾನದೊಳಗೆ ಇಳಿದು ಗಲಾಟೆ ಮಾಡಲು ಆರಂಭಿಸಿದರು, ಪೊಲೀಸರು ಅಶ್ರುವಾಯು ಪ್ರಯೋಗಿಸಿದರು, ಅಭಿಮಾನಿಗಳ ಪರಸ್ಪರ ಕಿತ್ತಾಟ, ಕಾಲ್ತುಳಿತದ ಕಾರಣ ಮೈದಾನದಲ್ಲೇ 34 ಮಂದಿ ಮೃತ ಪಟ್ಟರೆ, ಮಿಕ್ಕವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ, ಸುಮಾರು 180 ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡಾ ಇದ್ದಾರೆ ಎಂದರು.

English summary
At least 129 people died and 180 were injured after violence and a stampede erupted following an Indonesian league football match, police have said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X