• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೂತನ ಸರ್ಕಾರ ರಚನೆ ಸಿದ್ಧತೆ ಬೆನ್ನಲ್ಲೇ ತಾಲಿಬಾನ್‌ಗೆ ಭಾರತದ ಸಂದೇಶ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 2: ಅಫ್ಘಾನಿಸ್ತಾನದಲ್ಲಿ ಅಧೀಕೃತವಾಗಿ ಸರ್ಕಾರ ರೂಪಿಸಲು ತಾಲಿಬಾನ್ ಭರ್ಜರಿ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಭಾರತ ತಾಲಿಬಾನ್‌ಗೆ ಸಂದೇಶ ನೀಡಿದೆ.

'ಅಫ್ಘಾನಿಸ್ತಾನವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿಯೂ ಬಳಸಿಕೊಳ್ಳಬಾರದು' ಎಂಬ ಮಾತನ್ನು ಪುನರುಚ್ಚರಿಸಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ, ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ವಿವರಗಳು ಭಾರತಕ್ಕೆ ತಿಳಿದಿಲ್ಲ ಎಂದಿದ್ದಾರೆ. 'ಅಫ್ಘಾನಿಸ್ತಾನದಲ್ಲಿ ಯಾವ ರೀತಿ ಸರ್ಕಾರ ರಚನೆಯಾಗುತ್ತದೆ ಎಂಬ ಕುರಿತು ನಮಗೆ ಯಾವುದೇ ವಿವರ ತಿಳಿದಿಲ್ಲ. ಅದನ್ನು ಊಹಿಸಲು ಆಗುವುದಿಲ್ಲ' ಎಂದು ಹೇಳಿದ್ದಾರೆ.

ತಾಲಿಬಾನ್ ಜೊತೆಗಿನ ಮುಂದಿನ ಸಭೆಗಳಲ್ಲಿ ಭಾರತದ ನಿರ್ಧಾರ, ನಡೆಗಳ ಕುರಿತು ಪ್ರಶ್ನಿಸಿದಾಗ, 'ಇದು ಹೌದು ಅಥವಾ ಇಲ್ಲ ಎಂಬುದರ ವಿಷಯವಲ್ಲ. ನಮ್ಮ ಗುರಿ ಏನಿದ್ದರೂ ಅಫ್ಘಾನಿಸ್ತಾನದ ಭೂಮಿಯನ್ನು ಯಾವುದೇ ರೀತಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬಾರದು ಎಂಬುದು' ಎಂದಿದ್ದಾರೆ.

ತಾಲಿಬಾನ್ ಜೊತೆ ಭಾರತದ ಮೊದಲ ಮಾತುಕತೆ
ಮಂಗಳವಾರ ಭಾರತದ ರಾಯಭಾರಿ ದೀಪಕ್ ಮಿತ್ತಲ್ ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿ ಮುಖ್ಯಸ್ಥ ಶೇರ್ ಮೊಹಮದ್ ಅಬ್ಬಾಸ್ ಸ್ಟಾನೆಕ್‌ಜಾಯ್ ಭೇಟಿ ಮಾಡುವ ಮೂಲಕ ತಾಲಿಬಾನ್‌ನೊಂದಿಗೆ ಔಪಚಾರಿಕ ಮಾತುಕತೆ ನಡೆಸಿದ್ದಾರೆ. ತಾಲಿಬಾನ್ ಕೋರಿಕೆ ಮೇರೆಗೆ ದೋಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ತಾಲಿಬಾನ್ ಉಗ್ರ ಸಂಘಟನೆ ಅಫ್ಘಾನಿಸ್ತಾನ ವಶಪಡಿಸಿಕೊಂಡ ಬಳಿಕ ನಡೆದ ಮೊದಲ ಔಪಚಾರಿಕ ಮಾತುಕತೆ ಇದಾಗಿದೆ.

ಒಂದೆರಡು ದಿನದಲ್ಲಿ ಅಫ್ಘಾನ್‌ನಲ್ಲಿ ತಾಲಿಬಾನ್ ಸರ್ಕಾರ ರಚನೆಒಂದೆರಡು ದಿನದಲ್ಲಿ ಅಫ್ಘಾನ್‌ನಲ್ಲಿ ತಾಲಿಬಾನ್ ಸರ್ಕಾರ ರಚನೆ

ಸೌಹಾರ್ದಯುತ ಸಂಬಂಧದ ಭರವಸೆ ಕೊಟ್ಟ ತಾಲಿಬಾನ್: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಕುರಿತು ಚರ್ಚೆಗಳು ಕೇಂದ್ರೀಕೃತವಾಗಿದ್ದವು. ತಾಲಿಬಾನ್ ಜೊತೆ ಮಾತುಕತೆ ನಂತರ ಹೇಳಿಕೆ ಬಿಡುಗಡೆ ಮಾಡಿದ್ದ ವಿದೇಶಾಂಗ ವ್ಯವಹಾರ ಸಚಿವಾಲಯ, 'ಅಫ್ಘಾನಿಸ್ತಾನದ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಹಾಗೂ ಭಯೋತ್ಪಾದನೆಗೆ ಯಾವುದೇ ರೀತಿಯಲ್ಲಿಯೂ ಬಳಸಬಾರದು ಎಂಬ ಕುರಿತು ಭಾರತ ಕಾಳಜಿ ಹೊಂದಿದೆ' ಎಂದು ತಿಳಿಸಿತ್ತು.

ಭಾರತದ ರಾಯಭಾರಿ ದೀಪಕ್ ಮಿತ್ತಲ್ ವ್ಯಕ್ತಪಡಿಸಿದ ಹಲವು ಕಾಳಜಿಗಳಿಗೆ ಸ್ಪಂದಿಸುವುದಾಗಿ ತಾಲಿಬಾನ್ ಹೇಳಿತ್ತು. ಭಾರತದ ಸೂಚನೆಗಳನ್ನು ಸೂಕ್ತವಾಗಿ ಪರಿಹರಿಸುವುದಾಗಿ ತಾಲಿಬಾನ್‌ ಪ್ರತಿನಿಧಿಗಳು ಭರವಸೆ ನೀಡಿದ್ದರು. ಭಾರತದ ಜೊತೆ ಸೌಹಾರ್ದಯುತ ವಾತಾವರಣ ನಿರ್ಮಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು.

Indias Message To Taliban As It Prepared To Unveil Government

ಅಮೆರಿಕ ಪಡೆ ಕಾಬೂಲ್ ತೊರೆಯುತ್ತಿದ್ದಂತೆ ತಾಲಿಬಾನ್ ಸಂಭ್ರಮಾಚರಣೆ
ಅಮೆರಿಕ ಸೇನಾ ಪಡೆಗಳು ಸೋಮವಾರ ರಾತ್ರಿ ಕಾಬೂಲ್‌ ತೊರೆಯುತ್ತಿದ್ದಂತೆಯೇ, ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ. ಇದು ಅಫ್ಘಾನಿಸ್ತಾನದ ಸ್ವಾತಂತ್ರ್ಯ ಎಂದು ಸಂಭ್ರಮಾಚರಣೆ ಮಾಡಿದೆ.

ಅಮೆರಿಕದ ಕೊನೆಯ ಸೇನಾ ವಿಮಾನ ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಡುವ ಸ್ವಲ್ಪ ಸಮಯಕ್ಕೂ ಮೊದಲು ಮಾತನಾಡಿದ್ದ ಹಕ್ಕಾನಿ, ತಾಲಿಬಾನ್ ಹೊಸ ಸಚಿವ ಸಂಪುಟ ಮುಂದಿನ ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ ಎಂದು ಹೇಳಿದ್ದರು.

ತಾಲಿಬಾನಿಗಳು ಉಗ್ರರು ಎಂದಮೇಲೆ ಯಾಕೆ ಮಾತನಾಡಬೇಕು: ಒಮರ್ ಅಬ್ದುಲ್ಲಾತಾಲಿಬಾನಿಗಳು ಉಗ್ರರು ಎಂದಮೇಲೆ ಯಾಕೆ ಮಾತನಾಡಬೇಕು: ಒಮರ್ ಅಬ್ದುಲ್ಲಾ

ತಾಲಿಬಾನ್ ಹೊಸ ಸರ್ಕಾರ ರಚನೆ ಕಸರತ್ತು: ಇದೀಗ ಹೊಸ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿದೆ. ತಾಲಿಬಾನ್ 2.0 ಸರ್ಕಾರದ ಔಪಚಾರಿಕ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ಶೀಘ್ರವೇ ಹೊಸ ಸಚಿವ ಸಂಪುಟ ಘೋಷಣೆಯಾಗುವ ನಿರೀಕ್ಷೆಯಿದೆ.

ಅಫ್ಘಾನಿಸ್ತಾನದಲ್ಲಿ ವಿನೂತನ ಮಾದರಿಯ ಸರ್ಕಾರ ರಚಿಸುತ್ತೇವೆಂದು ತಾಲಿಬಾನ್ ಹೇಳಿಕೊಂಡಿದೆ. ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ಮಹಿಳೆಯರಿಗೆ 'ಇಸ್ಲಾಮಿಕ್ ಕಾನೂನಿನೊಳಗೆ' ಸ್ವಾತಂತ್ರ್ಯ ನೀಡುವ ಸರ್ಕಾರ ರಚಿಸಲು ಉದ್ದೇಶಿಸಲಾಗಿದೆ ಎಂದು ತಾಲಿಬಾನ್ ನಾಯಕರು ಹೇಳಿದ್ದಾರೆ. ಇದೀಗ ಸರ್ಕಾರ ರಚನೆ ಹಾಗೂ ಕಾರ್ಯತಂತ್ರಗಳ ಕುರಿತು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

English summary
Afghanistan's land shouldn't be used to export terror activity of any kind: India’s message to Taliban
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X