ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನದಲ್ಲಿ: ಕಾರಣ ತಿಳಿಯಿರಿ...
ಭಾರತ ಮತ್ತು ಪಾಕಿಸ್ತಾನ ಬದ್ಧ ವೈರಿಗಳು, ಯಾಕಂದ್ರೆ ಕುತಂತ್ರಿ ಪಾಪಿ ಪಾಕಿಸ್ತಾನದ ಬುದ್ಧಿ ಸ್ವತಃ ಅಲ್ಲಿನ ಜನರಿಗೂ ಗೊತ್ತಿದೆ. ಪಾಕಿಸ್ತಾನದ ಪ್ರಜೆಗಳು ಕೂಡ ತಮ್ಮ ದೇಶದ ರಾಜಕೀಯ ವ್ಯವಸ್ಥೆ ಮತ್ತು ಸೇನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಸದಾ ಯಾವುದಾದರೂ ಹಿಂಸೆಯ ಕೂಪದಲ್ಲಿ ಬೆಂದು ಹೋಗುತ್ತಿರುವ ಪಾಕಿಸ್ತಾನದ ಸ್ಥಿತಿ ಇತ್ತೀಚೆಗೆ ಮತ್ತಷ್ಟು ಹೀನಾಯವಾಗಿದೆ. ಹೀಗಿದ್ದಾಗಲೇ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಯಾಕೆ ಗೊತ್ತಾ?
ಪಾಕಿಸ್ತಾನ ಸದಾ ಉಗ್ರರಿಗೆ ಬೆಂಬಲ ನೀಡುತ್ತಾ, ತನ್ನ ದೇಶವನ್ನು ತಾನೇ ನರಕ ಮಾಡಿದೆ. 20 ವರ್ಷದಿಂದ ಪಾಕಿಸ್ತಾನ ಕೈಯಲ್ಲಿ ಹಣ ಇಲ್ಲದೆ ನಲುಗಿ ಹೋಗಿದೆ. ಆದ್ರೆ ತನ್ನ ಪರಿಸ್ಥಿತಿ ಸರಿ ಮಾಡಿಕೊಳ್ಳುವ ಬದಲು, ಸದಾ ಭಾರತದ ವಿರುದ್ಧ ಕುತಂತ್ರ ಮಾಡುತ್ತಾ ಪಾಕಿಸ್ತಾನ ತನ್ನನ್ನೇ ತಾನು ನಾಶ ಮಾಡಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಅನಿವಾರ್ಯವಾಗಿ ಕಂಡ ಕಂಡಲ್ಲಿ ಸಾಲ ಮಾಡುತ್ತಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವ ಸಮಯದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಪಾಕಿಸ್ತಾನ ಭೇಟಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.

ಎಸ್. ಜೈಶಂಕರ್ ಪಾಕಿಸ್ತಾನಕ್ಕೆ ಹೋಗಿದ್ದು ಏಕೆ?
ಅಷ್ಟಕ್ಕೂ ಇದೀಗ ಎಸ್. ಜೈಶಂಕರ್ ಅವರು ಪಾಕಿಸ್ತಾನಕ್ಕೆ ಹೋಗಿದ್ದು ಬೇರೆ ಯಾವುದೋ ಕಾರಣಕ್ಕೆ ಅಲ್ಲ. ಬದಲಾಗಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ ಸಭೆ ಅಂದ್ರೆ, ಎಸ್‌ಸಿಒ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ಈಗ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇದೀಗ ಪಾಕಿಸ್ತಾನ ಭೇಟಿ ಕೈಗೊಂಡು ಗಮನ ಸೆಳೆದಿದ್ದಾರೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರದಲ್ಲಿ ಶಾಂಘೈ ಸಹಕಾರ ಸಂಘಟನೆಯ ಮಹತ್ವದ ಸಭೆ ನಡೆಯುತ್ತಿದೆ.
9 ವರ್ಷಗಳ ಬಳಿಕ ಜೈಶಂಕರ್ ದಾಖಲೆ!
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇದೀಗ, ಪಾಕಿಸ್ತಾನ ಭೇಟಿ ಕೈಗೊಂಡು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕಾಶ್ಮೀರ ಸಮಸ್ಯೆ & ಪಾಕಿಸ್ತಾನವು ಪದೇ ಪದೇ ಉಗ್ರರಿಗೆ ಬೆಂಬಲ ನೀಡುವುದು ಸೇರಿದಂತೆ ಹಲವು ಸಮಸ್ಯೆಗಳ ಕಾರಣ ಎರಡೂ ದೇಶಗಳು ಪರಸ್ಪರ ಆರೋಪ & ಪ್ರತ್ಯಾರೋಪ ಮಾಡುತ್ತಿವೆ.
ಹೀಗಿದ್ದಾಗಲೇ 2015ರಲ್ಲಿ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರಕ್ಕೆ ಭೇಟಿ ನೀಡಿದ್ದರು. ಆ ನಂತರ ಸುಮಾರು 9 ವರ್ಷ ಕಾಲ, ಯಾವುದೇ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ. ಇದೀಗ 9 ವರ್ಷಗಳ ಬಳಿಕ ಎಸ್. ಜೈಶಂಕರ್ ಅವರು ಭಾರತದ ಪ್ರತಿನಿಧಿಯಾಗಿ ಭೇಟಿ ನೀಡಿರುವುದು ಜಗತ್ತಿನ ಗಮನ ಸೆಳೆದಿದೆ. ಅದರಲ್ಲೂ ಪಾಶ್ಚಿಮಾತ್ಯ ದೇಶಗಳು ಈ ಸಭೆ ಮೇಲೆ ಕಣ್ಣಿಟ್ಟು ಕೂತಿವೆ. ಇದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗುವ ಲಕ್ಷಣ ಕಾಣ್ತಿದೆ.












Click it and Unblock the Notifications