ಡೊನಾಲ್ಡ್ ಟ್ರಂಪ್ ವಿರುದ್ಧವೇ ತಿರುಗಿಬಿದ್ದ ಭಾರತೀಯರು, ಕಾರಣ ತಿಳಿಯಿರಿ... Harvard University
ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳು ಇದೀಗ, ಭಾರತೀಯರ ಮೇಲೆ ದೊಡ್ಡ ಪರಿಣಾಮ ಬೀರುತ್ತಿವೆ. ನಾನು ಭಾರತದ ಗೆಳೆಯ ಅಂತಾ ಹೇಳಿಕೊಂಡೇ ಅಮೆರಿಕ ಎಲೆಕ್ಷನ್ ಗೆದ್ದ ಡೊನಾಲ್ಡ್ ಟ್ರಂಪ್ ಇದೀಗ ಭಾರತದ ವಿರೋಧಿ ರೀತಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗ ಮತ್ತೊಂದು ಫಿಟ್ಟಿಂಗ್ ಇಟ್ಟಿರುವ ಡೊನಾಲ್ಡ್ ಟ್ರಂಪ್ ಭಾರತೀಯ ವಿದ್ಯಾರ್ಥಿಗಳಿಗೆ ಆಘಾತ ನೀಡಿದ್ದು, ಈ ಬಗ್ಗೆ ಭಾರತೀಯರು ಏನು ಹೇಳುತ್ತಿದ್ದಾರೆ ಗೊತ್ತಾ?
ಭಾರತದ ಸಹಾಯ ಇಲ್ಲದೆ ಅಮೆರಿಕ ಬದುಕಲು ಕೂಡ ಆಗುವುದಿಲ್ಲ, ಯಾಕಂದ್ರೆ ಭಾರತದ ಮೂಲಕ ಅಮೆರಿಕ ಲೆಕ್ಕವಿಲ್ಲದಷ್ಟು ಸಹಾಯ ಪಡೆಯುತ್ತಿದೆ. ಆದರೆ ಮತ್ತೆ ಮತ್ತೆ ಭಾರತ & ಭಾರತೀಯರ ಬೆನ್ನಿಗೆ ಚೂರಿ ಹಾಕುತ್ತಿದೆ ಅಮೆರಿಕ ಎಂಬ ಆರೋಪ ಇದೆ. ಅದರಲ್ಲೂ ಈ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳು ಬೆಂಕಿಯ ಕಿಡಿ ಹೊತ್ತಿಸಿ, ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಎಬ್ಬಿಸಿವೆ. ಅಮೆರಿಕಗೆ ಹೋಗಿ ಓದಬೇಕು ಎನ್ನುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಭವಿಷ್ಯವನ್ನೇ ಡೊನಾಲ್ಡ್ ಟ್ರಂಪ್ ಕಸಿದುಕೊಂಡರಾ? ಹಾಗಾದ್ರೆ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಎಡವಟ್ಟುಗಳ ಬಗ್ಗೆ ಭಾರತೀಯರು ಏನು ಹೇಳುತ್ತಿದ್ದಾರೆ?

ಟ್ರಂಪ್ ಎಡವಟ್ಟು, ಭಾರತೀಯರ ಆಕ್ರೋಶ!
ಹೌದು, ಭಾರತವೂ ಸೇರಿದಂತೆ ಲಕ್ಷಾಂತರ ಜನರು ಅಮೆರಿಕಗೆ ಹೋಗಿ ನೆಲೆಸುತ್ತಿದ್ದಾರೆ. ಈ ಮೂಲಕ ಜಗತ್ತಿನ ದೊಡ್ಡಣ್ಣ ಅಮೆರಿಕದ ಅಭಿವೃದ್ಧಿಗೆ ಭಾರತೀಯರ ಕೊಡುಗೆ ಕೂಡ ಭಾರಿ ದೊಡ್ಡದಾಗಿದೆ. ಇಷ್ಟೆಲ್ಲಾ ಇದ್ದರೂ ಡೊನಾಲ್ಡ್ ಟ್ರಂಪ್ ಮಾತ್ರ ಭಾರತದ ಬಗ್ಗೆ & ಭಾರತ ಮೂಲದ ವಿದ್ಯಾರ್ಥಿಗಳ ವಿರುದ್ಧ ನಿಲುವು ಕೈಗೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಮುಖವಾಗಿ ಹಾರ್ವರ್ಡ್ ವಿಶ್ವವಿದ್ಯಾಲಯ ವಿಚಾರ ಇದೀಗ ದೊಡ್ಡ ಬೆಂಕಿಯ ಕಿಡಿಯನ್ನೇ ಹೊತ್ತಿಸಿದೆ.
ಡೊನಾಲ್ಡ್ ಟ್ರಂಪ್ ಆಟ ಅತೀ ಆಯ್ತು?
ಅಮೆರಿಕದಲ್ಲಿ ಲಕ್ಷಾಂತರ ವಿದೇಶಿ ವಿದ್ಯಾರ್ಥಿಗಳು ಓದುತ್ತಾ, ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಆದರೂ ಇದೀಗ ಹೊಸ ನಿಯಮವನ್ನು ಹೇರಿಕೆ ಮಾಡಿರುವ ಡೊನಾಲ್ಡ್ ಟ್ರಂಪ್ ಸರ್ಕಾರ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಬ್ರೇಕ್ ಹಾಕಿ ಆಘಾತದ ಬಿರುಗಾಳಿ ನೀಡಿದೆ. ಇದರ ಜೊತೆಗೆ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಒದುತ್ತಾ ಇರುವ ವಿದೇಶಿ ಅಂದ್ರೆ ಭಾರತವೂ ಸೇರಿ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ಬೇರೆ ಕಾಲೇಜುಗಳು ಅಥವಾ ಶಾಲೆಗಳಿಗೆ ವರ್ಗಾವಣೆ ಆಗಬೇಕೆಂಬ ನಿಯಮ ಹೇರಲಾಗಿದ. ಅಕಸ್ಮಾತ್ ಈ ನಿಯಮ ಮೀರಿದರೆ ದೊಡ್ಡ ಸಮಸ್ಯೆ ಕೂಡ ಎದುರಾಗಲಿದೆಯಂತೆ. ಈ ಬಗ್ಗೆ ಇದೀಗ ಭಾರತೀಯರು ಭಾರಿ ಆಕ್ರೋಶ ಹೊರ ಹಾಕಿದ್ದು, ಡೊನಾಲ್ಡ್ ಟ್ರಂಪ್ ಆಟ ಅತೀ ಆಯ್ತು ಅಂತಿದ್ದಾರೆ!












Click it and Unblock the Notifications