ಪೂರ್ವಜರ ಭೇಟಿಗಾಗಿ 75 ವರ್ಷದ ಬಳಿಕ ಪಾಕ್‌ಗೆ ಭಾರತೀಯ ಮಹಿಳೆ ಭೇಟಿ!
ಇಸ್ಲಾಮಾಬಾದ್, ಜುಲೈ 17; ಪೂರ್ವಜರ ಮನೆಗೆ ಭೇಟಿ ನೀಡಲು ಭಾರತದ ಮಹಿಳೆಯೊಬ್ಬರು 75 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಪಾಕಿಸ್ತಾನ ಮಹಿಳೆಗೆ ಮೂರು ತಿಂಗಳ ಪ್ರವಾಸಿ ವೀಸಾ ನೀಡಿದೆ.
92 ವರ್ಷದ ರೀನಾ ಚಬ್ಬೀರ್ ಶನಿವಾರ ಪಾಕಿಸ್ತಾನ ತಲುಪಿದ್ದಾರೆ. ವಾಘಾ-ಅತ್ತರಿ ಗಡಿಯಲ್ಲಿ ಮಹಿಳೆಗೆ ಭವ್ಯ ಸ್ವಾಗತ ದೊರೆಯಿತು. ರಾವಲ್ಪಿಂಡಿಯ ಪ್ರೇಮ್ ನಿವಾಸ್ ಪ್ರದೇಶದಲ್ಲಿ ಮಹಿಳೆಯ ಪೂರ್ವಜರ ಮನೆ ಇದೆ.
ಭಾರತ ಮತ್ತು ಪಾಕಿಸ್ತಾನ ದೇಶಗಳಿಗೆ ವೀಸಾ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ. ಜನರು ಸುಲಭವಾಗಿ ದೇಶಗಳಿಗೆ ಭೇಟಿ ನೀಡುವಂತೆ ಮಾಡಲು ಕ್ರಮ ಕೈಗೊಳ್ಳಿ ಎಂದು ಮಹಿಳೆ ಮನವಿ ಮಾಡಿದ್ದಾಳೆ.
ರಾವಲ್ಪಿಂಡಿಯಲ್ಲಿರುವ ತಮ್ಮ ಮನೆಗೆ ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯದ ಜನರು ಆಗಮಿಸುತ್ತಿದ್ದರು. ನನಗೆ, ನನ್ನ ಅಣ್ಣನಿಗೆ ಸಹ ವಿವಿಧ ಸಮುದಾಯದ ಗೆಳೆಯರು ಇದ್ದರು ಎಂದು ರೀನಾ ಚಬ್ಬೀರ್ ನೆನಪಿಸಿಕೊಂಡರು.

1947ರಲ್ಲಿ ದೇಶ ವಿಭಜನೆಯಾದಾಗ ರಾವಲ್ಪಿಂಡಿಯಿಂದ ಕುಟುಂಬ ಭಾರತಕ್ಕೆ ಸ್ಥಳಾಂತರವಾಯಿತು. ಆಗ ರೀನಾ ಚಬ್ಬೀರ್‌ಗೆ 15 ವರ್ಷಗಳು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
"ಪೂರ್ವಜನರ ಮನೆಗೆ ಭೇಟಿ ನೀಡಲು ಸಾಧ್ಯವಾಗದ ಕಾರಣ ನನಗೆ ತುಂಬಾ ದುಃಖವಾಗಿತ್ತು. ಈಗ ಭೇಟಿ ನೀಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ" ಎಂದು ರೀನಾ ಚಬ್ಬೀರ್ ಹೇಳಿದ್ದಾರೆ.
1965ರಲ್ಲಿ ರೀಬಾ ಪೂರ್ವಜನರನ್ನು ಭೇಟಿ ಮಾಡಲು ಬಯಸಿದ್ದರು. ವೀಸಾಗೆ ಸಹ ಅರ್ಜಿ ಸಲ್ಲಿಸಿದ್ದರು. ಆದರೆ ಎರಡು ದೇಶಗಳ ನಡುವಿನ ಬಿಗುವಿನ ವಾತಾವರಣದ ಕಾರಣ ಪಾಕಿಸ್ತಾನ ವೀಸಾ ನೀಡಲು ನಿರಾಕರಿಸಿತ್ತು.












Click it and Unblock the Notifications