ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ತಿಂಗಳಿನಿಂದ ಬಂದರಿನಲ್ಲಿ ಸಿಲುಕಿಕೊಂಡ ಭಾರತದ ನಾವಿಕರು: ಮನೆಗೆ ಮರಳಲು ಬಿಡದ ಚೀನಾ

|
Google Oneindia Kannada News

ಬೀಜಿಂಗ್, ಡಿಸೆಂಬರ್ 25: ಆಸ್ಟ್ರೇಲಿಯಾದಿಂದ ಕಲ್ಲಿದ್ದಲು ಸಾಗಿಸುತ್ತಿದ್ದ ಭಾರತದ ಎರಡು ಸರಕು ಸಾಗಣೆ ನೌಕೆಗಳ ನಾವಿಕರು ಚೀನಾದಲ್ಲಿ ಸಿಲುಕಿಕೊಂಡಿದ್ದಾರೆ. ಈ ಘಟನೆಗೂ ಉಭಯ ದೇಶಗಳ ನಡುವಿನ ಗಡಿ ಬಿಕ್ಕಟಿನ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂದು ಚೀನಾ ಹೇಳಿಜೆ ನೀಡಿದೆ.

ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ವಾರೆಂಟೈನ್ ಕ್ರಮಗಳ ಕಾರಣದಿಂದ ಭಾರತಕ್ಕೆ ಸೇರಿದ ಎರಡು ಹಡಗುಗಳು ಬಂದರಿನಲ್ಲಿ ಸಿಲುಕಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತ-ಚೀನಾ ಗಡಿ ವಿವಾದದ ಮಧ್ಯೆ, LACಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆಭಾರತ-ಚೀನಾ ಗಡಿ ವಿವಾದದ ಮಧ್ಯೆ, LACಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವಾಣೆ

ಈ ಎರಡು ಸರಕು ಸಾಗಣೆ ಹಡಗುಗಳಲ್ಲಿ ಭಾರತದ 39 ನಾವಿಕರಿದ್ದಾರೆ. ಭಾರತದ ಎಂವಿ ಜಾಗ್ ಆನಂದ್ ಮತ್ತು ಎಂವಿ ಅನಸ್ತೇಷಿಯಾ ಹಡಗುಗಳು ಚೀನಾದ ಹೆಬೀನಲ್ಲಿನ ಉತ್ತರ ಪ್ರಾಂತ್ಯದಲ್ಲಿರುವ ಜಿಂಗ್‌ಟಾಂಗ್ ಮತ್ತು ಕಾವೊಫೀಡಿಯನ್ ಬಂದರುಗಳಲ್ಲಿನ ನೀರಿನಲ್ಲಿ ಹಲವು ತಿಂಗಳುಗಳಿಂದ ಸಿಲುಕಿಕೊಂಡಿದೆ. ಮುಂದೆ ಓದಿ.

ಸರಕು ಇಳಿಸಲೂ ಅವಕಾಶವಿಲ್ಲ

ಸರಕು ಇಳಿಸಲೂ ಅವಕಾಶವಿಲ್ಲ

ಹಡಗಿನಲ್ಲಿರುವ ಸರಕನ್ನು ಇಳಿಸಲು ಮತ್ತು ಸಿಬ್ಬಂದಿ ದಡಕ್ಕೆ ಬರಲು ಕೂಡ ಅವಕಾಶ ನೀಡುತ್ತಿಲ್ಲ. ಇದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ. ಈ ಹಡಗುಗಳು ಬಂದರಿನಿಂದ ಹೊರಡಲು ಅವಕಾಶ ನೀಡದಿರುವ ಬಗ್ಗೆ ಚೀನಾದ ಅಧಿಕಾರಿಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಶ್ನಿಸಿದೆ.

ಕಾರಣ ಸ್ಪಷ್ಟವಾಗುತ್ತಿಲ್ಲ

ಕಾರಣ ಸ್ಪಷ್ಟವಾಗುತ್ತಿಲ್ಲ

'ಭಾರತದ ಹಡಗುಗಳು ಬಂದ ಬಳಿಕ ಅಲ್ಲಿಗೆ ಬಂದ ಅನೇಕ ಹಡಗುಗಳಿಗೆ ತಮ್ಮ ಸರಕು ಇಳಿಸಿ ಅಲ್ಲಿಂದ ನಿರ್ಗಮಿಸಲು ಅವಕಾಶ ನೀಡಲಾಗಿದೆ ಎನ್ನುವುದು ನಮಗೆ ತಿಳಿದಿದೆ. ಇದಕ್ಕೆ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದರು.

ಚೀನಾ ವಿರುದ್ಧ ಭಾರತಕ್ಕೆ ಬೆಂಬಲ, ಇಂಡಿಯಾಗೆ ಪುಟಿನ್ ವಿಸಿಟ್..!ಚೀನಾ ವಿರುದ್ಧ ಭಾರತಕ್ಕೆ ಬೆಂಬಲ, ಇಂಡಿಯಾಗೆ ಪುಟಿನ್ ವಿಸಿಟ್..!

ಬಿಕ್ಕಟ್ಟಿಗೂ ಇದಕ್ಕೂ ಸಂಬಂಧವಿಲ್ಲ

ಬಿಕ್ಕಟ್ಟಿಗೂ ಇದಕ್ಕೂ ಸಂಬಂಧವಿಲ್ಲ

ಕ್ವಾರೆಂಟೈನ್‌ನ ನಿರ್ದಿಷ್ಟ ಷರತ್ತುಗಳನ್ನು ಪೂರೈಸಿದ ಹಡಗುಗಳು ಮತ್ತು ಸಿಬ್ಬಂದಿಗೆ ಅಲ್ಲಿಂದ ಹೊರಡಲು ಅನುಮತಿ ನೀಡಲಾಗಿದೆ. ಭಾರತದೊಂದಿಗೆ ಚೀನಾ ನಿರಂತರ ಸಂಪರ್ಕದಲ್ಲಿದ್ದು, ಅವರ ಮನವಿಗೆ ಸ್ಪಂದಿಸುತ್ತಿದೆ. ಅವರಿಗೆ ಅಗತ್ಯ ಎಲ್ಲ ನೆರವು ನೀಡಲಾಗುತ್ತಿದೆ ಎಂದು ಹೇಳಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ಪ್ರಸ್ತುತ ಚೀನಾವು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೊಂದಿರುವ ಸೇನೆ ಮತ್ತು ವ್ಯಾಪಾರ ವಿವಾದಗಳಿಗೆ ಇದು ಯಾವುದೇ ರೀತಿ ಸಂಬಂಧ ಹೊಂದಿಲ್ಲ ಎಂದಿದ್ದಾರೆ.

ಹಡಗಿನಲ್ಲಿ ಔಷಧಗಳ ಕೊರತೆ

ಹಡಗಿನಲ್ಲಿ ಔಷಧಗಳ ಕೊರತೆ

ಎಂವಿ ಜಾಗ್ ಆನಂದ್ ಹಡಗಿನಲ್ಲಿರುವ 23 ಭಾರತೀಯ ಸಿಬ್ಬಂದಿ ಮನೆಗೆ ಮರಳಲು ಭಾರತ ಸರ್ಕಾರದ ಸಹಾಯ ಕೋರಿದ್ದಾರೆ. ಅವರಲ್ಲಿ ಕೆಲವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಹಡಗಿನಲ್ಲಿ ಔಷಧಗಳ ಕೊರತೆ ಎದುರಾಗಿದೆ. ಈ ಹಡಗು ಹೆಬೀ ಪ್ರಾಂತ್ಯದ ಜಿಂಗ್‌ಟಾಂಗ್ ಬಂದರಿನಲ್ಲಿ ಜೂನ್ 13ರಿಂದಲೂ ಇದ್ದರೆ, ಮತ್ತೊಂದಿ ಹಡಗು ಸೆಪ್ಟೆಂಬರ್ 20ರಿಂದ ಕಾವೊಫೀಡಿಯನ್ ಬಂದರಿನಲ್ಲಿದೆ.

English summary
Indian sailors in two ships were stranded in Chinese ports since few months and not allowed to return. China says it has no link with standoff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X