Get Updates
Get notified of breaking news, exclusive insights, and must-see stories!

ರಾಷ್ಟ್ರಪಿತ ಗಾಂಧೀಜಿಗೆ ವಿದೇಶದಲ್ಲಿ ರಾಷ್ಟ್ರಪತಿ ಗೌರವ!

ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೇ ಬದಲಿಸಿದ್ದ, ಬ್ರಿಟಿಷರ ಪಾಲಿಗೆ ಸಿಂಹವಾಗಿದ್ದ ಮಹಾತ್ಮ ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಹಾಗೇ ಬ್ರಿಟಿಷರು ಭಾರತದಲ್ಲಿ ನಡೆಸುತ್ತಿದ್ದ ದೌರ್ಜನ್ಯ ಖಂಡಿಸಿ ಗಾಂಧೀಜಿ ಅವರು ಅನೇಕ ಹೋರಾಟಗಳನ್ನು ಸಂಘಟಿಸಿದ್ದರು. ಈ ಪೈಕಿ ದಂಡಿ ಉಪ್ಪಿನ ಸತ್ಯಗ್ರಹ ಕೂಡ ಒಂದು. ಹೀಗಾಗಿ ಐತಿಹಾಸಿಕ ದಂಡಿ ಯಾತ್ರೆ ವಾರ್ಷಿಕೋತ್ಸವದ ಅಂಗವಾಗಿ ಮಾರಿಷಸ್‌ನಲ್ಲಿ ಭಾರತದ ರಾಷ್ಟ್ರಪತಿ ಅವರು ವಿಶೇಷ ಗೌರವ ಸಲ್ಲಿಸಿದ್ದಾರೆ.

ಭಾರತ & ಮಾರಿಷಸ್ ಸಂಬಂಧ ವೃದ್ಧಿಗಾಗಿ ಇದೀಗ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರಿಷಸ್ ಪ್ರವಾಸದಲ್ಲಿ ಇದ್ದಾರೆ. ಒಟ್ಟು 3 ದಿನಗಳ ಪ್ರವಾಸದಲ್ಲಿ ಇರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅಲ್ಲದೆ ಈ ವೇಳೆ ದಂಡಿ ಯಾತ್ರೆ ವಾರ್ಷಿಕೋತ್ಸವದ ಅಂಗವಾಗಿ, ಮಾರಿಷಸ್‌ನ ಮೋಕಾದಲ್ಲಿ ಇರುವ ಮಹಾತ್ಮ ಗಾಂಧಿ ಇನ್‌ಸ್ಟಿಟ್ಯೂಟ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ವಿಶೇಷ ಗೌರವ ಸಲ್ಲಿಸಿದರು.

Indian President Droupadi Murmu Honors Gandhi During Visit to Mauritius know more

ಮೆಟ್ರೋದಲ್ಲಿ ರಾಷ್ಟ್ರಪತಿ ಸಂಚಾರ

ಅಲ್ಲದೆ ಇದೇ ಸಮಯದಲ್ಲಿ ಗಾಂಧೀಜಿ ಅವರ ಆದರ್ಶಗಳನ್ನು ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಮಾರಿಷಸ್‌ನ ಅಭಿವೃದ್ಧಿ ಯೋಜನೆಗಳನ್ನು ಕೂಡ ಪರಿಶೀಲಿಸಿದ್ದಾರೆ. ಈ ಪೈಕಿ ಮಾರಿಷಸ್ ಮೆಟ್ರೋ ಭಾರತದ ನೆರವಿನ ಪ್ರಮುಖ ಯೋಜನೆ ಆಗಿದ್ದು ವಿದೇಶದಲ್ಲಿ ಭಾರತದ ರಾಷ್ಟ್ರಪತಿ ಮೆಟ್ರೋ ಪ್ರಯಾಣ ಮಾಡಿದ್ದಾರೆ. ಮಾರಿಷಸ್ ದೇಶದ, ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮುರ್ಮು ಭಾಗವಹಿಸಿದ್ದರು. ಆ ಬಳಿಕ ದಂಡಿ ಯಾತ್ರೆ ಆರಂಭದ ಐತಿಹಾಸಿಕ ದಿನದಂದು ಮಾರಿಷಸ್‌ನ ಮಹಾತ್ಮ ಗಾಂಧಿ ಮೆಟ್ರೋ ನಿಲ್ದಾಣಕ್ಕೆ ಕೂಡ ಆಗಮಿಸಿದರು. ಈ ವೇಳೆ ಅವರು ಕೆಲಕಾಲ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ.

ಭಾರತದ ಮೂಲಕ ಮೆಟ್ರೋ ನಿರ್ಮಾಣ

ಮೊದಲೇ ಹೇಳಿದಂತೆ ಮಾರಿಷಸ್ ಮೆಟ್ರೋ ಭಾರತದ ನೆರವಿನ ಪ್ರಮುಖ ಯೋಜನೆಯಾಗಿದ್ದು, ಈ ಯೋಜನೆ ಅಲ್ಲಿನ ಜನರ ಜೀವನಕ್ಕೆ ಸಹಾಯಕವಾಗಿದೆ. 2019 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್‌ನಲ್ಲಿ ಮೆಟ್ರೋ ಎಕ್ಸ್‌ಪ್ರೆಸ್ ಸೇವೆ & ಆಸ್ಪತ್ರೆಯನ್ನು ಅಲ್ಲಿನ ಪ್ರಧಾನ ಮಂತ್ರಿ ಪ್ರವಿಂದ್ ಜಗನ್ನಾಥ್ ಅವರ ಜೊತೆಗೆ, ಜಂಟಿಯಾಗಿ ವರ್ಚುವಲ್‌ ಮೂಲಕ ಉದ್ಘಾಟನೆ ಮಾಡಿದ್ದರು. ಇದೀಗ ಭಾರತದ ರಾಷ್ಟ್ರಪತಿಗಳು, ಮಾರಿಷಸ್‌ನ ಮೆಟ್ರೋದಲ್ಲೂ ಪ್ರಯಾಣ ಮಾಡಿರುವುದು ಜಗತ್ತಿನ ಗಮನ ಸೆಳೆದಿದೆ.

Indian President Droupadi Murmu Honors Gandhi During Visit to Mauritius know more

ಒಟ್ನಲ್ಲಿ ಭಾರತದ ಸಹಾಯ ಪಡೆದು ಇದೀಗ ಮಾರಿಷಸ್ ತನ್ನ ನೆಲದಲ್ಲಿ ಯಶಸ್ವಿಯಾಗಿ, ಮೆಟ್ರೋ ಯೋಜನೆ ಜಾಲ ರೂಪಿಸಿದೆ. ಈ ಮೂಲಕ ಮತ್ತೊಮ್ಮೆ ಭಾರತ ಜಾಗತಿಕವಾಗಿ, ತನ್ನ ಆರ್ಥಿಕ ಶಕ್ತಿಯನ್ನು ತೋರಿಸಿದೆ. ಭಾರತ ತಾನು ಬೆಳೆಯುವ ಜೊತೆಗೆ ಅಕ್ಕಪಕ್ಕದಲ್ಲಿ ಇರುವ ದೇಶಗಳಿಗೂ ನೆರವು ನೀಡುತ್ತಾ ಬೆಳೆಯುತ್ತಿರುವುದು ವಿಶೇಷ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+