ಬ್ರಿಕ್ಸ್ ಸಮ್ಮೇಳನ: ಇಂದು ನರೇಂದ್ರ ಮೋದಿ-ಜಿನ್ಪಿಂಗ್ ಭೇಟಿ

ಗ್ಸಯಾಮೆನ್(ಚೀನಾ), ಸೆಪ್ಟೆಂಬರ್ 5: ಬ್ರಿಕ್ಸ್ ಸಮ್ಮೇಳನಕ್ಕಾಗಿ ಚೀನಾಕ್ಕೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು(ಸೆ.5) ಚೀನಾ ಅಧ್ಯಕ್ಷ ಗ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ.

ಉಭಯ ನಾಯಕರೂ, ಭಾರತ -ಚೀನಾ ನಡುವಿನ ಸಾಮರಸ್ಯಕ್ಕೆ ಧಕ್ಕೆಯಾಗಿರುವ "ದೋಕ್ಲಾಂ" ಕುರಿತು ಚರ್ಚಿಸುವ ನಿರೀಕ್ಷೆ ಇದೆ.

Indian PM Narendra Modi to meet Chinese president Xi Jinping on Sep 5th

ಕಳೆದ ವಾರವಷ್ಟೆ ದೋಕ್ಲಾಂ ನಲ್ಲಿ ಬೀಡುಬಿಟ್ಟಿದ್ದ ಸೇನೆಯನ್ನು ಭಾರತ ಮತ್ತು ಚೀನಾ ಎರಡೂ ದೇಶಗಳೂ ಹಿಂಪಡೆದಿದ್ದವು. ಈ ಮೂಲಕ ಗಡಿಯಲ್ಲಿ ಶಾಂತಿ ನೆಲೆಸಿತ್ತು.

ಇಂದು 12:30 ಕ್ಕೆ ಭೇಟಿಯಾಗಲಿರುವ ಉಭಯ ನಾಯಕರು ಪರಸ್ಪರ ವಿಶ್ವಾಸ ಹೆಚ್ಚಿಸಿಕೊಳ್ಳುವ ಕುರಿತು ಚರ್ಚಿಸಲಿದ್ದಾರೆ.

ಭಾರತದ ಭಯೋತ್ಪಾದನೆಯ ವಿರುದ್ಧ ಹೋರಾಟವನ್ನು ಸೆ.4 ರಂದು ಬ್ರಿಕ್ಸ್ ನ ಸದಸ್ಯ ರಾಷ್ಟ್ರಗಳು ಬೆಂಬಲಿಸುವ ಮೂಲಕ ಚೀನಾಕ್ಕೂ ಮುಖಭಂಗವನ್ನುಂಟುಮಾಡಿವೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಪ್ರೋತ್ಸಾಹಿತ ಭಯೋತ್ಪಾದಕ ಸಂಘಟನೆಗಳ ಬಗ್ಗೆಯೂ ಚೀನಾ ಹೊರತುಪಡಿಸಿ ಇತರೆ ಬ್ರಿಕ್ಸ್(ಬ್ರೆಜಿಲ್, ರಷ್ಯಾ, ಭಾರತ, ದಕ್ಷಿಣ ಆಫ್ರಿಕ) ರಾಷ್ಟ್ರಗಳು ದನಿ ಎತ್ತಿ, ಭಾರತಕ್ಕೆ ಬೆಂಬಲ ನೀಡಿದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+