ಭಾರತದ ‘ಜೇಮ್ಸ್ ಬಾಂಡ್’ & ಇಸ್ರೇಲ್ ಪ್ರಧಾನಿ ಮಹತ್ವದ ಮಾತುಕತೆ!
ಭಾರತ ಮತ್ತು ಇಸ್ರೇಲ್ ನಡುವೆ ಎಂತಹ ಫ್ರೆಂಡ್‌ಶಿಪ್ ಇದೆ ಅನ್ನೋದು ಜಗತ್ತಿಗೇ ಗೊತ್ತು. ಇಸ್ರೇಲ್ ಕಷ್ಟದಲ್ಲಿ ಸಿಲುಕಿದ ಸಮಯದಲ್ಲಿ ಭಾರತ ಸಹಾಯಕ್ಕೆ ಬಂದಿದೆ. ಹಾಗೇ ಭಾರತ ಅನಿವಾರ್ಯ ಸ್ಥಿತಿಗೆ ಸಿಲುಕಿದ ಸಮಯದಲ್ಲಿ ಇಸ್ರೇಲ್ ಕೂಡ ಭಾರತಕ್ಕೆ ಸಹಾಯ ಮಾಡಿದೆ. ಹೀಗೆ ಎರಡೂ ದೇಶಗಳ ನಡುವೆ ಅತ್ಯುತ್ತಮ ಸ್ನೇಹ ಇದ್ದೇ ಇದೆ. ಹೀಗಿದ್ದಾಗಲೇ ಇಸ್ರೇಲ್ & ಹಮಾಸ್ ಉಗ್ರರ ನಡುವೆ ರಣ ಕಾಳಗ ನಡೆಯುತ್ತಿದ್ದು, ಇದೀಗ ದಿಢೀರ್ ಭಾರತ ಮತ್ತು ಇಸ್ರೇಲ್ ನಡುವೆ ಮಹತ್ವದ ಮಾತುಕತೆ ನಡೆದಿದೆ.
ಗಾಜಾ ಪಟ್ಟಿ ಈಗ ನರಕವಾಗಿ ಬದಲಾಗಿದ್ದು, ಅಕ್ಟೋಬರ್ 7 ರಂದು ತಮ್ಮ ಮೇಲೆ ಉಗ್ರ ಪಡೆ ದಾಳಿ ಮಾಡಿದ್ದ ಕಾರಣಕ್ಕೆ ಇಸ್ರೇಲ್ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಯುದ್ಧದ ಬಲೆಗೆ ಸಿಲುಕಿ ಇಸ್ರೇಲ್ ಕೂಡ ಸಂಕಷ್ಟ ಎದುರಿಸುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಗಾಜಾ ಪಟ್ಟಿ ರಕ್ತಸಿಕ್ತವಾಗಿ ಹೋಗಿದೆ. ಇಸ್ರೇಲ್ ವಿರುದ್ಧ ಜಗತ್ತಿನ ಹಲವು ದೇಶಗಳು ಆಕ್ರೋಶ ಹೊರಹಾಕಿ ಪ್ಯಾಲೆಸ್ತೀನ್ ಪರ ನಿಲ್ಲುತ್ತಿವೆ. ಪರಿಸ್ಥಿತಿ ಹೀಗಿದ್ದಾಗ ಭಾರತದ 'ಜೇಮ್ಸ್ ಬಾಂಡ್' ಅಂತಾನೆ ಕರೆಸಿಕೊಳ್ಳುವ ಅಜಿತ್ ದೋವಲ್ ಅವರು ಇಸ್ರೇಲ್ ಪ್ರಧಾನಿಯನ್ನು ಭೇಟಿ ಮಾಡಿದ್ದಾರೆ.

ಅಜಿತ್ ದೋವಲ್ ಮಹತ್ವದ ಚರ್ಚೆ
ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವ್ರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಗಾಜಾಪಟ್ಟಿ ಬೆಳವಣಿಗೆ ಸೇರಿದಂತೆ, ತುರ್ತು ಮಾನವೀಯ ನೆರವು ಒದಗಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಇದೀಗ ಇಸ್ರೇಲ್ ಪ್ರಧಾನಿಯವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರು ಪ್ರಧಾನಿಯವರಾದ ಬೆಂಜಮಿನ್ ನೆತನ್ಯಾಹು ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗಾಜಾದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲಾಯಿತು ಎಂದು ಮಾಹಿತಿ ನೀಡಲಾಗಿದೆ.
ಭಾರತಕ್ಕೆ ಇಸ್ರೇಲ್ ಸದಾ ಋಣಿ!
ಇಸ್ರೇಲ್ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದು ಇಂತಹ ಪರಿಸ್ಥಿತಿಯಲ್ಲಿ ಭಾರತ ನೀಡುತ್ತಿರುವ, ಮಹತ್ವದ ಸಹಾಯವನ್ನು ಇಸ್ರೇಲ್ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಿದೆ. ಈ ಮೂಲಕ ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದೆ. ಈ ಹೊತ್ತಲ್ಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಕೂಡ ಗಮನ ಸೆಳೆಯುತ್ತಿದೆ.

ಯುದ್ಧ ಶುರುವಾಗಿದ್ದು ಹೇಗೆ?
ಹಮಾಸ್ ಉಗ್ರರು ಎಸಗಿದ ಕೃತ್ಯಕ್ಕೆ ಗಾಜಾಪಟ್ಟಿ ಸಾಮಾನ್ಯ ಜನರು ನಲುಗಿದ್ದು ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ, ಬಾಂಬ್ ಹಿಡಿದು ಇಸ್ರೇಲ್ ಒಳ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಭರ್ಜರಿ 5 ತಿಂಗಳು ಕಳೆದಿದ್ದು ಈಗ 6ನೇ ತಿಂಗಳು ಕೂಡ ತುಂಬುವ ಭಯ ಕಾಡುತ್ತಿದೆ. ಈ ಸಮಯದಲ್ಲೇ ಭಾರತ ಮತ್ತು ಇಸ್ರೇಲ್ ನಡುವೆ ಮಹತ್ವದ ಮಾತುಕತೆ ನಡೆದಿದೆ.












Click it and Unblock the Notifications