ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜೆಗಳಿಗೆ ಸಂದೇಶ: ಕೂಡಲೇ ಉಕ್ರೇನ್‌ನಿಂದ ಜಾಗ ಖಾಲಿ ಮಾಡಿ ಎಂದ ಭಾರತ!

|
Google Oneindia Kannada News

ನವದೆಹಲಿ, ಅಕ್ಟೋಬರ್ 19: ಉಕ್ರೇನ್‌ನಲ್ಲಿ ಹದಗೆಡುತ್ತಿರುವ ''ಭದ್ರತಾ ಪರಿಸ್ಥಿತಿ" ಯನ್ನು ಉಲ್ಲೇಖಿಸಿರುವ ಭಾರತವು ಆ ರಾಷ್ಟ್ರಕ್ಕೆ ಪ್ರಯಾಣಿಸದಂತೆ ಎಲ್ಲ ನಾಗರಿಕರಿಗೆ ಸಲಹೆ ನೀಡಿದೆ.

"ಪ್ರಸ್ತುತ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಲಭ್ಯವಿರುವ ವಿಧಾನಗಳ ಮೂಲಕ ಉಕ್ರೇನ್‌ನಿಂದ ಬೇಗನೆ ಹೊರಡುವಂತೆ ಸೂಚಿಸಲಾಗಿದೆ," ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ತಿಳಿಸಿದೆ.

ಉಕ್ರೇನ್‌ನಲ್ಲಿ ವೈಮಾನಿಕ ದಾಳಿ; ಇರಾನ್‌ ನಿರ್ಮಿತ ಮಾರಕ ಡ್ರೋನ್‌ ಬಳಸಿಕೊಂಡ ರಷ್ಯಾ?ಉಕ್ರೇನ್‌ನಲ್ಲಿ ವೈಮಾನಿಕ ದಾಳಿ; ಇರಾನ್‌ ನಿರ್ಮಿತ ಮಾರಕ ಡ್ರೋನ್‌ ಬಳಸಿಕೊಂಡ ರಷ್ಯಾ?

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬುಧವಾರ ನಾಲ್ಕು ಉಕ್ರೇನಿಯನ್ ಪ್ರದೇಶಗಳಲ್ಲಿ ಸಮರ ಸಾರಿದ ಬೆನ್ನಲ್ಲೇ ಈ ರೀತಿ ಸಲಹೆ ನೀಡಲಾಗಿದೆ. ಆದರೆ ಆಕ್ರಮಿತ ನಗರದ ಖರ್ಸನ್‌ನ ಕೆಲವು ನಿವಾಸಿಗಳು ಆಕ್ರಮಣದ ಎಚ್ಚರಿಕೆಯನ್ನು ನೀಡಿದ ನಂತರ ದೋಣಿಯಲ್ಲಿ ಜಾಗ ಖಾಲಿ ಮಾಡಿದ್ದಾರೆ.

ಖೇರ್ಸನ್‌ನಿಂದ ಜಾಗ ಖಾಲಿ ಮಾಡುತ್ತಿರುವ ಮಂದಿ

ಖೇರ್ಸನ್‌ನಿಂದ ಜಾಗ ಖಾಲಿ ಮಾಡುತ್ತಿರುವ ಮಂದಿ

ಖೇರ್ಸನ್‌ನಿಂದ ಪಲಾಯನ ಮಾಡುವ ಜನರ ಚಿತ್ರಗಳನ್ನು ರಷ್ಯಾದ ಟಿವಿ ಪ್ರಸಾರ ಮಾಡಿದೆ. ಡ್ನಿಪ್ರೊ ನದಿಯ ಬಲದಿಂದ ಎಡದಂಡೆಗೆ ನಿರ್ಗಮನವನ್ನು ಅದು ಚಿತ್ರಿಸಿತು. ಇದು ಯುದ್ಧ ವಲಯವಾಗುವ ಮೊದಲು ನಾಗರಿಕರ ನಗರವನ್ನು ತೆರವುಗೊಳಿಸುವ ಪ್ರಯತ್ನವಾಗಿದೆ. ಕಳೆದ ಕೆಲವು ವಾರಗಳಲ್ಲಿ ರಷ್ಯಾದ ಪಡೆಗಳನ್ನು 20-30 ಕಿಮೀ ಹಿಂದಕ್ಕೆ ಓಡಿಸಿದ ನಂತರ ಸ್ಥಳೀಯ ರಷ್ಯಾ ಬೆಂಬಲಿತ ಆಡಳಿತದ ಉಪ ಮುಖ್ಯಸ್ಥ ಕಿರಿಲ್ ಸ್ಟ್ರೆಮೊಸೊವ್ ವಿಡಿಯೋದಲ್ಲಿ ಮನವಿ ಮಾಡಿದರು. ಅವರು ಉಕ್ರೇನ್ ಅನ್ನು ವಿಭಜಿಸುವ 2,200-ಕಿಮೀ ಉದ್ದದ ಡ್ನಿಪ್ರೊ ನದಿಯ ಪಶ್ಚಿಮ ದಂಡೆಯ ಬಗ್ಗೆ ಅಪಾಯದ ಬಗ್ಗೆ ಉಲ್ಲೇಖಿಸಿದ್ದಾರೆ.

ಖೇರ್ಸನ್ ಪ್ರದೇಶದಲ್ಲಿ ಸಮರ ಕಾನೂನು ಜಾರಿಗೊಳಿಸಿದ ಪುಟಿನ್

ಖೇರ್ಸನ್ ಪ್ರದೇಶದಲ್ಲಿ ಸಮರ ಕಾನೂನು ಜಾರಿಗೊಳಿಸಿದ ಪುಟಿನ್

ಉಕ್ರೇನ್ ಪ್ರದೇಶಗಳ ಮೇಲೆ ಹಿಡಿತ ಸಾಧಿಸುವುದಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಮರ ಕಾನೂನನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಗಿಯಾದ ಭದ್ರತಾ ಕ್ರಮಗಳನ್ನೂ ಮೀರಿದ್ದು, ತಕ್ಷಣದ ಅದ್ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. "ರಷ್ಯಾ ಆಕ್ರಮಿತ ಪ್ರದೇಶಗಳ ಮೇಲೆ 'ಸಮರ ಕಾನೂನು' ಅನುಷ್ಠಾನವನ್ನು ಉಕ್ರೇನಿಯನ್ನರ ಆಸ್ತಿಯನ್ನು ಲೂಟಿ ಮಾಡುವ ಹುನ್ನಾರದಂತೆ ಮಾತ್ರ ಪರಿಗಣಿಸಬೇಕು," ಎಂದು ಉಕ್ರೇನಿಯನ್ ಅಧ್ಯಕ್ಷೀಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಟ್ವೀಟ್ ಮಾಡಿದ್ದಾರೆ. "ಇದರಿಂದ ಉಕ್ರೇನ್‌ನಲ್ಲಿ ಯಾವುದನ್ನೂ ಬದಲಾಯಿಸಲು ಸಾಧ್ಯವಿಲ್ಲ, ನಾವು ನಮ್ಮ ಪ್ರದೇಶಗಳ ವಿಮೋಚನೆ ಮತ್ತು ನಿರಾಕರಣೆಯನ್ನು ಮುಂದುವರಿಸುತ್ತೇವೆ," ಎಂದರು.

ಉಕ್ರೇನ್‌ನಿಂದ ರಷ್ಯಾದ ಮೇಲೆ ಪ್ರತಿದಾಳಿ

ಉಕ್ರೇನ್‌ನಿಂದ ರಷ್ಯಾದ ಮೇಲೆ ಪ್ರತಿದಾಳಿ

ಕಳೆದ ಎಂಟು ತಿಂಗಳಿನಿಂದಲೂ ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಮುಂದುವರಿದಿದೆ. ಉಕ್ರೇನ್ ಪೂರ್ವ ಮತ್ತು ದಕ್ಷಿಣದಲ್ಲಿ ಪ್ರಮುಖ ಪ್ರತಿ-ದಾಳಿಗಳನ್ನು ನಡೆಸುತ್ತಿದೆ. ಈ ಸಂಘರ್ಷದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದು, ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಉಕ್ರೇನಿಯನ್ ನಗರಗಳು ಪೀಸ್ ಪೀಸ್ ಆಗಿವೆ. ಜಾಗತಿಕ ಆರ್ಥಿಕತೆಯನ್ನೇ ಶೇಕ್ ಮಾಡಿದೆ. ಉಕ್ರೇನಿಯನ್ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಆಂಡ್ರಿ ಯೆರ್ಮಾಕ್, ರಷ್ಯಾ ಅಲ್ಲಿ ಪ್ರಚಾರ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದು ಆರೋಪಿಸಿದರು.

ರಷ್ಯಾ ವಶಪಡಿಸಿಕೊಂಡ ಅತಿದೊಡ್ಡ ನಗರವೇ ಖೆರ್ಸನ್

ರಷ್ಯಾ ವಶಪಡಿಸಿಕೊಂಡ ಅತಿದೊಡ್ಡ ನಗರವೇ ಖೆರ್ಸನ್

ಉಕ್ರೇನ್‌ಗೆ ಹೊಂದಿಕೊಂಡಿರುವ ಎಂಟು ಪ್ರದೇಶಗಳಲ್ಲಿ ಮತ್ತು ಹೊರಗೆ ಚಲನೆಯನ್ನು ನಿರ್ಬಂಧಿಸುವ ಆದೇಶವನ್ನು ಪುಟಿನ್ ಹೊರಡಿಸಿದರು. ಕುಂಟುತ್ತಿರುವ ಯುದ್ಧದ ಪ್ರಯತ್ನವನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ಮಿಖಾಯಿಲ್ ಮಿಶುಸ್ಟಿನ್ ನೇತೃತ್ವದಲ್ಲಿ ವಿಶೇಷ ಸಮನ್ವಯ ಮಂಡಳಿಯನ್ನು ರಚಿಸಲು ಆದೇಶಿಸಿದ್ದರು. ಕಳೆದ ಫೆಬ್ರವರಿ 24ರಂದು ಉಕ್ರೇನ್‌ನಲ್ಲಿ ತನ್ನ "ವಿಶೇಷ ಸೇನಾ ಕಾರ್ಯಾಚರಣೆ" ಆರಂಭಿಸಿದಾಗಿನಿಂದ ಮಾಸ್ಕೋ ವಶಪಡಿಸಿಕೊಂಡ ಮತ್ತು ಹಿಡಿದಿಟ್ಟುಕೊಂಡಿರುವ ಅತಿದೊಡ್ಡ ಜನಸಂಖ್ಯಾ ಕೇಂದ್ರವೇ ಖೆರ್ಸನ್ ಆಗಿದೆ.

English summary
Indian Govt Asked Citizens To Urgently Leave Ukraine as war escalates from Russia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X