Get Updates
Get notified of breaking news, exclusive insights, and must-see stories!

ಎವರೆಸ್ಟ್‌ನಲ್ಲಿ ಕಾಣೆಯಾಗಿದ್ದ ಭಾರತೀಯ ಯುವಕನ ಮೃತದೇಹ ಪತ್ತೆ

ಕಾಠ್ಮಂಡು, ಮೇ 22 : ಮೌಂಟ್ ಎವರೆಸ್ಟ್ ಚಾರಣದ ವೇಳೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವಕ ರವಿಕುಮಾರ್ (27) ಅವರ ಮೃತದೇಹ ಪತ್ತೆಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಉತ್ತರಪ್ರದೇಶದ ಮೊರಾದಾಬಾದ್ ನವರಾದ ರವಿಕುಮಾರ್ ಪರ್ವತಾರೋಹಣ ಮಾಡಿ ವಾಪಸಾಗುತ್ತಿದ್ದ ವೇಳೆ ಶನಿವಾರ ಅವರು ಸಹಚರಿಂದ ಸಂಪರ್ಕ ಕಡಿದುಕೊಂಡಿದ್ದರು. [ಮೌಂಟ್ ಎವರೆಸ್ಟ್ ಚಾರಣ ಮಾಡುತ್ತಿದ್ದ ಅಮೆರಿಕ ಪ್ರಜೆ ಸಾವು]

Indian climber who went missing after conquering Mount Everest found dead

8,200 ಅಡಿ ಎತ್ತರದ 'ಬಾಲ್ಕನಿ' ಎಂದೇ ಪ್ರಸಿದ್ಧಗೊಂಡಿರುವ (ಈ ಪ್ರದೇಶವನ್ನು ಡೆತ್‌ ಝೋನ್ ಎಂದೂ ಕರೆಯಲಾಗುತ್ತಿದೆ) ಪ್ರದೇಶದಲ್ಲಿ ಅವರು ಪ್ರಪಾತಕ್ಕೆ ಬಿದ್ದಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ನಿರ್ದೇಶಕ ದಿನೇಶ್ ಭಟ್ಟಾರಾಯ್ ತಿಳಿಸಿದ್ದಾರೆ.

ರವಿಕುಮಾರ್ ಅವರ ಪರ್ವತಾರೋಹಣ ಮಾರ್ಗದರ್ಶಕ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೊಂಗ್ಯಾ ಶೆರ್ಪಾ ಅವರನ್ನು ರಕ್ಷಿಸಲಾಗಿದೆ. ಸಂಪರ್ಕ ಕಡಿದುಕೊಂಡು 24 ಗಂಟೆ ಕಳೆದರೂ ಪತ್ತೆಯಾಗದಿರುವುದರಿಂದ ರವಿಕುಮಾರ್ ಮೃತಪಟ್ಟಿರುವ ಸಾಧ್ಯತೆಯೇ ಹೆಚ್ಚಿದೆ ಎಂದು ನೇಪಾಳ ಪರ್ವತಾರೋಹಿಗಳ ಸಂಘಟನೆಯ ಅಧ್ಯಕ್ಷ ಆಂಗ್ ಶೆರಿಂಗ್ ಶೆರ್ಪಾ ಅಭಿಪ್ರಾಯಪಟ್ಟಿದ್ದರು.

ರವಿಕುಮಾರ್ ಸಾವಿನೊಂದಿಗೆ ಎವರೆಸ್ಟ್ ಪರ್ವತಾರೋಹಣದ ವೇಳೆ ಇತ್ತೀಚೆಗೆ ಮೃತಪಟ್ಟ ಪರ್ವತಾರೋಹಿಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+