2050 ರ 10 ದೊಡ್ಡ ನಗರಗಳು: ಪಟ್ಟಿಯಲ್ಲಿ ಭಾರತದ ಎರಡು ನಗರಗಳಿಗೆ ಅಗ್ರ ಪಟ್ಟ
ವಿಶ್ವದಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಹಲವು ದೇಶಗಳ ನಿದ್ದೆಯನ್ನು ಕೆಡಿಸಿದ್ದು ಸುಳ್ಳಲ್ಲ. ಇತ್ತೀಚಿನ ಮಾಹಿತಿಯ ಪ್ರಕಾರ ವಿಶ್ವದಲ್ಲಿ 8 ಬಿಲಿಯನ್ ಜನರ ಸಂಖ್ಯೆ ಮುಟ್ಟಿದೆ. ವಿಶ್ವ ಸಂಸ್ಥೆಯ ಅಂದಾಜಿನ ಪ್ರಕಾರ ಈ ಸಂಖ್ಯೆ ಹೀಗೆ ಹೆಚ್ಚಾಗುತ್ತಾ ಸಾಗಿದರೆ 2050ರಲ್ಲಿ ಈ ಸಂಖ್ಯೆ 2 ಬಿಲಿಯನ್ ಹೆಚ್ಚಾಗಲಿದ್ದು, ಅದು 10 ಬಿಲಿಯನ್ ದಾಟಬಹುದು ಎಂದು ತಿಳಿಸಿದೆ.
ಬೆಳೆಯುತ್ತಿರುವ ಜನಸಂಖ್ಯೆ ಹಲವು ತೊಂದರೆಗಳನ್ನು ಸೂಚಿಸುವಂತಿದೆ. ಆರೋಗ್ಯ ರಕ್ಷಣೆ, ನೈರ್ಮಲ್ಯ, ಜೀವನ ಪರಿಸ್ಥಿತಿಗಳ ಪ್ರಗತಿಯ ಸಮಸ್ಯೆಗಳನ್ನು ಎದುರಿಸಬಹುದು. ಎಲ್ಲ ಕ್ಷೇತ್ರಗಳಲ್ಲೂ ಅತ್ಯಾಧುನಿಕ ತಂತ್ರಜ್ಞಾನಗಳು ಬೆಳೆಯುತ್ತಿದ್ದು, ವಿಶೇಷ ಮಕ್ಕಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಇನ್ನು ಕಳೆದ ದಶಕದಲ್ಲಿ ಕ್ರಮೇಣವಾಗಿ ಜನ ಸಂಖ್ಯೆ ಪ್ರಮಾಣ ಏರು ಮುಖದಲ್ಲಿ ಸಾಗುತ್ತಿದೆ.

ಭಾರತ, ಚೀನಾದ ಎರಡು ನಗರಗಳು
ವಿಶ್ವ ಜನಸಂಖ್ಯೆಯ ವಿಮರ್ಶೆ ತಂಡವು ಇತ್ತೀಚಿಗೆ ವಿಶ್ವದಲ್ಲಿ ಅತಿ ಹೆಚ್ಚು ಜನರನ್ನು ಹೊಂದಿರುವ ದೇಶ ಹಾಗೂ ಪ್ರದೇಶಗಳನ್ನು ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ಭಾರತ ಹಾಗೂ ಚೀನಾದ ಪ್ರದೇಶಗಳು ಎದ್ದು ಕಾಣುತ್ತಿವೆ. ಜನ ಸಂಖ್ಯೆ ಪ್ರಮಾಣ ಹೆಚ್ಚಾಗುತ್ತಿರುವುದರಲ್ಲಿ ಯಾವುದೇ ಸಂದೇಹವೂ ಇಲ್ಲದೆ ಭಾರತ, ಚೀನಾ ಹೆಸರು ಕಾಣಿಸಿಕೊಳ್ಳುವುದು ಸಹಜ. ಇದಕ್ಕೆ ಕಾರಣ ಈ ಎರಡೂ ದೇಶಗಳೇ ವಿಶ್ವದ ಗರಿಷ್ಠ ಜನಸಂಖ್ಯೆಯನ್ನು ಹೊಂದಿರುವ ಅಗ್ರ ರಾಷ್ಟ್ರಗಳಾಗಿವೆ.
ವಿಶ್ವ ಜನಸಂಖ್ಯೆಯ ವಿಮರ್ಶೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ಭಾರತದ ನಗರಗಳು ಮುಂಚೂಣಿಯಲ್ಲಿವೆ. ಭಾರತದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಜನ ಸಂಖ್ಯೆ ಪ್ರಮಾಣ ಶೇಕಡಾ 2.63 ರಷ್ಟು ಹೆಚ್ಚಾಗಿದೆ. ಇನ್ನು ಮುಬೈನಲ್ಲೂ ಇದರ ಸಂಖ್ಯೆ ಏರುಗತಿಯಲ್ಲಿ ಇದೆ. 2023ಕ್ಕೆ ಹೋಲಿಸಿದರೆ, ಈ ವರ್ಷದಲ್ಲಿ ಶೇಕಡಾ 1.77 ರಷ್ಟು ಹೆಚ್ಚಾಗಿದೆ.
ಟೋಕಿಯೊದಲ್ಲೂ ಇದ್ದಾರೆ ಹೆಚ್ಚಿನ ಜನ
ಜಪಾನ್ ದೇಶದ ಟೋಕಿಯೊ, ಅತ್ಯಂತ ವ್ಯಾಪಕವಾದ ಜನಸಂಖ್ಯೆಯನ್ನು ಹೊಂದಿದೆ. ಸಂಪೂರ್ಣ ಟೋಕಿಯೊ ಮಹಾನಗರ ಪ್ರದೇಶವನ್ನು ಪರಿಗಣಿಸಿದಾಗ ಒಟ್ಟು 37.1 ಮಿಲಿಯನ್ ನಿವಾಸಿಗಳು ಈ ನಗರದಲ್ಲಿ ವಾಸಿಸುತ್ತಿದ್ದಾರೆ. ಜಪಾನಿನ ಒಸಾಕಾ ಕೂಡ ಅಸಾಧಾರಣವಾಗಿ 19 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಚೀನಾದ ಎರಡು ಮಹಾನಗರಗಳಾದ ಶಾಂಘೈ ಮತ್ತು ಬೀಜಿಂಗ್, ಕ್ರಮವಾಗಿ 29.9 ಮಿಲಿಯನ್ ಮತ್ತು 22.2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿವೆ.

2025ರಲ್ಲಿ ಭಾರತದ ಈ ನಗರಕ್ಕೆ ಪ್ರಥಮ ಸ್ಥಾನ
ಜಪಾನ್‌ನ ಟೋಕಿಯೊ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ, ಆದರೆ 2050 ರಲ್ಲಿ ಈ ಸ್ಥಾನವನ್ನು ಮುಂಬೈ ಪಡೆಯಲಿದೆ. ದೆಹಲಿ ಎರಡನೇ ಸ್ಥಾನ ಪಡೆಯುವ ಸಾಧ್ಯತೆ ಇದೆ. ಪ್ರಸ್ತುತ ಮುಂಬೈ ಒಂಬತ್ತನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದ್ದು, ದೆಹಲಿ ಇನ್ನೂ ಎರಡನೇ ಸ್ಥಾನದಲ್ಲಿದೆ. ಕೋಲ್ಕತ್ತಾ 17ನೇ ಸ್ಥಾನದಲ್ಲಿದೆ. 2050 ರ ಹೊತ್ತಿಗೆ, ಟೋಕಿಯೊ ಜನಸಂಖ್ಯೆಯ ದೃಷ್ಟಿಯಿಂದ ಏಳನೇ ಸ್ಥಾನಕ್ಕೆ ಬರಲಿದೆ.
2050 ರ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಢಾಕಾ ಮೂರನೇ ಸ್ಥಾನದಲ್ಲಿದೆ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕಿನ್ಶಾಸಾ ನಾಲ್ಕನೇ ಸ್ಥಾನದಲ್ಲಿದೆ, ಕೋಲ್ಕತ್ತಾ ಐದನೇ ಸ್ಥಾನದಲ್ಲಿದೆ, ನೈಜೀರಿಯಾದ ಲಾಗೋಸ್ ಆರನೇ ಸ್ಥಾನದಲ್ಲಿದೆ, ಪಾಕಿಸ್ತಾನದ ಕರಾಚಿ ಎಂಟನೇ ಸ್ಥಾನದಲ್ಲಿದೆ. ಅಮೆರಿಕದ ನ್ಯೂಯಾರ್ಕ್ ನಗರವು ಒಂಬತ್ತನೇ ಸ್ಥಾನದಲ್ಲಿದೆ ಮತ್ತು ಮೆಕ್ಸಿಕೋದ ಮೆಕ್ಸಿಕೋ ನಗರವು ಹತ್ತನೇ ಸ್ಥಾನದಲ್ಲಿದೆ.
ಜನಸಂಖ್ಯೆಗೆ ಅನುಗುಣವಾಗಿ ಸಿದ್ಧಪಡಿಸಲಾದ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೂರು ಮುಸ್ಲಿಂ ದೇಶಗಳ ನಗರಗಳನ್ನು ಸೇರಿವೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೈಜೀರಿಯಾದ ನಗರಗಳನ್ನು ಪಟ್ಟಿಯಲ್ಲಿ ಕಾಣಬಹುದು. 2050 ರಲ್ಲಿ ಢಾಕಾದ ಜನಸಂಖ್ಯೆಯು 35.2 ಮಿಲಿಯನ್ ಎಂದು ಅಂದಾಜಿಸಲಾಗಿದೆ, ನಂತರ ನೈಜೀರಿಯಾದ ಲಾಗೋಸ್ 32.6 ಮಿಲಿಯನ್ ಜನಸಂಖ್ಯೆ ಮತ್ತು ಕರಾಚಿ 31.7 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರ ಬಹುದು ಎಂದು ಅಂದಾಜಿಲಸಾಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications