India-China troops clash : ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆ

ನವದೆಹಲಿ, ಡಿಸೆಂಬರ್ 12: ಭಾರತ ಮತ್ತು ಚೀನಾ ಸೈನಿಕರು ಗಡಿಯಲ್ಲಿ ಮತ್ತೊಮ್ಮೆ ಮುಖಾಮುಖಿ ಆಗಿದ್ದಾರೆ. ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಡಿಸೆಂಬರ್ 9 ರಂದು ಭಾರತೀಯ ಮತ್ತು ಚೀನಾದ ಸೈನಿಕರು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಉದ್ದಕ್ಕೂ ಘರ್ಷಣೆ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಕ್ಷಣಾ ಮೂಲಗಳ ಪ್ರಕಾರ, ಕಳೆದ ಡಿಸೆಂಬರ್ 9ರಂದು ತವಾಂಗ್ ಸೆಕ್ಟರ್ ಬಳಿಯ ಯಾಂಗ್‌ಸ್ಟೆ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರೊಂದಿಗೆ ಘರ್ಷಣೆ ನಡೆಸಿದರು. ಈ ಮುಖಾಮುಖಿಯಲ್ಲಿ ಎರಡು ಕಡೆಯ ಕೆಲವು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕನಿಷ್ಠ ಆರು ಭಾರತೀಯ ಯೋಧರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಗುವಾಹಟಿಗೆ ಕರೆತರಲಾಗಿದೆ ವರದಿಯಾಗಿದೆ.

300ಕ್ಕೂ ಹೆಚ್ಚು ಚೀನೀ ಸೈನಿಕರು 17,000 ಅಡಿ ಎತ್ತರದ ಶಿಖರವನ್ನು ಪ್ರವೇಶಿಸಲು ಪ್ರಯತ್ನಿಸಿದರು. ಈ ವೇಳೆ ಭಾರತೀಯ ಸೇನಾ ಯೋಧರು ಅದನ್ನು ವಿಫಲಗೊಳಿಸಿದರು ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ಈಗ ಹಿಮಪಾತವಾಗಿದೆ. ಚೀನಾದ ಸೈನಿಕರು ಭಾರತೀಯ ಪೋಸ್ಟ್ ಅನ್ನು ಕಿತ್ತುಹಾಕಲು ಬಯಸಿದ್ದರು, ಆದರೆ ಪ್ರಯತ್ನವನ್ನು ಭಾರತದ ಕಡೆಯಿಂದ ಯಶಸ್ವಿಯಾಗಿ ವಿಫಲಗೊಳಿಸಲಾಗಿದೆ. ತದನಂತರದಲ್ಲಿ ಎರಡೂ ಕಡೆಯವರು ತಕ್ಷಣವೇ ಆ ಪ್ರದೇಶದಿಂದ ನಿರ್ಗಮಿಸಿದರು.

ಚೀನಾದ ಸಹವರ್ತಿಗಳೊಂದಿಗೆ ಸಭೆ

ಚೀನಾದ ಸಹವರ್ತಿಗಳೊಂದಿಗೆ ಸಭೆ

"ಈ ಘಟನೆಗೆ ಅನುಸರಣೆಯಾಗಿ ಆ ಪ್ರದೇಶದಲ್ಲಿನ ನಮ್ಮ ಕಮಾಂಡರ್ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ರಚನಾತ್ಮಕ ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಮಸ್ಯೆಯನ್ನು ಚರ್ಚಿಸಲು ಚೀನೀ ಸಹವರ್ತಿಯೊಂದಿಗೆ ಸಭೆಯನ್ನು ನಡೆಸಿದರು," ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದೇ ಪ್ರದೇಶದಲ್ಲಿ ಭಾರತೀಯ ಪಡೆಗಳು ಚೀನಾ ಸೈನಿಕರನ್ನು ತಡೆದಿದ್ದವು. 2021ರಲ್ಲಿ ಅರುಣಾಚಲ ಪ್ರದೇಶದ ನೈಜ ನಿಯಂತ್ರಣ ರೇಖೆಯ (LAC) ಸಮೀಪ ಸುಮಾರು 200 ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಸೈನಿಕರನ್ನು ತಡೆಹಿಡಿಯಲಾಯಿತು.

ಕಠಿಣ ಕ್ರಮಕ್ಕಾಗಿ ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ

ಕಠಿಣ ಕ್ರಮಕ್ಕಾಗಿ ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ

ತವಾಂಗ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಕೇಂದ್ರದಿಂದ ಕಠಿಣ ಕ್ರಮಕ್ಕೆ ಒತ್ತಾಯಿಸಿತು. "ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ ಎಂಬ ಸುದ್ದಿ ಇದೆ. ಸರ್ಕಾರ ತನ್ನ ಅಚಲ ಧೋರಣೆಯನ್ನು ಬಿಟ್ಟು ಚೀನಾಕ್ಕೆ ತನ್ನ ಕೃತ್ಯವನ್ನು ಸಹಿಸುವುದಿಲ್ಲ ಎಂದು ಕಟುವಾದ ಧ್ವನಿಯಲ್ಲಿ ವಿವರಿಸುವ ಸಮಯ ಬಂದಿದೆ," ಎಂದು ಕಾಂಗ್ರೆಸ್ ಹೇಳಿದೆ.

ಸರ್ಕಾರವನ್ನು ಪ್ರಶ್ನೆ ಮಾಡಿದ ಅಸಾದುದ್ದೀನ್ ಓವೈಸಿ

ಸರ್ಕಾರವನ್ನು ಪ್ರಶ್ನೆ ಮಾಡಿದ ಅಸಾದುದ್ದೀನ್ ಓವೈಸಿ

ಇದರ ಮಧ್ಯೆ ಅರುಣಾಚಲ ಪ್ರದೇಶದ ಘರ್ಷಣೆಯ ಬಗ್ಗೆ ಸರ್ಕಾರವು ಸಂಸತ್ತಿಗೆ ಏಕೆ ತಿಳಿಸಲಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನೆ ಮಾಡಿದ್ದಾರೆ. ಅರುಣಾಚಲ ಪ್ರದೇಶದಿಂದ ಬರುತ್ತಿರುವ ವರದಿಗಳು ಆತಂಕಕಾರಿಯಾಗಿವೆ ಎಂದು ಅಸಾದುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ. ಭಾರತ ಮತ್ತು ಚೀನಾ ಸೈನಿಕರ ನಡುವೆ ಭಾರಿ ಘರ್ಷಣೆ ನಡೆದಿದ್ದು, ಸರ್ಕಾರ ದೇಶವನ್ನು ದಿನಗಟ್ಟಲೆ ಕತ್ತಲಲ್ಲಿಟ್ಟಿದೆ. ಸಂಸತ್ತು ಅಧಿವೇಶನ ನಡೆಯುತ್ತಿರುವಾಗ ಏಕೆ ತಿಳಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಭಾರತೀಯ ಯೋಧರ ಬಗ್ಗೆ ಕೇಜ್ರಿವಾಲ್ ವಂದನೆ

ಭಾರತೀಯ ಯೋಧರ ಬಗ್ಗೆ ಕೇಜ್ರಿವಾಲ್ ವಂದನೆ

ಈ ಘಟನೆಯ ವಿವರಗಳೇನು ಹಾಗೂ ಘರ್ಷಣೆಗೆ ಕಾರಣವೇನು? ಗುಂಡು ಹಾರಿಸಲಾಗಿದೆಯೇ ಅಥವಾ ಗಾಲ್ವಾನ್‌ನಂತೆ ಇದೆಯೇ? ಎಷ್ಟು ಸೈನಿಕರು ಗಾಯಗೊಂಡಿದ್ದಾರೆ? ಅವರ ಸ್ಥಿತಿ ಏನು? ಚೀನಾಕ್ಕೆ ಬಲವಾದ ಸಂದೇಶವನ್ನು ಕಳುಹಿಸಲು ಸಂಸತ್ತು ಸೈನಿಕರಿಗೆ ತಮ್ಮ ಸಾರ್ವಜನಿಕ ಬೆಂಬಲವನ್ನು ಏಕೆ ನೀಡಲು ಸಾಧ್ಯವಿಲ್ಲ? ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾರತೀಯ ಸೈನಿಕರ ಶೌರ್ಯಕ್ಕೆ ವಂದನೆ ಸಲ್ಲಿಸಿದರು. ಗಾಯಗೊಂಡ ಭಾರತೀಯ ಸೈನಿಕರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+